ಕೊಪ್ಪಳ :ನಗರದಲ್ಲಿ ಜ.6 ರಂದು ಹಮ್ಮಿಕೊಳ್ಳಲಾಗಿತ್ತು, ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀ. ನಳೀಲ್ ಅತುಲ್ ಐ.ಎ.ಎಸ್. ಜಿಲ್ಲಾಧಿಕಾರಿಗಳು ಕೊಪ್ಪಳ ಮತ್ತು, ಶ್ರೀಮತಿ ಯಶೋಧಾ ಎಸ್. ವಂಟಗೋಡಿ ರವರು ಜಾಥಾಕ್ಕೆ ಚಾಲನೆ ನೀಡಿದರು.
ಉಪ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನ ನರ್ಸಿಂಗ್, ಗವಿಮಠದ ಆಯುರ್ವೇದಿಕ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಾಥಾವು ಜಿಲ್ಲಾ ಕ್ರೀಡಾಂಗಣದಿಂದ ಹೊರಟು ಬಸ್ ನಿಲ್ದಾಣ, ಅಶೋಕ ಸರ್ಕಲ್, ಬಸವೇಶ್ವರ ವೃತ್ತದ ಮೂಲಕ ಗವಿಮಠ ತಲುಪಿತು. ಗವಿಮಠದಲ್ಲಿ ಜಾಥಾವನ್ನು ಉದ್ದೇಶಿಸಿ, ಗವಿಮಠದ ಶ್ರೀ. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಎಳೆವಯಸ್ಸಿನಿಂದಲೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.