
ಕೊಪ್ಪಳ ಜನವರಿ 02 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ್, ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ ಕರ್ನಾಟಕ ರಾಜ್ಯ ಜೀವನೋಪಾಯ ಸಂಪನ್ಮೂಲ ವಿಭಾಗ, ತಾಲೂಕು ಅಭಿಯಾನ ನಿರ್ಹಹಣಾ ಘಟಕ, ತಾಪಂ ಯಲಬುರ್ಗಾ ಇವರ ಆಶ್ರಯದಲ್ಲಿ ಡಿಸೆಂಬರ್ 31ರಂದು ಯಲಬುರ್ಗಾದ
ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆಯಿತು.
ತೋಟಗಾರಿಕೆ ಇಲಾಖೆ, ಯಲಬುರ್ಗಾದ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸಹಾಯಕ ನಿರ್ದೇಶಕರು
ಮಾಸಿಕ ಸಂತೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಉದಯಕುಮಾರ್, ವಲಯ ಮೇಲ್ವಿಚಾರಕರಾದ ಶರಣಪ್ಪ, ಬ್ಲಾಕ್ ಎಂಟರ್ಪ್ರೈಸಸ್ ಎಕ್ಸಿಕ್ಯೂಟಿವ್ ಜಾಕಿರ್ ಹುಸೇನ್, ಮುದೋಳ ಎಂಬಿಕೆಯ ಮಲ್ಲಿಕಾಬಿ ಎಸ್ ತಾಳಕೇರಿ, ಎಂಬಿಕೆ ಶಿಲ್ಪ ಮಹಾಂತಮ್ಮ ಬೇಬಿ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶು ಸಖಿ, ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
*ಮಾಸಿಕ ಸಂತೆಯಿಂದ ಅನುಕೂಲ:* ಫಿನಾಯಿಲ್ ದಂತಹ ವಸ್ತುಗಳಿಗೆ ಹಳ್ಳಿಗಳಲ್ಲಿ ಬೇಡಿಕೆ ಕಡಿಮೆ ಇರುತ್ತದೆ. ಹೀಗಾಗಿ ನಾವು ತಯಾರಿಸಿದ ವಸ್ತುಗಳ ಮಾರಾಟಕ್ಕೆ ಮಾಸಿಕ ಸಂತೆಯಿಂದ ಸಹಾಯವಾಗುತ್ತಿದೆ ಎಂದು ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಸದಸ್ಯೆ ಹಾಗೂ ಕೃಷಿ ಉದ್ಯೋಗ ಸಖಿಯಾಗಿರುವ ಸಂಗನಹಾಲದ ಹೇಮಾ ತಳವಾರ ಅವರು ಪ್ರತಿಕ್ರಿಯಿಸಿದರು.