ಚಾಮರಾಜನಗರ :▪️ಮೊದಲು ಜಿಲ್ಲಾ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರಿ ಸಭೆಯಲ್ಲಿ ಹಾಜರಿದ್ದವರಿಗೂ ಸ್ವಾಗತ ಕೋರಿ ಸಭೆ ನಡೆಸಿಕೊಡುವಂತೆ ಕೋರಿದರು.  ನಂತರ ಮಾನ್ಯ ಜಿಲ್ಲಾಧಿಕಾರಿಗಳು ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು ಅದರಂತೆ  ಜಿಲ್ಲಾ ಉದ್ಯೋಗಾಧಿಕಾರಿಗಳು ಯೋಜನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತಾ

▪️ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿರುವ 5 ಯೋಜನೆಗಳಲ್ಲಿ ಈಗಾಗಲೇ 04 ಯೋಜನೆಗಳು ಜಾರಿಯಾಗಿದ್ದು ಈ ದಿನ ಅಂದರೆ ದಿನಾಂಕ: 26.12.2023 ರಂದು ಯುವನಿಧಿ ಯೋಜನೆಯ ನೊಂದಣಿಗೆ ಅಧಿಕೃತವಾಗಿ ರಾಜ್ಯ ಮಟ್ಟದಲ್ಲಿ ಚಾಲನೆ ದೊರೆತಿದ್ದು ಅದರಂತೆ ನೊಂದಣಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

▪️2023ನೇ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರಗೂ ಅಥವಾ ಗರಿಷ್ಟ 02 ವರ್ಷಗಳ ಅವಧಿಯವರೆಗೆ ನೀಡುವ ಯೋಜನೆಯಾಗಿರುತ್ತದೆ ಎಂದು ತಿಳಿಸುತ್ತಾ.

▪️ಪದವಿ/ಡಿಪ್ಲೋಮಾ ಮುಗಿಸಿ 06 ತಿಂಗಳು ಆದರೂ ಉದ್ಯೋಗ ಲಭಿಸದೇ ಇರುವ ಪದವಿಧರರಿಗೆ ಕ್ರಮವಾಗಿ ಪ್ರತಿ ತಿಂಗಳು 3000/- ಮತ್ತು 1500/- ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದು ತಿಳಿಸಿದರು.

▪️ಮುಂದುವರೆದು ಫಲಾನುಭವಿಗೆ 02 ವರ್ಷ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು. ಭತ್ಯೆಯನ್ನು ಡಿಬಿಟಿ ಮುಖಾಂತರ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

▪️ಈ ಯೋಜನೆಗೆ ಉನ್ನತ ವ್ಯಾಸಂಗಕ್ಕೆ ದಾಖಲಾಗಿರುವವರು, ಶಿಶಿಕ್ಷತ ವೇತನವನ್ನು  ಪಡೆಯುತ್ತಿರುವವರು ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವವರು ಹಾಗೂ ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೊಗ ಪಡೆದವರು ಅರ್ಹರಿರುವುದಿಲ್ಲ ಎಂದು ತಿಳಿಸುತ್ತಾ, ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪದವಿಧರರು ಹಾಗೂ ಡಿಪ್ಲೋಮಾ ಪಡೆದವರು  https://sevasindhugs.karnataka.gov.in/  ಗೆ ಭೇಟಿ ನೀಡಿ ಸೇವಾಸಿಂಧು ಕೇಂದ್ರಗಳಲ್ಲಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಕರ್ನಾಟಕ ಒನ್ ಸೇವಾ ಕೆಂದ್ರಗಳಲ್ಲಿ ಯಾವುದೇ ಶುಲ್ಕವಿಲ್ಲದೆ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿ ನೊಂದಣಿಗೆ ಅಗತ್ಯವಿರುವ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿ.ಯು.ಸಿ ಅಂಕಪಟ್ಟಿ ಪದವಿ/ಡಿಪ್ಲೋಮಾ ಪ್ರಮಾಣ ಪತ್ರದೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ಯಾಧಿ ದಾಖಲಾತಿಗಳೊಂದಿಗೆ  ನೊಂದಣಿ ಮಾಡಿಕೊಳ್ಳಬೇಕು ಎಂದು ಸಭೆಗೆ ತಿಳಿಸಿದರು.

▪️ಈ ಸಂಬಂಧ ಜಿಲ್ಲಾಧಿಕಾರಿಗಳು ಮಾತನಾಡುತ್ತಾ ತಮ್ಮ ತಮ್ಮ ಕಾಲೇಜಿನಲ್ಲಿ ಉತ್ತೀರ್ಣರಾದ, ವರ್ಗಾವಣೆ ಪತ್ರ ರವಾನಿಸಿರುವ, ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿಳಾಸ, ದೂರವಾಣಿ ಸಂಖ್ಯೆ, ಇತ್ಯಾಧಿ ಮಾಹಿತಿಗಳನ್ನು ಉದ್ಯೋಗ ವಿನಿಮಯ ಮತ್ತು ಕೌಶಲ್ಯಾಭಿವೃದ್ದಿ ಕಛೇರಿಗೆ ನೀಡಿ ಈ ಯೋಜನೆಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

▪️ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳು ಮಾತನಾಡುತ್ತಾ ಮೇಲ್ಕಂಡ ಮಾಹಿತಿಯ ಆಧಾರದ ಮೇಲೆ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಒನ್‌ ಕೇಂದ್ರಗಳ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ನೊಂದಣಿ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಲು ಗ್ರಾಮ ಪಂಚಾಯಿತ್ ಮಟ್ಟದಲ್ಲಿ ನೌಕರರು/ ಅಧಿಕಾರಿಗಳನ್ನು ಮನೆ ಮನೆಗೆ ಕಳುಹಿಸಿ ಪರಿಶೀಲಿಸಿ ನೊಂದಣಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಲು ಎಲ್ಲರ ಸಹಕಾರನ್ನು ಕೋರಿದರು.

▪️ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡುತ್ತ ಎಲ್ಲಾ ಯೋಜನೆಗಳೂ ಚಾಮರಾಜನಗರ ಜಿಲ್ಲೆ 2 ಮತ್ತು 3 ನೇ ಸ್ಥಾನ ಪಡೆದಿದ್ದು ಈ ಯೋಜನೆಯಲ್ಲಿ ಮಾತ್ರ ಹಿಂದುಳಿದಿದ್ದು ಎಲ್ಲರ ಸಹಕಾರದಿಂದ ಚಾಮರಾಜನಗರ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಸಭೆಗೆ ಸೂಚಿಸಿದರು.

ಸದರಿ ಸಭೆಗೆ ಎಲ್ಲಾ ಸರ್ಕಾರಿ/ ಖಾಸಗಿ/ ಅನುಧಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರುಗಳು, ಸರ್ಕಾರಿ ಇಂಜಿನಿಯರ್ ಕಾಲೇಜ್ ಪ್ರಾಂಶುಪಾಲರು ಮತ್ತು ಡಿಪ್ಲೋಮಾ ಕಾಲೇಜ್ ಪ್ರಾಂಶುಪಾಲರು, ಜಿಲ್ಲಾ ಉದ್ಯೋಗಾಧಿಕಾರಿ/  ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

#ಯುವನಿಧಿ #YuvaNidhi #YuvaNidhiScheme

Chief Minister of Karnataka DIPR Karnataka K Venkatesh Minister Zilla Panchayath Chamarajanagar Chamarajanagar Vartha Bhavan

error: Content is protected !!