ಕೊಪ್ಪಳ ಸೆಪ್ಟೆಂಬರ್ 05 ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಭೌದ್ಧರು, ಸಿಖ್ಖರು ಮತ್ತು ಫಾರ್ಸಿ ಸಮುದಾಯದವರಿಗೆ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರುವ 18 ರಿಂದ 55 ವರ್ಷವಯೋಮಿತಿವುಳ್ಳ ಆಸಕ್ತರಿಂದ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶ್ರಮಶಕ್ತಿ ಸಾಲ ಯೋಜನೆ: ಈ ಯೋಜನೆಯಡಿಅಲ್ಪಸಂಖ್ಯಾತ ವರ್ಗದ ಕುಲಕಸಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ದಿಸಿಕೊಂಡು ಅದೇ ಕಸುಬನ್ನು ಮುಂದುವರಿಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಗೊಳಿಸುವ ಸಲುವಾಗಿ ನಿಗಮದಿಂದ ಶೇ.4ರ ಬಡ್ಡಿದರದಲ್ಲಿ 50,000 ರೂ.ವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಶೇ. 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ,50ರಷ್ಟು ಹಣವನ್ನು ಬ್ಯಾಕ್ ಆ್ಯಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುವುದು.
.ಫಲಾನುಭವಿಯುತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇ.50ರಷ್ಟು ಬ್ಯಾಕ್ ಆ್ಯಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 4,50,000 ರೂ.ಗಳನ್ನು ಮೀರಬಾರದು.
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ವಿಧವೆಯರು, ವಿಚ್ಚೇದಿತರು, ಸವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ವಿವಿಧ ಚಟುಚಟಿಕೆಗಳನ್ನು ಕೈಗೊಳ್ಳಲು 25,000 ರೂ. ಸಾಲ ಮತು 25,000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 4,50,000 ರೂ.ಗಳನ್ನು ಮೀರಬಾರದು.
ವೃತ್ತಿ ಪ್ರೋತ್ಸಾಹಯೋಜನೆ: ಈ ಯೋಜನೆಯಡಿ ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಹೈನುಗಾರಿಕೆ, ಎಳನೀರು, ಕಬ್ಬಿನ ಹಾಲು, ತಂಪು ಪಾನಿಯಾ, ಬೇಕರಿ, ಲ್ಯಾಂಡ್ರಿ, ಡ್ರೈಕ್ಲಿನಿಂಗ್, ಎಸಿ ರಿಪೇರಿ, ರಪ್ರೇಜರೇಟರ್, ಮೋಟಾರ್ ರಿವೈಂಡಿಂಗ್ ವರ್ಕ್ಸ, ವಾಟರ ವಾಶ ಸರ್ವಿಸ್, ಪಂಕ್ಚರ್ ಶಾಪ, ಗ್ಯಾಸ ವೆಲ್ಡಿಂಗ್, ಮೆಕ್ಯಾನಿಕಶಾಫ್, ಕಾರ್ಪೆಂಟರ್, ಎಲೇಕ್ಟಿçಕಲ್, ಎಲೇಕ್ಟ್ರಾನಿಕ್ಸ್ ರಿಪೇರಿ, ಇತ್ಯಾದಿ ವೃತ್ತಿಗಳಿಗೆ ಒಟ್ಟು ಸಾಲದ ಮೊತ್ತ ರೂ. 1 ಲಕ್ಷದಲ್ಲಿ ಶೇ 50 ರಷ್ಟು ಸಾಲ ಶೇ 50 ರಷ್ಟು ಸಹಾಯಧನವನ್ನು ನಿಗಮದಿಂದ ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶದವರಿಗೆ 1,03,000 ರೂ. ಮತ್ತು ಗ್ರಾಮಿಣ ಪ್ರದೇಶವರ ಆದಾಯ 81,000 ರೂ.ಗೆ ಮೀರಬಾರದು.
ಗಂಗಾಕಲ್ಯಾಣ ಯೋಜನೆ: ಈ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆ ಭಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ದೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಸಣ್ಣ ಮತ್ತು ಅತಿ ಸಣ್ಣರೈತರಾಗಿರದ್ದು, 1.ಎಕರೆ 20 ಗುಂಟೆಯಿಂದ 5ಏಕರೆ ಖುಷ್ಕಿ ಕೃಷಿ ಜಮೀನು ಹೊಂದಿ ವ್ಯವಸಾಯ ವೃತ್ತಿಯನ್ನು ಅವಲಂಬಿಸಿರಬೇಕು. ಗ್ರಾಮಿಣ ಪ್ರದೇಶದಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 96,000 ರೂ.ಗಳನ್ನು ಮೀರಬಾರದು.
ಸ್ವಾವಲಂಬಿ ಸಾರಥಿ ಯೋಜನೆ (ಟ್ಯಾಕ್ಸಿ / ಗೂಡ್ಸ್ ವಾಹನ ಖರೀದಿಗೆ): ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅಥವಾ ಪಡೆದ ಆಟೋರಿಕ್ಷಾ, ಟ್ಯಾಕ್ಸಿ ಅಥವಾ ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗಳಿಗೆ ವಾಹನದ ಮೌಲ್ಯದ ಶೇ.50ರಷ್ಟು ಅಥವಾ ಗರಿಷ್ಟ 3.00,000 ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡು, ಈ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಚಾಲನಾ ಪರವಾನಿಗೆ ಹೊಂದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 4,50,000 ರೂ.ಗಳನ್ನು ಮೀರಬಾರದು.
ಸಮುಧಯ ಆಧಾರಿತ ತರಬೇತಿ ಯೋಜನೆ: ನಿಗಮದ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗ ಹೊಂದಿರುವ ಯುವಕ, ಯುವತಿಯರಿಗೆ ಸ್ವಂತಉದ್ಯೋಗ, ಕಚೇರಿ, ಕಂಪನಿ, ಕಾರ್ಖನೆಗಳಲ್ಲಿ ಉದ್ಯೋಗದೊರಕಿಸುವ ಸಲುವಾಗಿ ಮಾನ್ಯತೆ ಪಡೆದ ಕೇಂದ್ರಗಳೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ (ಪುರುಷ ಮತ್ತು ಮಹಿಳಿಯರಿಗೆ), ಹೆವಿ ಅರ್ಥ್ ಮೂವರ್‌ತರಬೇತಿ (ಜೆಸಿಪಿ, ಕ್ರೇನ್, ಪೋಕ್ ಲೇನ್ ಸೇರಿದಂತೆ ಭಾರಿ ವಾಹನ ಚಾಲನಾ ತರಬೇತಿ), ಶಾರ್ಟ್ ಹ್ಯಾಂಡ್ ಟ್ರೈನಿಂಗ್, ಭದ್ರತಾ ಸೇವೆಗಳ ತರಬೇತಿಗೆ ಅರ್ಜಿದಾರರ ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶದವರಿಗೆ 1.03,000 ರೂ.ಗಳಿಗೆ ಹಾಗೂ ಗ್ರಾಮಿಣ ಪ್ರದೇಶದವರಿಗೆ 81,000 ರೂ.ಗಳಿಗೆ ಮೀರಬಾರದು.
2023-24 ನೇ ಸಾಲಿನ ಅರಿವು ವಿಧ್ಯಾಭ್ಯಾಸ ಸಾಲ ಯೋಜನೆ (ರಿನ್ಯೂವಲ್): ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ಡಿ-ಸಿಇಟಿ, ಪಿಜಿ-ಸಿಇಟಿ, ನೀಟ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್, ಎಮ್.ಡಿ.ಎಸ್) ದಂತ ವೈದ್ಯಕೀಯ (ಬಿ,ಡಿ.ಎಸ್., ಎಂಡಿ.ಎಸ್) ಆಯುಷ್ (ಬಿ.ಆಯುಷ್, ಎಂ.ಆಯುಷ್) ಇಂಜಿನಿಯರಿAಗ್ & ಟೆಕ್ನಾಲಜಿ (ಬಿ.ಟೆಕ್, ಎಂ.ಟೆಕ್) ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಿ.ಆರ್ಕ, ಎಂ.ಆರ್ಕ್ ಎಂಬಿಎ, ಎಂಸಿಎ, ಎಲ್.ಎಲ್.ಬಿ., ಬಿಎಸ್ಸಿ ಇನ್ ಹಾರ್ಟಿಕಲ್ಚರ್, ಅಗ್ರಿಕಲ್ಚರ್ ಇಂಜೀನಿಯರಿಂಗ್, ಡೈರಿ ಟೆಕ್ನಾಲೊಜಿ, ಫಾರೆಸ್ಟರಿ, ವೆಟರ್ನರಿ & ಅನಿಮಲ್ ಟೆಕ್ನಾಲೊಜಿ, ಫಿಶರೀಸ್, ಸೇರಿಚುಲ್ಟುರೆ, ಹೋಂ/ ಕಮ್ಯೂನಿಟಿ ಸೈನ್ಸಸ್ ಫುಡ್ ನುಟ್ರೀಷನ್ ಅಂಡ್ ಡೀಟೇಟಿಕ್ಸ್, ಬಿ,ಫಾರ್ಮ, ಮ್.ಫಾರ್ಮ ಫಾರ್ಮ.ದ್. ಅಂಡ್ ಡ್.ಫಾರ್ಮಗಳಲ್ಲಿ ಆಯ್ಕೆರಯಾಗಿರುವಂತಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು(ರಿನ್ಯೂವಲ್) ಸಾಲ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದ್ದು, ಆಸಕ್ತರು ವೇಬ್ ಸೈಟ್ kmdconline.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರನ್ನು ಅಥವಾ ದೂರವಾಣಿ:- 08539-225008ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.