ಕರ್ನಾಟಕ ರಾಜ್ಯದಲ್ಲಿ ಸುಮಾರು 80-85 ಸಾವಿರ ಅಂಗಿವಕಲರು ಇರುತ್ತಾರೆ. ಸದರಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಪಂಪಣ್ಣ ನಾಯಕ ಆರೋಪ

ಗಂಗಾವತಿ.: ಗಂಗಾವತಿ ಕೃಷ್ಣ ದೇವರಾಯ ಸರ್ಕಲ್‌  ಬಸವೇಶ್ವರ ಪುತಳಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ಅಂಗವಿಕಲ ಕ್ಷೇತ್ರ ತಾಲೂಕು ಘಟಕದಿಂದ ಮಂಗಳವಾರ ಪ್ರತಿಭಟನೆ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ.
ಕರ್ನಾಟಕ ರಾಜ್ಯದಲ್ಲಿ ಸುಮಾರು 80-85 ಸಾವಿರ ಅಂಗವಿಕಲರು ಇರುತ್ತಾರೆ. ಸದರಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಮತ್ತು ಸದರಿ ನಾವು ರಾಜ್ಯದಲ್ಲಿ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಹಳ್ಳಿಯಿಂದ ದಿಲ್ಲಿಯವರಗೆ ಹೋರಾಟ ಮಾಡಿರುತ್ತೇವೆ. ಆದರೂ ಸಹ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ನಮ್ಮ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಹಾಗೂ ಚಳಿಗಾಲ ಅಧಿವೇಶನದಲ್ಲಿ ಮಾತನಾಡಿರುವುದಿಲ್ಲ. ಸರ್ಕಾರವು ನಮ್ಮನ್ನು ಗನಮಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವಿಕಲಚೇತನರಿಗೆ ಪ್ರತಿ ತಿಂಗಳು ಬರುವ ಮಾಸಾಸನವನ್ನು ಹೆಚ್ಚಿಗೆ ಮಾಡಿರುವುದಿಲ್ಲ, ಹಾಗೂ ಈಗಿರುವ ಪ್ರತಿತಿಂಗಳ ಮಾಸಾನವನ್ನು ನಿಗದಿತ ದಿನಂದು ಮಂಜೂರು ಮಾಡುತ್ತಿಲ್ಲ. ಇಂದಿನ ಬೆಲೆ ಏರಿಕೆ ದಿನಮಾನದಲ್ಲಿ ದುಡಿಯಲು ಸಾಧ್ಯವಾಗದ ನಾವುಗಳು ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದಾದರು ಹೇಗೆ? ಅಂಗವಿಕಲರು ಸರ್ಕಾರದಧೀನದಲ್ಲಿದ್ದು ಮೂಲಭೂತ ಸೌಕರ್ಯಗಳನ್ನು ಪಡೆಯಲು ವಂಚಿತರಾಗಿದ್ದಾರೆ.

ಅನುದಾನ ಬಳಕೆ ಮಾಡುವಲ್ಲಿ ತಾರತಮ್ಯ ಆಗುತ್ತಿದ್ದು, ಸರ್ಕಾರದ ಗಮನಕ್ಕೆ ತಂದು ಈ ಕೆಳಗಿನ ಬೇಡಿಕೆಗಳನ್ನು ಪ್ರಾಮಾಣಿಕ ಪ್ರಯತ್ನದಿಂದ ಸರ್ಕಾರ ಪೂರೈಸಬೇಕೆಂದು ತಮ್ಮಲ್ಲಿ ಕೋರಿದೆ. ನಮಗೆ ಮುಖ್ಯವಾದ ಬೇಡಿಕೆಗಳು
ಪ್ರತಿ ತಿಂಗಳ ರೂ.5000/-ಮಾಸಾಶನ ಏಕ ರೂಪದಲ್ಲಿ ಹೆಚ್ಚಳ ಮಾಡಬೇಕು.

ಅಂಗವಿಕಲ ಫಲಾನುಭವಿಗಳಿಗೆ ನಿವೇಶನ ಅಥವಾ ಪ್ರತ್ಯೇಕ ಕಾಲೋನಿ ಕಲ್ಪಿಸಿಕೊಡಬೇಕು. ಪುರಷ ಅಂಗವಿಲರಿಗೂ ರಾಜ್ಯಾದ್ಯಾಂತ ಪ್ರೀ ಬಸ್ ಪಾಸ್ ನೀಡಬೇಕು 2016ನೇ ಕಾನೂನಿನ ಕೆಲವು ನಿಯಮಗಳು ಬಾಕಿ ಇದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು  ಸರಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ವ್ಯವಹರಿಸಲು ಪ್ರತ್ಯೇಕ ಅವಕಾಶ ಕಲ್ಪಿಸಿಕೊಡಬೇಕು. ಸರಕಾರ ಅಂಗವಿಕಲರಿಗೆ ಮೀಸಲು ನೀಡಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಅರ್ಜಿಗಳನ್ನು ಕರೆಯಬೇಕು.
ಅಂಗಿಕಲರ ಕುಟುಂಬಗಳಿಗೆ ಅಂತ್ಯೋದ ಪಡಿತರ ಚೀಟಿಯನ್ನು ಕಡ್ಡಾಯ ಮಾಡಬೇಕು.

ಗಂಗಾವತಿ ನಗರಸಭೆಯಲ್ಲಿ ವಿಕಲಚೇತನರಿಗೆ ಯಾಂಪ್ (ಲಿಫ್ಟ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು) ಗಂಗಾವತಿ ನಗರದ ರೈಲ್ವೇ ಸ್ಟೇಷನಿನಲ್ಲಿ ಸರಿಯಾದ ರೀತಿಯಲ್ಲಿ ರ್ಯಾಂಪ್‌ ವ್ಯವಸ್ಥೆ ಇರುವುದಿಲ್ಲ. ಹೊಸದಾಗಿ ಪರ್ಯಾಯವ್ಯವಸ್ಥೆಯನ್ನು ಮಾಡಬೇಕು.
ತಾಲೂಕ, ಗ್ರಾಮೀಣ, ನಗರ ಪುರ್ನಸತಿ ಕಾರ್ಯಕರ್ತರ ಕನಿಷ್ಟ ವೇತನ ಜಾರಿ ಮಾಡಬೇಕು.
5% ಮೀಸಲಾತಿ ಹಣವನ್ನು ವಯಕ್ತಿಕ ಬಳಕೆಗೆ ಮಾತ್ರ ಮೀಸಲಿಡಬೇಕು.

ಯು.ಡಿ.ಐ.ಡಿ ಕಾರ್ಡ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ವಿತರಿಸಬೇಕು.

ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಾರ್ವನಿಕ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು.

ಪ್ರತ್ಯೇಕ ನಿಗಮ ಮಂಡಳಿಯನ್ನು ಮಾಡಬೇಕು. ಮೇಲ್ಮನೆಯಲ್ಲಿ ಅಂಗವಿಕಲರಿಗೆ ಸ್ಥಾನ ಕಲ್ಪಿಸಿಕೊಡಬೇಕು. ಸರಕಾರಿ ಹುದ್ದೆಗಳಲ್ಲಿ ಅಂದ ಅಂಗವಿಕಲರಿಗೆ ನೀಡುವ ಪ್ರಾದ್ಯನ್ಯತೆ ಸಾಮಾನ್ಯ ಅಂಗವಿಕಲರಿಗೂ ನೀಡಬೇಕು.

ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ  ಅಂಗವಿಕಲರು ಎಸ್.ಸಿ./ಎಸ್.ಟಿಗೆ ಸಮಾನರು ಎಂದು ಉಚ್ಚನ್ಯಾಯಾಲಯ ತೀರ್ಪು ನೀಡಿದ್ದು ಅದನ್ನು ಜಾರಿ ಮಾಡಬೇಕು.

ಸರ್ಕಾರ 5% ಮೀಸಲು ನೀಡಿದಂತೆ ಚುನಾವಣೆಗಳಲ್ಲು ಮೀಸಲು ನೀಡಬೇಕು ಮತ್ತು ಆಯಾ ಕ್ಷೇತ್ರಗಳಲ್ಲಿ ಕಲ್ಪಿಸಿಕೊಡಬೇಕು.

ಸರಕಾರ ಅಂಗವಿಕಲರಿಗೆ ನೀಡುವ ಯಂತ್ರ ಚಾಲಿತ ವಾಹವನ್ನು 5ವರ್ಷದ ಬಳಿಕ ಮತ್ತೊಮ್ಮೆ ನೀಡಬೇಕು. ವಿಕಲಚೇಲ ಚೇತನರಿಗೆ ಬರುವ ಮಾಸಾಸನವನ್ನು ಪ್ರತಿತಿಂಗಳು ತಪ್ಪದೇ ನೀಡಬೇಕು. 2-3 ತಿಂಗಳ ಮಾಸಾಸನವನ್ನು ತಡೆಹಿಡಿಯಬಾರದು.

ಈ ಸಂದರ್ಭದಲ್ಲಿ ಅಂಗವಿಕಲರ ಕ್ಷೇತ್ರ ಜಿಲ್ಲಾಧ್ಯಕ್ಷ ಮಂಜುನಾಥ ಹೊಸಕೇರಾ,ಸಂಘಟನೆಯ ಸದಸ್ಯ ಯಮನೂರಪ್ಪ ಪುಂಡಗೌಡ,ಮರಿಯಪ್ಪ ಮಲ್ಲಾಪೂರು,ಬಸವರಾಜ ಅರಳಿ,ಶಬ್ಬೀರ್ ಹುಸೇನ,ಉಮೇಶ ಕಲ್ಮನಿ,ಹೆಚ್.ಹನುಮಂತಪ್ಪ, ಪಾಲಾಕ್ಷ,ಶಂಕರ್,ಮಂಜುಳಾ ಹಿರೇಮಠ, ಮಣಿಕಂಠ,ಮಂಜುನಾಥ ಸಿದ್ದಿಕೇರಿ ಸೇರಿದಂತೆ ಇತರರು ಇದ್ದರು

error: Content is protected !!