ಕೊಪ್ಪಳ :ಬಿಜೆಪಿ ಕರ್ನಾಟಕ ಹಾಗೂ ಬಿಜೆಪಿ ಗಂಗಾವತಿ ಇವರ ಸಹಬಾಗಿತ್ವದಲ್ಲಿ, ಗಂಗಾವತಿ ನಗರದ ವಾಡ್೯ ನಂಬರ್ 24 ರ ಬೂತ್ ಸಂಖ್ಯೆ 180 ರಲ್ಲಿ ಇಂದು ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಶಾಸಕರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿ, ಪ್ರತಿಯೊಬ್ಬ ಕಾರ್ಯಕರ್ತರು ಚುಣಾವಣೆ ಹಿತದೃಷ್ಟಿಯಿಂದ ತಮ್ಮ ತಮ್ಮ ಬೂತ್ ಗಳ ಉಸ್ತುವಾರಿ ವಹಿಸಿಕೊಂಡು, ಮೇರಾ ಬೂತ್ ಸಬ್ಸೆ ಮಜ್ಬೂತ್ ಎನ್ನುವ ಶಿರ್ಷಿಕೆಯಡಿ ಸಂಘಟನೆ ಮಾಡುವ ಮೂಲಕ ರಾಜ್ಯದಲ್ಲಿ ಭಾರತಿಯ ಜನತಾ ಪಾರ್ಟಿ ಪ್ರಚಂಡ ಬಹುಮತದಿಂದ ಹಾರಿಸಿ ತರಬೇಕೆಂದು ತಿಳಿಸಿದರು.

ನಂತರ ವಾರ್ಡಿನಲ್ಲಿನ ಜಗಜ್ಯೋತಿ ಬಸವಣ್ಣನವರ ದೇವಸ್ಥಾನಕ್ಕೆ ಭೇಟಿ ನೀಡಿ ನಮಸ್ಕರಿಸಿ,ಪ್ರಮುಖರೊಂದಿಗೆ ಸಂಚರಿಸಿ, ಮನೆಯ ಮೇಲೆ ಬಿಜೆಪಿ ಧ್ವಜವನ್ನ ಸ್ಥಾಪಿಸಿ, ಸರ್ಕಾರದ ಸಾಧನೆಗಳನ್ನ ಸಾರ್ವಜನಿಕರಿಗೆ ಮಾಹಿತಿ ನೀಡಿ, ನಂತರ ವಾರ್ಡಿನ ಕುಂದು ಕೊರತೆಗಳನ್ನ ಆಲಿಸಿ, ಪಕ್ಷದ ಪರ ಪ್ರಚಾರ ಕೈಗೊಂಡರು

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ್, ಬಿಸಿ ಮೋರ್ಚ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಅಮರಜ್ಯೋತಿ, ನಗರ ಮಂಡಲ ಅಧ್ಯಕ್ಷರಾದ ಶ್ರೀ ಕಾಶಿನಾಥ ಚಿತ್ರಗಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಧೂಳ, ಸಂಗಯ್ಯಸ್ವಾಮಿ ಸಂಶಿಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಮನೋಹರ್ ಗೌಡ ಹೇರೂರು, ಶಿವಪ್ಪ ಮಾದಿಗ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ರಾಚಪ್ಪ ಸಿದ್ದಾಪುರ, ನಗರ ಯುವಮೋರ್ಚ ಅಧ್ಯಕ್ಷರಾದ ವೆಂಕಟೇಶ್, ಮುಖಂಡರಾದ ಹನುಮಂತಪ್ಪ ನಾಯಕ, ವಿಠ್ಠಪ್ಪ ತಳಕಲ್, ಪರುಶುರಾಮ್ , ಮಹಿಳಾ ಮೋರ್ಚ ಪಧಾದಿಕಾರಿಗಳು, ಪಕ್ಷದ ಹಿರಿಯರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!