ಗಂಗಾವತಿ: ರಾಜ್ಯ ಸರ್ಕಾರದಿಂದ ವಯೋವೃದ್ಧರಿಗೆ ಸಂಧ್ಯಾ ಸುರಕ್ಷೆ ಯೋಜನೆಯಡಿ ಸೇರಿದಂತೆ ವಿವಿಧ ಯೋಜನೆಯಡಿ ನೀಡಲಾಗುವ ಮಾಶಾಸನ
ಸುಮಾರು 3-4 ತಿಂಗಳಿನಿಂದ ಬಂದಿರುವುದಿಲ್ಲ.
ಮಾಶಾಸನ ಪಾವತಿಗೆ ವಿಳಂಬವಾಗಿರುವುದನ್ನು ಕೂಡಲೇ ಫಲಾನುಭವಿಗಳಿಗೆ ಮಂಜೂರು ಮಾಡುವಂತೆ ಬಿ.ಎಸ್.ಪಿ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಬಿ.ಎಸ್.ಪಿ ಯ ಕೊಪ್ಪಳ ಜಿಲ್ಲಾ ಸಂಯೋಜಕರಾದ ಹುಲಿಗೇಶ ದೇವರಮನಿ ಪ್ರಕಟಣಿಣೆಯಲ್ಲಿ ತಿಳಿಸಿದರು.ಮನವಿ ಸಲ್ಲಿಸಿ ಮಾತನಾಡಿದ. ರಾಜ್ಯ ಸರ್ಕಾರ 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಿಂದ ಸಂಧ್ಯಾ ಸುರಕ್ಷಾ ಯೋಜನೆಯನ್ನು 2007 ರಿಂದ ಮಾಸಾಶನವನ್ನು ಪ್ರಾರಂಭಿಸಲಾಗಿದೆ.

ಸದರಿ ಸಂಧ್ಯಾ ಸುರಕ್ಷ ಯೋಜನೆ ಸೇರಿದಂತೆ ಅಂಗವಿಕಲರ ಭತ್ಯೆ, ವಿಧವಾ ವೇತನ ಯೋಜನೆ ಅಡಿಯಲ್ಲಿ ನಗರದ 27ನೇ ವಾರ್ಡಿನ ಹಿರೇಜಂತಕಲ್‍ನಲ್ಲಿ ನಿವಾಸಿಗಳಾದ ಹುಲಿಗೆಮ್ಮ ತಾಯಿ ಹನುಮಮ್ಮ, ನಾಗಮ್ಮ ಗಂ. ದಿ|| ಮೂಕಪ್ಪ, ನೀಲಮ್ಮ ಗಂ. ಪಾಮಪ್ಪ, ಹುಸೇನಮ್ಮ ಗಂ. ಸಣ್ಣ ಪಾಮಪ್ಪ, ಹನುಮಮ್ಮ ಗಂ. ಹನುಮಂತ,
ಮೆಟ್ರಿ ದುರುಗಮ್ಮ ತಾಯಿ ದುರುಗಮ್ಮ, ಹುಲಿಗೆಮ್ಮ ಗಂ. ಪಕೀರಪ್ಪ ಇವರುಗಳಿಗೆ ಸುಮಾರು 3-4 ತಿಂಗಳಿಂದ ಮಾಶಾಸನ ಬಿಡುಗಡೆಯಾಗಿರುವುದಿಲ್ಲ.
ಫಲಾನುಭವಿಗಳು ಸಂಬಂಧಪಟ್ಟಇಲಾಖೆಗೆ ವಿಚಾರಣೆ ಮಾಡಿದರೆ ನಮ್ಮ ಇಲಾಖೆಗೆ ಸಂಬಂಧವಿರುವುದಿಲ್ಲ
ಎಂದು ಉಡಾಫೆ ಉತ್ತರ ನೀಡಿ ಮತ್ತು ಕೊಪ್ಪಳ ಖಜಾನೆ ಇಲಾಖೆಗೆ ಹೋಗುವಂತೆ ಮಾಹಿತಿ ನೀಡುತ್ತಿದ್ದಾರೆ.
ಇವರುಗಳು ಜಿಲ್ಲಾ ಕೇಂದ್ರಕ್ಕೆ ಹೋಗಲು ಆಗದ ಕಾರಣ ತಹಶೀಲ್ದಾರರೇ ಜಿಲ್ಲಾ ಕೇಂದ್ರಕ್ಕೆ ಪತ್ರ ವ್ಯವಹಾರ ಮಾಡಬೇಕೆಂದು ಮನವಿ ಪತ್ರದ ಮೂಲಕ ತಮ್ಮಲ್ಲಿ
ತಹಶೀಲ್ದಾರರಿಗೆ ವಿನಂತಿಸಲಾಗಿದೆ. ಅಲ್ಲದೇ ಸದರಿ ಫಲಾನುಭವಿಗಳಿಗೆ ಪಿಂಚಣಿ ಹಣವನ್ನು 7 ದಿವಸದೊಳಗಾಗಿ ಬಿಡುಗಡೆ ಮಾಡಬೇಕೆಂದು
ಆಗ್ರಹಿಸಿದರು. ಒಂದು ವೇಳೆ ಪಿಂಚಣಿ ಹಣವನ್ನು ಬಿಡುಗಡೆ ಮಾಡದೇ ನಿರ್ಲಕ್ಷ್ಯವಹಿಸಿದಲ್ಲಿ ನಮ್ಮ ಬಿ.ಎಸ್.ಪಿ ಪಾರ್ಟಿಯಿಂದ ತಹಶೀಲ್ದಾರ
ಕಾರ್ಯಾಲಯದ ಮುಂದೆ ಸಂಧ್ಯಾ ಸುರಕ್ಷಾ ಫಲಾನುಭವಿಗಳೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.