ಕೊಪ್ಪಳ : ಜಿಲ್ಲಾ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ದದೇಗಲ್ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗದವರಿಗೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ಎಸ್.ಸಿ., ಎಸ್.ಟಿ ವರ್ಗದವರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಅಡಿಯಲ್ಲಿ ಕಂಪನಿಗಳಿಗೆ ಸಂಬಂಧಿಸಿದ ವಿವಿಧ ಕೋರ್ಸಗಳಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ, ಐಟಿಐ, ಪಿಯುಸಿ, ಡಿಪ್ಲೋಮ್, ಬಿಇ ಮುಗಿಸಿರುವ ವಿದ್ಯಾರ್ಥಿಗಳಿಗೆ ಏಕಸ್ ಟಾಯ್ ಕ್ಲಸ್ಟರ್‌ಗೆ ಮತ್ತು ವಿವಿಧ ಕಂಪನಿಗಳಿಗೆ ಸಂಬಂಧಿಸಿದ ವಿವಿಧ ಕೋರ್ಸಗಳಿಗೆ ಆಸಕ್ತ ನಿರುದ್ಯೋಗಿ ಯುವಕ ಮತ್ತು ಯುವತಿಯರು ಅರ್ಜಿಯನ್ನು ಸೆಪ್ಟೆಂಬರ್ 20ರ ಒಳಗಾಗಿ ಸಲ್ಲಿಸಬೇಕು.
Application ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಯೋಜನೆಯ ಅನುಸಾರ ಪ್ರಮಾಣ ಪತ್ರ ನೀಡಲಾಗುವುದು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಅಡಿಯಲ್ಲಿ ತರಬೇತಿ ಹೊಂದುವ ಎಸ್.ಸಿ., ಎಸ್.ಟಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಸಹ ನೀಡಲಾಗುವುದು. *ಕೋರ್ಸಗಳ ವಿವರ:* ಪಿಸಿಬಿ ಸಾಲ್ಡ್ರಿಂಗ್, ಮೌಲ್ಡ್ ಮ್ಯಾನುಪ್ಯಾಕ್ಚರಿಂಗ್ ಟೇಕ್ನಿಷಿಯನ್, ಮೌಲ್ಡ್ ಮೆಂಟೆನೆನ್ಸ್ ಟೇಕ್ನಿಷಿಯನ್, ವೆಲ್ಡರ್/ಫಿಟ್ಟರ್, ವೆಲ್ಡರ್, ಫಿಟ್ಟರ್, ಸಿಎನ್‌ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಸಿಎನ್‌ಸಿ ಟರ್ನಿಂಗ್ ಮಷಿನ್ ಆಪರೇಟರ್, ಕನ್ವೆನ್ಸನಲ್ ಮಿಲ್ಲಿಂಗ್ ಮಷಿನ್ ಆಪರೇಟರ್, ಕನ್ವೆನ್ಸನಲ್ ಲೇಥ್ ಮಷಿನ್ ಆಪರೇಟರ್, ಸಿಎನ್‌ಸಿ ಪ್ರೋಗ್ರಾಮಿಂಗ್ ಮತ್ತು ಆಪರೇಶನ್, ಪ್ರೋಡಕ್ಸನ್ ಇಂಜಿನಿಯರ್ ಕ್ಯಾಡ್, ಕ್ಯಾಮ್, ಈ ಎಲ್ಲಾ ಕೋರ್ಸ್ಗಳ ತರಬೇತಿ ಅವಧಿ 3 ತಿಂಗಳು ಇರುತ್ತದೆ. ಟೂಲ್ ರೂಮ್ ಮಷಿನಿಸ್ಟ್ ಕೋರ್ಸ್ಗೆ ಅವಧಿ ಒಂದು ವರ್ಷವಾಗಿದ್ದು, ಈ ಎಲ್ಲಾ ಕೋರ್ಸುಗಳಿಗೆ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ., ಐಟಿಐ, ಡಿಪ್ಲೋಮ, ಪಿಯುಸಿ ಅಥವಾ ಮೆಕಾನಿಕಲ್ ವಿಭಾಗದಲ್ಲಿ ಬಿ.ಇ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ಅಥವಾ ಪ್ರಾಂಶುಪಾಲರು, ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್ ಕೊಪ್ಪಳ, ದೂ.ಸಂ; 7507094445, 9986088894 ಹಾಗೂ 9902397658 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.