ಗಂಗಾವತಿ :ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಡ್ಡರಹಟ್ಟಿ, ಹೇರೂರು ಹಾಗೂ ಸಂಗಾಪೂರ ಗ್ರಾಮ ಪಂಚಾಯತಿ ಕಾರಟಗಿ ತಾಲೂಕಿನ ಬರಗೂರು, ಸಿದ್ದಾಪೂರ,ಬೆನ್ನೂರು ಹಾಗೂ ಮರ್ಲಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಎಲ್ಲಾ ಗ್ರಾಮ ಪಂಚಾಯತಿ ಗಳಿಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್‌ (ಜೆಜೆಎಂ)ಯೋಜನೆಯಡಿಯಲ್ಲಿ ಭಾರೀ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಇದನ್ನೂ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಸಂಬಂಧಪಟ್ಟ ಗುತ್ತಿಗೆದಾರರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಪಂಚಾಯತ ಅಧಿಕಾರಿ ಗಳಿಗೆ ಒತ್ತಾಯ.

ಕೇಂದ್ರ ಸರ್ಕಾರವು ಪ್ರತಿಯೊಬ್ಬರ ಜನರ ದಾಹವನ್ನು ತೀರಿಸಲು ಕೋಟಿ,ಕೋಟಿ ಹಣವನ್ನು ಮಂಜೂರು ಮಾಡಿದ್ದು ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಇಲ್ಲಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡು, ಜನರಿಗೆ ಯಾಮಾರಿಸಿ ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ವಹಿಸಿರುತ್ತಾರೆ. ಕೆಲವು ಕಡೆ ಈ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸದೇ ಬಿಲ್‌ ಪಾವತಿ ಮಾಡಿಕೊಂಡಿರುವುದಲ್ಲದೇ ಸರ್ಕಾರದ ಸುತ್ತೋಲೆ ಪ್ರಕಾರ ಭೂಮಿಯಿಂದ 25 ಅಡಿ ಆಳ ಮತ್ತು ಅಗಲ 2 ಆಡಿ ಅಳೆಯಬೇಕಾಗಿದ್ದು, ಆದರೆ ಇದಾವುದನ್ನು ಮಾಡದೇ ಮೇಲ್ಮಟ್ಟದಲ್ಲಿ ಅಗೆದು ಜನರು ದಿನನಿತ್ಯ ಓಡಾಡುವ ದಾರಿಯನ್ನು ಕೆಡಿಸಿಬಿಟ್ಟು, ಜನರ ಓಡಾಟಕ್ಕೆ ಉಪಯೋಗವಾಗದ ರೀತಿಯಲ್ಲಿ ಮಾಡಿದ್ದು. ಎಲ್ಲೆಂದರಲ್ಲಿ ತಮಗೆ ಅನುಕೂಲವಾದಲ್ಲಿ ದಾರಿಯನ್ನು ಹಗೆದು ಜನರ ಸಂಚಾರಕ್ಕೆ ತೊಂದರೆಗೀಡುಮಾಡಿದ್ದಾರೆ.

ಮನೆ ಮನೆಗೆ ನಲ್ಲಿಗಳನ್ನು ಸಂಪರ್ಕಗೊಳಿಸದೇ ಕೆಲವು ಮನೆಗಳನ್ನು ಬಿಟ್ಟು ಕೆಲವು ಬೀದಿ- ಕೇರಿಗಳನ್ನು ಬಿಟ್ಟು ತಮಗೆ ಅನುಕೂಲವಾದ ಏರಿಯಾಗಳಲ್ಲಿ ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ವಹಿಸಿರುತ್ತಾರೆ.

ಸರ್ಕಾರದ ಆದೇಶದ ಪ್ರಕಾರ ಸಿ.ಪಿ.ಐ ಅಥವಾ ಹಚ್.ಡಿ.ಪಿ.ಐ ಅಂತಹ ಗುಣಮಟ್ಟದ ಪೈಪ್‌ ಗಳನ್ನು ಬಳಸಬೇಕಾಗಿದ್ದು ಆದರೆ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕಡಿಮೆ ಬೆಲೆ ಬಾಳುವ ಪೈಪು ಮತ್ತು ಸಾಮಾಗ್ರಿಗಳನ್ನು ಖರೀದಿ ಮಾಡಿ ಒಂದು ವರ್ಷಕ್ಕೆ ಕೂಡ ಬಾಳಕೆ ಬಾರದ ರೀತಿಯಲ್ಲಿ ಕಳಪೆ ಕಾಮಗಾರಿಯನ್ನು ಪೂರೈಸಿಕೊಂಡು ಬಿಲ್ ಪಾಸ್ ಮಾಡಿಕೊಂಡಿರುತ್ತಾರೆ.

ಇದರಿಂದ ಈ ಗ್ರಾಮಗಳಲ್ಲಿ ದಿನನಿತ್ಯ ಓಡಾಡುವ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು,ಕೆಲವು ಕಡೆ ಅಗೆದ ಗುಂಡಿಗಳನ್ನು ಹಾಗೇಯೆ ಬಿಟ್ಟಿರುವುದರಿಂದ ಸಿ.ಸಿ ರೋಡ್ ಮತ್ತು ಮಣ್ಣಿನ ರೋಡ್ ತೆಗ್ಗು ಗುಂಡಿಗಳಿಂದ ರಾರಾಜಿಸುತ್ತಿವೆ.

ಕಾಮಗಾರಿ ಮುಗಿಯುತ್ತ ಬಂದರುಕೂಡ ಒಂದು ನಲ್ಲಿಗಳಿಗೆ ಕೂಡ ನೀರು ಸರಬರಾಜು ಆಗ್ತಾಇಲ್ಲ ಹಾಗಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ರೈತರು, ಕೂಲಿ ಕಾರ್ಮಿಕರು, ದುಡಿಯುವ ವರ್ಗದವರು, ಜನ ಸಾಮಾನ್ಯರು ದಿನನಿತ್ಯ ಓಡಾಡಲು ಮತ್ತು ಸಂಚರಿಸಲು ಬಹಳಷ್ಟು ತೊಂದರೆಯನ್ನುಂಟು ಮಾಡುತ್ತಿದೆ.

ಇದರಿಂದ ಈ ಭಾಗದ ಜನರು ರೋಷಿಹೋಗಿದ್ದಾರೆ. ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡಿರುವುದಲ್ಲದೇ ಸರ್ಕಾರದ ಹಣವನ್ನು ಲೂಟಿ ಮಾಡಿರುವುದಲ್ಲದೇ, ಜನ ಸಾಮಾನ್ಯರಿಗೆ ತೊಂದರೆ ಮಾಡಿರುವ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವದರೊಂದಿಗೆ ಈ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ಯಾಗಬೇಕುದು ಸರ್ಕಾರದ ಬೊಕ್ಕಸವನ್ನು ನಷ್ಟ ಮಾಡಿದ ಕಬಳಿಸಿದ ಹಣವನ್ನು ಸರ್ಕಾರಕ್ಕೆ ಹಿಂದುರಿಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮಾವಾದ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಒತ್ತಾಯ.

ಒಂದು ವೇಳೆ ಈ ವಿಷಯದ ಬಗ್ಗೆ ತನಿಖೆ ಮಾಡಲು ವಿಳಂಬ ಮಾಡಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಕಛೇರಿಗಳ ಮುಂಭಾಗದಲ್ಲಿ ಉಗ್ರವಾದ ಹೋರಾಟ ಮತ್ತು ಪ್ರತಿಭಟನಾ ಧರಣಿಯನ್ನು ಮಾಡಲಾಗುವುದು ಎಂದು ಈ ದೂರಿನ ಮೂಲಕ ಒತ್ತಾಯ.

ಈ ಸಂದರ್ಭದಲ್ಲಿ ಹೆಚ್.ವಸಂತಕುಮಾರ ಕಟ್ಟಿಮನಿ ಜಿಲ್ಲಾಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ಆ‌ರ್ ಚನ್ನಬಸವ ಮಾ ಜಿಲ್ಲಾ ಮಾಧ್ಯಮ ಸಲಹೆಗಾರರು
ದೇವಣ್ಣ ಸಂಗಪೂರ ಜಿಲ್ಲಾ ಸಂಘಟನಾ ಸಂಚಾಲಕರು ಡಿಎಸ್‌ಎಸ್‌ ಕೊಪ್ಪಳ.

error: Content is protected !!