ಗಂಗಾವತಿ :ಕರ್ನಾಟಕ ಸರ್ಕಾರ ಇದೇ ತಿಂಗಳ 19-1-2024 ರಂದು ನನ್ನ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಹಿರೇಸೂಳೆಕೆರೆ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿರುತ್ತದೆ.

ಸದರಿ ಪ್ರದೇಶ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿದ್ದು, ಅವುಗಳು ಹಿರೇಸೂಳೆಕೆರೆ, ಹಾಸಗಲ್, ಚಿಲಕಮುಖಿ, ಅರಸಿನಕೆರೆ  ಒಳಗೊಂಡಂತೆ ಸುಮಾರು 2918 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಕರಡಿಯು ಶೆಡ್ಯೂಲ್ ಒಂದು ಪ್ರಾಣಿಯಾಗಿರುತ್ತದೆ. ವನ್ಯಪ್ರಾಣಿಯಾದ ಕರಡಿಯನ್ನು ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.

ಹಿರೇಸೂಳೆಕೆರೆ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿದ ಕರ್ನಾಟಕ ಘನಸರ್ಕಾರದ ಗೌರವಾನ್ವಿತ ಮಾನ್ಯ  ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಹಾಗೂ ಅರಣ್ಯ ಸಚಿವರಾಗಿರುವ ಶ್ರೀ ಈಶ್ವರ ಖಂಡ್ರೆಯವರಿಗೆ ನನ್ನ ಇಡೀ ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಹಿರೇಸೂಳೆಕೆರೆ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಲು ನಿರಂತರ ಹೋರಾಟ ಮಾಡಿದ ಕೊಪ್ಪಳ ಜಿಲ್ಲೆಯ ಜನಪರ ಹೋರಾಟಗಾರರಿಗೆ, ರೈತಪರ ಸಂಘಟನೆಗಳಿಗೆ, ಪರಿಸರ ತಜ್ಞರಿಗೆ, ವನ್ಯಜೀವಿ ತಜ್ಞರಿಗೆ, ಇನ್ನಿತರ ಸಂಘ ಸಂಸ್ಥೆಗಳಿಗೆ ಹಾಗೂ ನನ್ನ ವಿಧಾನಸಭಾ ಕ್ಷೇತ್ರದ ಮಹಾಜನತೆಗೆ ನಾನು ವಿಶೇಷವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.ಶಾಸಕ ಗಾಲಿ ಜನಾರ್ಧನ ರೆಡ್ಡಿ.

error: Content is protected !!