ಚಾಮರಾಜನಗರ :ಯಳಂದೂರು ತಹಶೀಲ್ದಾರ್ ಕಛೇರಿಗೆ ಭೇಟಿ ನೀಡಿ ಇ-ಆಫೀಸ್ ಸಂಪೂರ್ಣ ಅನುಷ್ಠಾನ ಹಾಗೂ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಾಯಿತು. ಇನ್ನೂ ಮುಂದೆ ಸಾರ್ವಜನಿಕರು ತಹಶೀಲ್ದಾರ್ ಕಛೇರಿಗೆ ಸಲ್ಲಿಸುವ ಎಲ್ಲಾ ರೀತಿಯ ಮನವಿಗಳನ್ನು ಇ-ಆಫೀಸ್ ಮುಖಾಂತರವೇ ಸ್ವೀಕರಿಸಿ ಆನ್‌ಲೈನ್ ಮೂಲಕ ಸ್ವೀಕೃತಿ ನೀಡುವ ಬಗ್ಗೆ ಕ್ರಮವಹಿಸಲು ಸೂಚನೆ ನೀಡಲಾಯಿತು.
▪️ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಅರಿವು ಮೂಡಿಸುವ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲಾಯಿತು.
▪️Modernization of Record Rooms ನಿರ್ವಹಣೆ ಸಂಬಂಧ ಸರ್ಕಾರದ ಆದೇಶದಂತೆ ಪ್ರತಿ ಜಿಲ್ಲೆಯಲ್ಲಿಯೂ ಒಂದು ತಾಲ್ಲೂಕು ಕಛೇರಿಯ ರೆಕಾರ್ಡ್ ರೂಂನ ಎಲ್ಲಾ ರೀತಿಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಸಂಬಂಧ ಯಳಂದೂರು ತಹಶೀಲ್ದಾರ್ ಕಛೇರಿಯನ್ನು ಆಯ್ಕೆ ಮಾಡಲಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಗಣಕೀಕರಣಗೊಳಿಸುವ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
▪️ಸರ್ವೆ ಇಲಾಖೆಗೆ ಭೇಟಿ ನೀಡಿ ರೆಕಾರ್ಡ್ ರೂಂ ನಿರ್ವಹಣೆ, ದಾಖಲೆಗಳ ಶೇಖರಣೆ ಮತ್ತು ಎಲ್ಲಾ ದಾಖಲೆಗಳ ಗಣಕೀಕರಣ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
▪️ಉಪ ನೊಂದಣಾಧಿಕಾರಿ ಕಛೇರಿಗೆ ಭೇಟಿ ನೀಡಿ ಕಛೇರಿಯ ಕಾರ್ಯವೈಖರಿ, ದಾಖಲೆಗಳನ್ನು ಪರಿಶೀಲಿಸಲಾಯಿತು ಹಾಗೂ ರೆಕಾರ್ಡ್ ರೂಂ ನಿರ್ವಹಣೆಯನ್ನು ಪರಿಶೀಲನೆ ನಡೆಸಲಾಯಿತು.
#eOffice #RecordRoomModernaization #Chamarajanagar #Yelandur #ChamarajanagarUpdates #RevenueRecords
Chief Minister of Karnataka DIPR Karnataka K Venkatesh Minister Chamarajanagar Vartha Bhavan Krishna Byre Gowda