ಗಂಗಾವತಿ :ನಗರದ ಹೊಸಳ್ಳಿ ರಸ್ತೆಯಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದಲ್ಲಿನ ಡಿ ದೇವರಾಜ್ ಅರಸ್ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ ವಿದ್ಯಾರ್ಥಿಗಳ ವಸತಿ ನಿಲಯದ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.

ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದು ತಮ್ಮ ಹಕ್ಕುಳಿಗೆ ಹೋರಾಟ ನಡೆಸಿದ ನಂತರ ಎರಡು ದಿನ ಮಾತ್ರ ಸರಕಾರಿ ಮೆನು ಪ್ರಕಾರ ಊಟೋಪಚಾರ ನೀಡಲಾಗುತ್ತಿದೆ. ಬಳಿಕ ಶುಚಿ ಹಾಗೂ ರುಚಿ ಇಲ್ಲದ ಅಡುಗೆಯನ್ನು ನೀಡಲಾಗುತ್ತಿದೆ. ಅಡುಗೆ ತಯಾರಿಸಲು ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನು ನೀಡುತ್ತಿಲ್ಲ. ಸ್ವಲ್ಪ ಪ್ರಮಾಣ ಮಾತ್ರ ವಿತರಿಸಲಾಗುತ್ತದೆ.

ವಸತಿ ನಿಲಯದ ವಿದ್ಯಾರ್ಥಿಗಳನ್ನು ತಾಲೂಕು ವಿಸ್ತರಣಾಧಿಕಾರಿಗಳ ತಮ್ಮ ಮನೆಯ ತೋಟದ ಕೆಲಸವನ್ನು ಮಾಡುವುದಕ್ಕೆ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳು ತಮಗೆ ಆದ ಅನ್ಯಾಯವನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರೆ ಆ ದಿನ ವಿದ್ಯಾರ್ಥಿಗಳಿಗೆ ಉಪವಾಸವೇ ಗತಿ.

ಶಿವರಾಜ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಉಸ್ತುವಾರಿ ಸಚಿವರು ನಿಮ್ಮದೇ ಇಲಾಖೆಯ ನಿಮ್ಮದೇ ತವರು ಜಿಲ್ಲೆಯ ಸ್ಥಿತಿ ಹೀಗಾದರೆ ಇನ್ನು ಬೇರೆ ಜಿಲ್ಲೆಗಳ ಗತಿ ಏನು.

ಈ ಘಟನೆಯ ಬಗ್ಗೆ ತಾಲೂಕು ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದರೆ ಅದೇ ವಸತಿ ನಿಲಯದ ವಾರ್ಡನ್ ನ್ನು ಸಮರ್ಥಿಸಿಕೊಂಡಿದ್ದಾರೆ ಅವರು ಯಾವುದೇ ತಪ್ಪು ಮಾಡುವುದಿಲ್ಲ. ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ.

ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಹಸಿದ ಕಂದಮ್ಮಗಳಿಗೆ ಊಟ ಹಾಕುತ್ತಾರೋ ಕಾದು ನೋಡಬೇಕಾಗಿದೆ.

ಬಾಕ್ಸ್

ಡಿ ದೇವರಾಜ್‌ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಳಪಡುವ ಡಿ ದೇವರಾಜ್‌ ಅರಸ್ ಹಿಂದುಳಿದ ವರ್ಗಗಳ ಹಾಸ್ಟೆಲ್ ನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ಮಾಧ್ಯಮಕ್ಕೆ ತಿಳಿಸಿದರು.”
“ಶಿವರಾಜ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ಬಾಕ್ಸ್
ಹಾಸ್ಟೆಲ್ ನಲ್ಲಿ ನಡೆದಿರುವ ಘಟನೆಯನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಈ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಅಧಿಕಾರಿ ವಿಜಯ ಕುಮಾರ್ ಪಾಟೀಲ್ ತಿಳಿಸಿದರು.

error: Content is protected !!