ಬಳ್ಳಾರಿ :ರಾಜಕೀಯ ಚುನಾವಣಾ ಕಾರ್ಯಕ್ರಮವನ್ನು ಆರಂಭಿಸುವ ಪೂರ್ವದಲ್ಲಿ ಹಾಲುಮತ ಹಿರಿಯರ ಮನೆಗೆ ತೆರಳಿ ಆಶೀರ್ವಾದವನ್ನು ಪಡೆದುಕೊಂಡೆ ಪ್ರಚಾರಕಾರ್ಯವನ್ನು ಆರಂಭಿಸುವ ಒಂದು ಸಂಪ್ರದಾಯವನ್ನು ನಾನು ಮೊದಲಿನಿಂದಲೂ ಹಾಕಿಕೊಂಡು ಬಂದಿದ್ದೇನೆ.

ಅದೇ ಪ್ರಕಾರವಾಗಿ ನಾನು ಈಗಾಗಲೇ ಘೋಷಿಸಿರುವ “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ”ದ ಬಾವುಟದ ಪ್ರಕಟಣೆಯನ್ನು ಮತ್ತು ಚುನಾವಣಾ ಪ್ರಚಾರ ಕಾರ್ಯದ ಆರಂಭವನ್ನು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬೆಣಕಲ್ಲು ಗ್ರಾಮದಿಂದ ಆರಂಭಿಸಿದ್ದು ಹಾಲುಮತಸ್ತರ ಮನೆಗೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ಅವರು ತೆರಳಿದಾಗ ಇಡೀ ಗ್ರಾಮದ ಜನತೆ ಒಂದಾಗಿ ಅವರನ್ನು ಸ್ವಾಗತಿಸಿ ತಮ್ಮ ಮನೆಯ ಮಗಳಂತೆ ಸತ್ಕರಿಸಿ, ಗಂಟೆಗಳ ಕಾಲ ಅವರೊಡನೆ ಕಳೆದು ಅವರಿಗೆ ಬೆನ್ನು ತಟ್ಟಿ ಶುಭಾಶಯ ಕೋರುವದಲ್ಲದೆ, ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ, ನಿಮಗೆ ವಿಜಯವಾಗಲಿ, ನೀವು ಕಂಡಿರುವ ಕನಸು ನನಸಾಗಲಿ,ನಾವೆಲ್ಲರೂ ಬಂಡೆಯಂತೆ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತೇವೆ ಎಂದು ಅಲ್ಲಿ ಸೇರಿದ್ದ ಪ್ರತಿಯೊಬ್ಬ ಮಹಿಳೆಯರು, ಹಿರಿಯರು ಆಶೀರ್ವಾದ ಮಾಡಿದ್ದು ನನಗೆ ಎಲ್ಲಿಲ್ಲದ ಸಂತೋಷವನ್ನು ತಂದಿದೆ.ಎಂದು ಗಾಲಿ ರೆಡ್ಡಿ ಮಾಧ್ಯಮ ದವರ ಜೊತೆ ಹಂಚಿ ಕೊಂಡರು

ನನಗೆ ಮೊದಲಿನಿಂದಲೂ ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಜನತೆ ಸದಾ ಬೆಂಬಲವಾಗಿ ನಿಲ್ಲುತ್ತಾ ಬಂದಿದ್ದಾರೆ. ಬೆಣಕಲ್ ಗ್ರಾಮಕ್ಕೆ ನಾನು ಹಿಂದೆಯೂ ಅನೇಕ ಬಾರಿ ತೆರಳಿದ್ದೇನೆ. ಅಲ್ಲಿನ ಜನರ ಮಾತೆ ಅಂತದ್ದು, ಒಂದು ಬಾರಿ ಮಾತು ಕೊಟ್ಟರೆ ಮಾತು ತಪ್ಪುವವರಲ್ಲ.

ಇಂದು ಬೆಳಿಗ್ಗೆ ಮನೆ ಮುಂದೆ ಗೋಪೂಜೆ ಯನ್ನು ಮಾಡಿ ಬೆಣಕಲ್ಲು ಗ್ರಾಮಕ್ಕೆ ತೆರಲಿದೆ. ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆರಂಭಿಸಲು ಕಾರಣೀಬೂತರಾದ  ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಮತ್ತು ಬೇಣಕಲ್ಲು ಗ್ರಾಮದ ಜನತೆಗೆ ನಾನು ವಿಶೇಷವಾದ ಧನ್ಯವಾದ ಅರ್ಪಿಸುತ್ತೇನೆ.

ಹೊಸ ವರ್ಷದ ದಿನದಂದೇ ಪ್ರಾರಂಭವಾದ ಈ ಹೊಸ ಹೆಜ್ಜೆ ಕಾರ್ಯಕ್ರಮಗಳು ಸದಾ ಮುಂದುವರಿಯಲಿ. ನಿಮ್ಮೆಲ್ಲರ ಆಶೀರ್ವಾದ ಪಕ್ಷದ ಮೇಲಿರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

error: Content is protected !!