ಗಂಗಾವತಿ :ಸಾಮೂಹಿಕ ವಿವಾಹಗಳನ್ನು, ನಡೆಸುವುದು ಅತ್ಯಂತ ಕಷ್ಟಕರ, ಇಂತಹ ಸಂದರ್ಭದಲ್ಲಿ, ಶ್ರೀ ಅಖಂಡೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಜನತೆಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸಾಮೂಹಿಕ ವಿವಾಹಗಳನ್ನು ನಡೆಸುತ್ತಿರುವುದು ಸಂತಸದಾಯಕವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು ಅವರು,

ಸೋಮವಾರ ದಂದು ನಗರಸಭೆ ವ್ಯಾಪ್ತಿಯ 27ನೇ ವಾರ್ಡಿನಲ್ಲಿ ಶ್ರೀ ಅಖಂಡೇಶ್ವರ ದೇವಸ್ಥಾನದ 18ನೆಯ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮತ್ತು ರಥೋತ್ಸವ ಸಮಾರಂಭದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ, ದೇವರ ಹಾಗೂ ಸಮಾಜದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ, ವದು ವರರು, ಸುಖ ಶಾಂತಿ ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ದೇವಪ್ಪ ದೇವರಮನೆ.ಹುಲಿಗೇಶ ದೇವರಮನೆ,, ಮಾಜಿ ನಗರ ಸಭಾ ಸದಸ್ಯ ಸಣ್ಣ ಹುಲಿಗೆಮ್ಮ, ಹಂಪಿ ಹುಲುಗಪ್ಪ.ಕಂಠಪ್ಪ ಹನುವಾಳ, ದೇವಪ್ಪ ಅಯೋಧ್ಯ, ನಾಗರಾಜ, ಇತರರು ಪಾಲ್ಗೊಂಡಿದ್ದರು, ಇದಕ್ಕೂ ಪೂರ್ವದಲ್ಲಿ ದೇವಸ್ಥಾನದ ಅರ್ಚಕರು, ಶ್ರೀ ಅಖಂಡೇಶ್ವರ ಮೂರ್ತಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

error: Content is protected !!