ಗಂಗಾವತಿ.6: ಕೊಪ್ಪಳ ಲೋಕ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ಹಾಲಿ ಲೋಕ ಸಭಾ ಸದಸ್ಯ ಕರಡಿ ಸಂಗಣ್ಣ ಅಥವಾ ಗಂಗಾವತಿ ಮಾಜಿ ಶಾಸಕರು ಪರಣ್ಣ ಮುನವಳ್ಳಿ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಭಾರತೀಯ ಜನತಾ ಪಕ್ಷದ ಟಿಕೆಟ್ ನೀಡಿದರೆ ಬಿ ಜೆ ಪಿ ಸೇರುವೆ ಎಂದು ನಿವೃತ್ತ ಮುಖ್ಯ್ಯೊಪಾಧ್ಯಾಯ ಬಸರಾಜ ಮ್ಯಾಗಳಮನಿ ಪತ್ರಿಕೆಯ ಮೂಲಕ ಹೇಳಿಕೆ ನೀಡಿದ್ದಾರೆ.
ಸಂಗಣ್ಣ ಕರಡಿ ಇವರು ಪ್ರಧಾನಿ ಹಾಗೂ ಕೇಂದ್ರ ಸಚಿವರೊಂದಿಗೆ ನಿಕಟ ಹಾಗೂ ಸತತ ಸಂಪರ್ಕ ಇಟ್ಟುಕೊಂಡು ಉತ್ತಮ ಕಾರ್ಯಗಳನ್ನು ಕ್ಷೆತ್ರಕ್ಕೆ ನೀಡಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು. ವಯಸ್ಸಿನ ಕಾರಣದಿಂದ ಅವರಿಗೆ ಟಿಕೆಟ್ ನೀಡದಿದ್ದರೆ ಗಂಗಾವತಿ ಮಾಜಿ ಶಾಸಕರು ಪರಣ್ಣ ಮುನವಳ್ಳಿಗಂಗಾವತಿ ಕ್ಷೆತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ ಯಾಗಿದ್ದು ಬಡವರು ಬಲ್ಲಿದವರು ಎಂಬ ಭಾವನೆ ಇಲ್ಲದೆ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇರುವ ಇವರಿಗೆ ಟಿಕೆಟ್ ನೀಡಬೇಕು.
ನಾನು ಹಿಂದೆ ವಿವಿಧ ಸಂಘಟನೆಗಳಾದ ಶಿಕ್ಷಕರ ಸಂಘಟನೆ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ,ದಲಿತ ನೌಕರರ ಒಕ್ಕೂಟ, ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿ ಹೀಗೆ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸಂಘಟನೆ ಮಾಡಿದ ಅನುಭವವಿದೆ ಹಾಗೂ ಆಮ್ ಆದ್ಮಿ ಪಾರ್ಟಿ ಕೊಪ್ಪಳ ಜಿಲ್ಲಾ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷನಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ ರಾಜಕೀಯ ಕ್ಷೆತ್ರದ ಅನುಭವವೂವಿದೆ. ಈ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರು,ನನ್ನ ಶಿಷ್ಯ0ದಿರು, ಹಿತೈಷಿಗಳೊಂದಿಗೆ ಬಿ ಜೆ ಪಿ ಪಕ್ಷ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉದ್ದೇಶ ಹೊಂದಿರುತ್ತೇನೆ.ಆದ್ದರಿಂದ ಇವರಿಗೆ ಟಿಕೆಟ್ ನೀಡಬೇಕು.ಇವರಿಗೆ ನೀಡದಿದ್ದರೆ ಮುಂದಿನ ನಿರ್ಧಾರ ನಂತರ ದಿನಗಳಲ್ಲಿ ತಿಳಿಸಲಾಗುವುದು.ಆದ್ದರಿಂದ ನನ್ನ ಅಭಿಪ್ರಾಯವನ್ನು ಬಿ ಜೆ ಪಿ ಹೈಕಮಾಂಡ್ ಪರಿಗಣಿಸಬೇಕು ಎಂದು ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.