ಕನಕಗಿರಿ :ಕನಕಗಿರಿ ವಿಧಾನಸಭಾ ಕ್ಷೆತ್ರದ ಕನಕಗಿರಿ ಮಂಡಲದ ವತಿಯಿಂದ *ರಾಜ್ಯಾದ್ಯಂತ ಬರಗಾಲ ಪರಿಸ್ಥಿತಿ ಮತ್ತು ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ರೈತರಿಗೆ ಮೋಸ ಮಾಡಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಜಿಲ್ಲೆಗೊಂದು ಗೋಶಾಲೆ ಹಿಂಪಡುವಿಕೆ.
ರೈತರ ಆತ್ಮಹತ್ಯೆಯನ್ನು ತಡೆಹಿಡಿಯುವಲ್ಲಿ ವಿಫಲತೆ ಮತ್ತು ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ ಸರ್ಕಾರ ಹಾಗೂ ರೈತರ ಇನ್ನೂ ಹಲವಾರು ಯೋಜನೆಗಳನ್ನು ರದ್ದುಗೊಳಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ* ಮಾನ್ಯ ಕನಕಗಿರಿ ತಹಶೀಲ್ದಾರ್ ಇವರ ಮುಖಾಂತರ *ಗೌರವಾನ್ವಿತ ರಾಜ್ಯದ ರಾಜ್ಯಪಾಲರಿಗೆ ಕನಕಗಿರಿ ಕ್ಷೆತ್ರದ ರೈತರ ಪರವಾಗಿ ಮಂಡಲದ ರೈತ ಮೋರ್ಚಾದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಸಜ್ಜನ್, ಪ್ರ. ಕಾರ್ಯದರ್ಶಿಗಳಾದ ವಾಗೀಶ್ ಹಿರೇಮಠ ಮತ್ತು ಗ್ಯಾನಪ್ಪ ಗಾಣದಾಳ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸಣ್ಣ ಕನಕಪ್ಪ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ರಾಜಾಶರತ್ ಚಂದ್ರ ನಾಯಕ, ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ಶಿವಾನಂದ ವಂಕಲಕುಂಟ, ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ,ಮುಖಂಡರಾದ ಹನುಮೇಶ್ ಯಲಬುರ್ಗಿ, ಪ್ರಕಾಶ ಹಾದಿಮನಿ, ಬಿ ವಿ ಜೋಶಿ,ವಿರೇಶ್ ಕಡಿ, ಪಕೀರಪ್ಪ ಪೂಜಾರ್, ಮಂಜುನಾಥ್ ರೆಡ್ಡಿ, ರವಿ ಸಜ್ಜನ್,ಸುಭಾಸ್ ಕಂದಕೂರ್,ಯಂಕಾರೆಡ್ಡಿ ಮೋದಿ,ಅರುಣ್, ರುದ್ರಪ್ಪ, ಹರೀಶ್ ಪೂಜಾರ್,ಅಂಬ್ರೆಷ್ ಪಟ್ಟಣಶೆಟ್ಟಿ, ಪ್ರಶಾಂತ್ ಬತ್ತದ,ಪಾಷಾಸಾಬ್ ಮುಲ್ಲಾರ್,ರವಿ ಪಾತ್ರದವರ,ನವಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವರೆಡ್ಡಿ ಆದಾಪುರ, ಯುವ ಮೋರ್ಚಾ ಅಧ್ಯಕ್ಷರಾದ ನರಸಪ್ಪ ನಾಯಕ, ಪ್ರ. ಕಾರ್ಯದರ್ಶಿ ವಿನಾಯಕ ಚಿತ್ತರಕಿ, ದುರುಗಪ್ಪ ಗೊರಳಕೇರಿ, ವೆಂಕಟೇಶ್ ಪೂಜಾರ್, ದುರುಗಪ್ಪ ಲಕಂಪುರ,ಹಾಗೂ ಇನ್ನೂ ಅನೇಕರು ರೈತ ಭಾಂದವರು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು ….