ಗಂಗಾವತಿ :- ತಮಿಳುನಾಡು ರಾಜ್ಯದ ಕೊಯಿಮುತ್ತೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಯುವ ವ್ಯವಹಾರಗಳ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಹಾಗೂ ತಮಿಳುನಾಡು ರಾಜ್ಯ ಒಲಂಪಿಕ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ತಮಿಳುನಾಡು ರಾಜ್ಯ ವುಶೂ ಅಸೋಸಿಯೇಷನ್ ಸಂಯೋಜಕತ್ವದಲ್ಲಿ ಭಾರತದ ಪ್ರತಿಷ್ಠಿತ ಕ್ರೀಡಾಕೂಟವಾದ ದಕ್ಷಿಣ ಭಾರತದ ಖೇಲೋ ಇಂಡಿಯಾ ಮಹಿಳೆಯರ ವುಶೂ ಲೀಗ್ -24 ಗೆ ಕರ್ನಾಟಕದ ಸ್ಪರ್ಧೆಯಾಗಿ ಗಂಗಾವತಿ ತಾಲೂಕಿನ ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕ್ರೀಡಾಕೂಟದಲ್ಲಿ ಕರ್ನಾಟಕ, ತಮಿಳುನಾಡು,ಕೇರಳ, ಪಾಂಡಿಚೆರಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಐಶ್ವರ್ಯ -45 ಕೆ.ಜಿ ಸಂಶೋ (ಫೈಟ್) ವಿಭಾಗದಲ್ಲಿ ಪವಿತ್ರ -48 ಕೆಜಿ ವಿಭಾಗದಲ್ಲಿ ಮತ್ತು ರುಚಿತಾ -51 ಕೆಜಿ ವಿಭಾಗದಲ್ಲಿ ಆಯ್ಕೆಯಾಗಿರುತ್ತಾರೆ.
ಈ ವೇಳೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜು ಸುಧಾಕರ್ ರವರು ಮಾತನಾಡಿ ದಕ್ಷಿಣ ಭಾರತದ ನಡೆಯುವಂತಹ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ನಮ್ಮ ಸಂಸ್ಥೆಯ ಕ್ರೀಡಾಪಟುಗಳು ಭಾಗಿಯಾಗಿರುವುದು ತುಂಬಾ ಸಂತೋಷಕರ ವಿಷಯ ಈ ಒಂದು ಸುವರ್ಣ ಅವಕಾಶವನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರೊಂದಿಗೆ ಜಯಶಾಲಿಯಾಗಿ ಹೆಚ್ಚಿನ ಮಟ್ಟದ ಸ್ಥಾನಮಾನ ದೊರೆಯಲೆಂದು ವಿದ್ಯಾರ್ಥಿಗಳಿಗೆ ಶುಭ ಕೋರಿರುತ್ತಾರೆ.
ಇದೇ ವೇಳೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಬ್ಯಾಬೇಜ್ ಮಿಲ್ಟನ್ ರವರು ಮಾತನಾಡಿ ಭಾರತದ ಪ್ರತಿಷ್ಠಿತ ಕ್ರೀಡೆಯಾದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಕರ್ನಾಟಕದ ಸ್ಪರ್ಧಿಯಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿರುವುದು ತುಂಬಾ ಸಂತೋಷಕರ ವಿಷಯವಾಗಿದೆ ಜೊತೆಗೆ ಸತತ ಪರಿಶ್ರಮದೊಂದಿಗೆ ಈ ಹಂತಕ್ಕೆ ತಲುಪಲು ಸಾಧ್ಯ ಇನ್ನು ಹೆಚ್ಚಿನ ಪರಿಶ್ರಮದೊಂದಿಗೆ ವಿಜೇತರಾಗಿ ಬರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿರುತ್ತಾರೆ.
ಈ ಸಂದರ್ಭದಲ್ಲಿ ಬೇತಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಗಳಾದ ಹೇಮಾ ಸುಧಾಕರ್, ಅಧ್ಯಕ್ಷರಾದ ರಾಜು ಸುಧಾಕರ್, ಕಾರ್ಯದರ್ಶಿಯಾದ ಬ್ಯಾಬೇಜ್ ಮಿಲ್ಟನ್, ಸದಸ್ಯರಾದ ಸುಜಾತ ರಾಜು ತರಬೇತುದಾರರಾದ ಬಾಬುಸಾಬ್ ರವರು ಇದ್ದರು.