ಕಾರಟಗಿ : ಸೆ.07. ತಾಲೂಕಿನ ಮುಷ್ಟೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಪಾಲಕರು ಪಾಲ್ಗೊಂಡು ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷಗಳನ್ನು ಹಾಕಿ ಸಂಭ್ರಮ ಪಟ್ಟರು.

ಈ ಕಾರ್ಯಕ್ರಮವನ್ನು ತರಗತಿ ಶಿಕ್ಷಕ ವೃಂದ
ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.

ಈ ಕಾರ್ಯಕ್ರಮದ ಕುರಿತು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜಗದೀಶ ಮಡಿವಾಳರ ಮಾತನಾಡಿ : ಮಕ್ಕಳು ಕೇವಲ ಓದಿನ ಬಗ್ಗೆ ಗಮನ ಹರಿಸದೇ ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಸುವಂತೆ ಪ್ರೆರೇಪಿಸಬೇಕು ಆಗ ಮಕ್ಕಳ ಸರ್ವೋತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ನಂತರ ಶಾಲಾ ಶಿಕ್ಷಕರು ಮಾತನಾಡಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ ಮತ್ತು ಶ್ರೀ ಕೃಷ್ಣರ ಬಾಲ ಲೀಲೆಗಳ ಜೊತೆಗೆ ಭಗವದ್ಗೀತೆ ರಚನೆ ಕುರಿತು ಕೂಡ ತಿಳಿಸಿಕೊಟ್ಟರು ಇಂದಿಗೂ ಭಗವದ್ಗೀತೆಯ ಶ್ಲೋಕಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿರುವುದು ಕುರಿತು ಮಾಹಿತಿಯನ್ನು ನೀಡಿದರು.

ಈ ವೇಳೆ ಶಾಲಾ ಶಿಕ್ಷಕರು, ಮುದ್ದು ಮಕ್ಕಳು,ಎಸ್ ಡಿ ಎಮ್ ಸಿ ಸದಸ್ಯರು, ಅಯ್ಯಪ್ಪ ತಾತ ಶ್ನೆಹಿತರ ಬಳಗದವರು, ಶಿಕ್ಷಣ ಪ್ರೇಮಿಗಳು, ಊರಿನ ಗ್ರಾಮಸ್ಥರು ಇದ್ದರು.

error: Content is protected !!