ಗಂಗಾವತಿ:ಪಟ್ಟಣದಲ್ಲಿ ಅಂಬೇಡ್ಕರ್ ಸರ್ಕಲ್ ಮುಂದೆ ದಲಿತ ಸಂಘಟನೆಗಳ ಸಯುಕ್ತ ವೇದಿಕೆಯಲ್ಲಿ ಕೊರೆಗಾವ್ ವಿಜಯೋತ್ಸವ ಆಚರಣೆ ಮಾಡಿ ಹುಲುಗಪ್ಪ ಮಾಗಿ ಮಾತನಾಡಿ
ಭಾರತ ದೇಶದಲ್ಲಿ ದೇಶ ಭಾಷೆ ಮತ್ತು ಸಿರಿ ಸಂಪತ್ತಿಗಾಗಿ ಹಲವು ರಾಜಾಧಿರಾಜರು ಭೂಮಿ ಮೇಲೆ ಯುದ್ಧ ಮಾಡಿರುವುದನ್ನು
ಇತಿಹಾಸದಲ್ಲಿ ದಾಖಲಾಗಿದೆ.

ಆದರೆ ಭಾರತ ದೇಶದಲ್ಲಿ ಕಂಡು ಕಾಣರಿಯದಂತಹ ಸ್ವಾಭಿಮಾನದ ಇತಿಹಾಸವನ್ನು ಭೂಗರ್ಭದಿಂದ
ಹೆಕ್ಕೆ ತೆಗೆದ ಕೀರ್ತಿ ಭಾರತ ರತ್ನ ಭೇದಿ ಸತ್ವ ಡಾಕ್ಟರ್ ಭೀಮರಾವ್ ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ.


01 ಜನೇವರಿ 1818 ನೇ ಇಸವಿಯಲ್ಲಿ ನಡೆದ ಭೀಮಾ ಕೊರೇಗಾಂವ್ ವಿಜಯೋತ್ಸವ.ಭಾರತ ದೇಶದಲ್ಲಿ ಮನಸ್ಕೃತಿ ಸಂವಿಧಾನದಿಂದ ಸಮ ಸಮಾಜವನ್ನು ಒಡೆದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿತು. ಇದರಿಂದಾಗಿ ಭಾರತವೆಲ್ಲ ಹೊಡೆದು ಚೂರು ಚೂರಾಗಿ ಹೋಗಿತ್ತು. ಇದಕ್ಕೆಲ್ಲ ಮನಸ್ಮೃತಿ ಹೊಂದಿರುವಂತಹ ಬ್ರಾಹ್ಮಣತ್ವವೇ ಕಾರಣ ಎಂದು ಹೇಳಿದರು

ಅದೇ ರೀತಿಯಾಗಿ ಯಮನೂರ್ ಭಟ್  ಮಾತನಾಡಿ  ಹಿಂದಿನ ಇತಿಹಾಸದ ಪ್ರಕಾರ ಮಹಾರಾಷ್ಟ್ರದಲ್ಲಿ ಅತ್ಯಾಚಾರಗಳು ಕೊಲೆಗಳು ದರೋಡೆಗಳು ಹೆಚ್ಚಾಗಿ ಹೋಗಿತ್ತು ಅಲ್ಲಿನ ಮೂಲ ನಿವಾಸಿಗಳು ಈ ಎಲ್ಲಾ ವಿಷಯವನ್ನು ಒಂದನೇ ಬಾಜಿರಾಯ
ಗಮನಕ್ಕೆ ತಂದರೂ ಸಹ ಅವೆಲ್ಲವನ್ನು ನೀವುಗಳು ಅನುಭವಿಸಲೇಬೇಕು ಎಂಬ ಉಡಾಫೆ ಉತ್ತರವನ್ನ ಕೊಟ್ಟರು.


ಭಾರತ ದೇಶಕ್ಕೆ ಆಗ ತಾನೆ ವ್ಯಾಪಾರಕ್ಕೆಂದು ಬ್ರಿಟಿಷರು ಬಂದಿದ್ದರು ಈ ಎಲ್ಲಾ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ಬ್ರಿಟಿಷರು ಪೇಶ್ವೇಗಳ ವಿರುದ್ಧ ಯುದ್ಧ ಸಾರಿ ಪೇಶ್ವೇಗಳ ಆಡಳಿತವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದುಕೊಂಡು ಆಡಳಿತ ನಡೆಸುವ ಸಂಚು ರೂಪಿಸಿದ್ದರು.

ಈ ವಿಷಯವನ್ನ ಗುಪ್ತವಾಗಿ ತಿಳಿದುಕೊಂಡ ಒಂದನೇ ಬಾಜಿರಾಯ ಎಂಬ ರಾಜನಿಗೆ ಸಂಚಿನ ಸುದ್ದಿ ಮುಟ್ಟಿಸಲು ಹೋದ ಸಿದ್ಧನಾಕನನ್ನು ಆಸ್ಥಾನದಲ್ಲಿ ಮುಖಕ್ಕೆ ಉಗಿದು ಅವನನ್ನ ಹೀಯಾಳಿಸುತ್ತಾ ಅಸ್ಪೃಶ್ಯ ಜಾತಿಯವನಾದ ನೀನು ನನ್ನ ಆಸ್ಥಾನಕ್ಕೆ ಬಂದಿದ್ದು ಮೊದಲನೇ ತಪ್ಪು ನಿನ್ನನ್ನ ಒಳಗಡೆ ಬಿಟ್ಟ, ದ್ವಾರಪಾಲಕನನ್ನು ಗಲ್ಲಿಗೇರಿಸಲು ಆದೇಶವಿಟ್ಟನು ಮತ್ತು ನಿಂತ ಸ್ಥಳವನ್ನು ಅಪವಿತ್ರವಾಗಿದೆ ಗೋಮೂತ್ರಗಳಿಂದ ಸುಚಿಗೊಳಿಸಲು ಅಲ್ಲಿನ ಸೈನಿಕರಿಗೆ ತಿಳಿಸಿದನು ಎಲ್ಲಾ ಅವಮಾನಗಳನ್ನು ಅನಿಸಿಕೊಂಡು ಸಪ್ಪೆ ಮೊರೆ ಹಾಕಿಕೊಂಡು ಕೇರಿಯ ಕಡೆ ಹೊರಟು ಹೋದನು.

ರಾಜನ ಆಸ್ಥಾನದಲ್ಲಿ ನಡೆದಿರುವ ಎಲ್ಲಾ ವಿಷಯವನ್ನು ಮತ್ತು ಅವಮಾನವನ್ನು ತನ್ನ ಅಸ್ಪೃಶ್ಯ ಸಮುದಾಯಗಳ ಜನರಿಗೆ ತಿಳಿಸಿದನು.ಬ್ರಿಟಿಷರಿಗೂ ಸಹ ಸಿದನಾಕ ನನ್ನ ಅವಮಾನಿಸಿದ ವಿಷಯವು ಸಹ ತಿಳಿಯಿತು. ಆಗ ಬ್ರಿಟಿಷರುಸಿದ್ಧನಾಕನನ್ನ ಭೇಟಿಯಾಗಿ ಸಿದ್ಧನಾಕನು

ತನಗೆ ಆಗಿರುವ ಅವಮಾನವನ್ನೆಲ್ಲಾ ವಿವರಿಸಿದನು ಆಗ ಬ್ರಿಟಿಷರು ನಮ್ಮ ಜೊತೆ ಸೇರಿ ಬಾಜಿರಾಯನ ವಿರುದ್ಧ ಯುದ್ಧ ಮಾಡುವ ಎಂದು ಸಹಾಯ ಕೇಳಿದರು ಸತತ ದೌರ್ಜನ್ಯ ದಬ್ಬಾಳಿಕೆ ಅತ್ಯಾಚಾರ ಕೊಲೆ ಇಂತಹ ಆಡಳಿತದಿಂದ ಬೇಸತ್ತು ಜೀವಂತ ಶವಗಳಂತೆ ಬದುಕಿದ್ದರು.

ಸಹಾಯ ಕೇಳಿದ ಬ್ರಿಟಿಷರನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೇವಲ ಆತ್ಮ ಗೌರವಕ್ಕಾಗಿ ಮಕ್ಕಳ ಭವಿಷ್ಯಕ್ಕಾಗಿ ಸಹಾಯ ಮಾಡಲು ಒಪ್ಪಿಕೊಂಡರು.ಯುದ್ಧಕ್ಕೆ 500 ಜನ ತಯಾರಾದರು ಒಂದನೇ ಬಾಜಿರಾಯನ ವಿರುದ್ಧ ಯುದ್ಧವನ್ನು ಬ್ರಿಟಿಷರು ಘೋಷಣೆ ಮಾಡಿಯೇ ಬಿಟ್ಟರು. 30,000ರಿಂದ 40,000 ಜನರನ್ನು ಒಳಗೊಂಡ ಅಶ್ವಗಜ ಪಡೆ ಕಾಲಾಳು ಒಳಗೊಂಡ ಬಲಿಷ್ಠ ಸೈನ್ಯದ ವಿರುದ್ಧ ಕೇವಲ 500 ಜನ ಮಹರ್ ಸೈನಿಕರು ಯುದ್ಧ ಮಾಡುವುದೆಂದರೆ ಸುಲಭದ ಮಾತಲ್ಲ.

ಸತ್ತರೂ ಸರಿಯೇ ಯುದ್ಧವನ್ನು ಮಾಡಿಯೇ ತೀರುತ್ತೇವೆ ಎಂದು ಪಣತೊಟ್ಟ ಮಹರ್ ಸೈನಿಕರ ಶೌರ್ಯ ಮೆಚ್ಚಲೇಬೇಕು ಮಹರ್ ಸೈನಿಕರು ಕಾಲ್ನಡಿಗೆಯಲ್ಲಿ ಹಗಲು ರಾತ್ರಿ ಎನ್ನದೆ ಹೀಗೆ ನಡೆದುಕೊಂಡು ಬಂದು ದಣಿವಾರಿಸಿಕೊಳ್ಳದೆ ಕೊರೇಗಾಂವ್ ಎಂಬ ಊರಿನ ಭೀಮಾ ನದಿಯ ದಂಡೆಗೆ ಯುದ್ಧಕ್ಕೆ ಮುನ್ನುಗ್ಗಿ ಸತತ ಮೂರು ದಿನ ನಂತರ ಯುದ್ಧವನ್ನು ಜಯಿಸಿ ಭೀಮಾ ನದಿಯನ್ನು ರಕ್ತಮಯವಾಗಿಸಿದರು 30 ರಿಂದ 40 ಸಾವಿರ ಪೇಶ್ವೇಗಳ ಸೈನಿಕರು ಸೋತು ಸುಣ್ಣವಾಗಿ ಜೀವ ಉಳಿಸಿಕೊಳ್ಳಲು ಓಡಿ ಹೋದರು.

ಈ ಮಹರ್ ಸೈನ್ಯದಲ್ಲಿ 21 ಜನ ವೀರ ಮರಣವನ್ನು ಅಪ್ಪಿದರೂ 1818 ಜನವರಿ 01ನೇ ತಾರೀಖಿನ ಈ ವಿಜಯೋತ್ಸವದ
ಸ್ಮರಣಾರ್ಥಕವಾಗಿ ಕೊರೇಗಾಂವ್ ಗ್ರಾಮದಲ್ಲಿ ಸ್ಮಾರಕವನ್ನು ನಿರ್ಮಿಸಿ ಬ್ರಿಟಿಷ್ ಅಧಿಕಾರಿಗಳೇ ಗೌರವ ಸೂಚಿಸಿರೋದನ್ನ ಗಮನಿಸಿದರೆ ಭಾರತೀಯ ಮೂಲ ನಿವಾಸಿಗಳ ಶೌರ್ಯ ಮೆಚ್ಚುವಂತೆ ಇಂತಹ ಸ್ಥಳಕ್ಕೆ ಭಾರತ ದೇಶದ ಮಹಾನ್ ನಾಯಕ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ತಪ್ಪದೇ ಜನವರಿ ಒಂದನೇ ತಾರೀಖಿಗೆ ಗೌರವವನ್ನು ಸೂಚಿಸುತ್ತಿದ್ದರು.

ಅದಕ್ಕಾಗಿ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಹೇಳಿರಬೇಕು. ಹಾಗಾಗಿ ನಾವೆಲ್ಲರೂ ಸೇರಿಕೊಂಡು ಸ್ವಾಭಿಮಾನಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ
ಸೈನಿಕರಿಗೆ ಗೌರವವನ್ನು ಸೂಚಿಸುತ್ತಾ ಹೊಸ ವರ್ಷವನ್ನು ಆಚರಿಸೋಣ. ಎಂದು ಹೇಳಿದರು

ಈ ಸಂದರ್ಭದಲ್ಲಿ ದಲಿತ  ಮುಖಂಡರಾದ ಕೆ ಅಂಬಣ್ಣ. ಕುಂಟೋಜಿ ಮರಿಯಪ್ಪ ದೊಡ್ಡ ಭೋಜಪ್ಪ  ವಿರೇಶ್ ಆರತಿ ಹುಲುಗೇಶ್ ವೆಂಕಟೇಶ್ ಚಲವಾದಿ ಹುಲುಗಪ್ಪ ಮಾಸ್ತರ ಬಸವರಾಜ ಮರಿಸ್ವಾಮಿ ಸೇರಿದಂತೆ ಇನ್ನು ಅನೇಕ ಮುಖಂಡರು ಮತ್ತು ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು

error: Content is protected !!