ಒಂದು ಪೌರಾಣಿಕ ಕಥೆಯಲ್ಲ ಇದು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹಾರ್ ಸಮಾಜದ ಸತ್ಯ ಕಥೆ

ಗಂಗಾವತಿ :ಗಂಗಾವತಿ ನಗರದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ 206 ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹುಲಗಪ್ಪ ಮಾಗಿ, ಮಾತನಾಡಿ  ಕೋರೆಗಾಂವ್  ವಿಜಯೋತ್ಸವ ಅಂದರೆ ಇದು ಒಂದು ಪೌರಾಣಿಕ ಕಥೆಯಲ್ಲ, ಶೋಷಿತರು ಹಾಗೂ ಮೇಲ್ಜಾತಿಯವರ ಶೋಷಣೆ ವಿರುದ್ಧ, ನಡೆದ ಸತ್ಯ ಕಥೆಯಾಗಿದೆ ಅದರಲ್ಲಿ ಮಹಾರ್ ಜನಾಂಗವು ಭೀಮಾ ತೀರದಲ್ಲಿ ನಡೆದಿದ್ದರಿಂದ ಇಂದು ಮಹಾಜನಾಂಗದ  ಜನವರಿ 1, 1818ರಲ್ಲಿ:  ಕೋರೆಗಾಂವ್ ಭೀಮಾ ಶಿಕ್ರಾಪುರ ಪಟ್ಟಣವು  ಭೀಮಾ ನದಿಯ ದಂಡೆಯ ಮೇಲೆ 500 ಜನ ಮಹರ್ ಸೈನಿಕರು ಸೇರಿಕೊಂಡು 28000  ಸಾವಿರ ಪೇಶ್ವೆಗಳ ಸೈನಿಕರ ವಿರುದ್ಧ ಯುದ್ಧ ನಡೆದಿತ್ತು ಈ ಯುದ್ಧದಲ್ಲಿ ಐದುನೂರು ಮಹಾರ್ ಸೈನಿಕರು ಸೇರಿಕೊಂಡು  28000 ಸಾವಿರ ಪೇಶ್ವೆಗಳ ಸೈನಿಕರನ್ನು ಯುದ್ಧ ಮಾಡಿ ಗೆದ್ದಂತಹ ಇತಿಹಾಸವನ್ನು  ಈ ಕೋರೆಗಾವ್ ವಿಜಯೋತ್ಸವದ ಕದನವನ್ನು ಯಾರಿಗೂ ತಿಳಿದಯಾದ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಲಂಡನ್ ನಲ್ಲಿ ಓದುವ ಸಂದರ್ಭದಲ್ಲಿ  ಹಲೋಸ್ಟೂಲ್ ಎಂಬ  ಇತಿಹಾಸ ತಜ್ಞರು ಈ ಕೋರೆಗಾಂವ್ ವಿಜಯೋತ್ಸವದ ಕುರಿತು ಅಂದಿನ  ಇತಿಹಾಸ ಪುಟದಲ್ಲಿ  ಉಲ್ಲೇಖ ಮಾಡಿರುತ್ತಾರೆ. ಆ ಪುಸ್ತಕವು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಿಕ್ಕ ನಂತರ  ಇಡೀ ಪುಸ್ತಕವನ್ನು ಅಂಬೇಡ್ಕರ್ ಅವರು ಸಂಪೂರ್ಣವಾಗಿ ಓದಿಕೊಂಡು ನಮ್ಮ ಮಹಾರ್ ಜನಾಂಗವು ನಾವು  ಹುಟ್ಟುವುದಕ್ಕಿಂತ ಮುಂಚೇನೆ  ಅತ್ಪೃಶ್ಯತೆ ಬಗ್ಗೆ ಇಷ್ಟೊಂದು ಕದನ ನಡೆದಿದೆ ಎಂದು ಅವರಿಗೆ ಮನವರಿಕೆಯಾಗಿ ತಿಳಿಯುತ್ತದೆ ಆಗ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಲ್ಲಿಂದ ಪುಣೆಯ ವವಿವ್ಯದಿಕ್ಕಿನ ಕಡೆಗೆ  ಭೀಮಾ ನದಿಯ ದಂಡೆಗೆ ಕೋರೆಗಾಂವ್ ಗ್ರಾಮಕ್ಕೆ ಬಂದು   ಅ ಪೇಶ್ವೆಗಳ ವಿರುದ್ಧ  ಹೋರಾಡುವ ಸಮಯದಲ್ಲಿ 28 ಜನರು ನಮ್ಮ ಮಹಾರ್ ಸೈನಿಕರು ವೀರ ಮರಣ ಹೊಂದಿದ ಸಂದರ್ಭದಲ್ಲಿ ವಿಜಯಸ್ತಂಭವನ್ನು  ಜನವರಿ 1818ರಲ್ಲಿ ವಿಜಯೋತ್ಸವವನ್ನು ಸ್ಥಾಪನೆ ಮಾಡಿ ವಿಜಯೋತ್ಸವ ಆಚರಣೆ ಮಾಡುತ್ತಾರೆ.

  ಅವತ್ತಿನಿಂದ  ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಜನವರಿ ಎಂದು ತಮ್ಮ ಕುಟುಂಬ ಸಮೇತ ಆ ಕೋರೆಗಾಂವ್ ವಿಜಯೋತ್ಸವಕ್ಕೆ ಭೇಟಿ ನೀಡಿ ವಿಜಯೋತ್ಸವವನ್ನು ಆಚರಣೆ ಮಾಡುತ್ತಿದ್ದರು ಅದೇ ರೀತಿಯಾಗಿ ಇಂದು ನಾವು ಗಂಗಾವತಿನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ  ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಲವಾದಿ ಹಿರಿಯ ಮುಖಂಡರಾದ ದೊಡ್ಡ ಬೋಜಪ್ಪ ಮತ್ತು ಹಿರಿಯ ಮುಖಂಡ ಹುಲಗಪ್ಪ ಮಾಸ್ತರ್. ಜೈ ಶಂಕರ ವಿಭಾಗಿಯ ಪ್ರಧಾನ ಕಾರ್ಯದರ್ಶಿಗಳು, ಹುಸೇನಪ್ಪ ಹಂಚಿನಾಳ ವಕೀಲರು ಹೊನ್ನೂರಪ್ಪ ಡಾಣಾಪುರ್. ಹುಲಿಗೇಶ ದೇವರಮನಿ    ಮಾರ್ಕಂಡೇಯ ಸೋಮನಾಳ ವೀರೇಶ್ ಆರತಿ ತಿಮ್ಮಣ್ಣ ಹಂಚಿನಾಳ ಫಕೀರಪ್ಪ ಪಂಪಾಪತಿ ಸಿದ್ದಾಪುರ ರಮೇಶ್ ಮಾಗಿ ಬಸವರಾಜ ಪೂಜಾರಿ ನರಸಿಂಹಲು ಸೀರೆದಂತೆ ಇತರರು ಮುಖಂಡರು ಭಾಗವಹಿಸಿದರು

error: Content is protected !!