ತುಳಸಿ ಗಿಡವನ್ನು ರವಿವಾರದ ದಿನ ಮುಟ್ಟಬಾರದು. ಮುಟ್ಟಾದಾಗ ಮುಟ್ಟಬಾರದು. ರವಿವಾರದ ದಿನ ತುಳಸಿ ಎಲೆ ಕೀಳಬಾರದು ಅಂತಾ ಹೇಳಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದ್ರೆ ಯಾಕೆ ರವಿವಾರದ ದಿನ ಯಾಕೆ ತುಳಸಿ ಎಲೆಯನ್ನು ಕೀಳಬಾರದು ಅಂತಾ ತಿಳಿಯೋಣ ಬನ್ನಿ..
ಭಾನುವಾರ ಎಂದರೆ, ಸೂರ್ಯನ ವಾರ. ಹಾಗಾಗಿ ಆ ದಿನ ಸೂರ್ಯನ ಶಾಖ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಜನ ಮನೆಯಲ್ಲಿ ನೆಮ್ಮದಿಯಾಗಿರಲಿ. ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಆ ದಿನ ರಜೆ ಇರುತ್ತದೆ. ಯಾಕಂದ್ರೆ ಆ ದಿನ ಜನರ ದೇಹದಲ್ಲಿ ಎಂದಿಗಿಂತ ಹೆಚ್ಚು ಉಷ್ಣತೆ ಇರುತ್ತದೆ. ಇನ್ನು ತುಳಸಿ ಗಿಡದಲ್ಲೂ ಉಷ್ಣತೆ ಹೆಚ್ಚಾಗಿರುತ್ತದೆ.
ಮನುಷ್ಯದ ದೇಹದಲ್ಲಿರುವ ಉಷ್ಣತೆ ಮತ್ತು ತುಳಸಿಯ ಉಷ್ಣತೆ ಸೇರಿಸಿದರೆ, ತುಳಸಿಯ ಉಷ್ಣತೆ ಹೆಚ್ಚಾಗಿ, ತುಳಸಿ ಗಿಡ ಬಾಡಿ ಹೋಗುತ್ತದೆ. ತುಳಸಿಯನ್ನು ಭಾನುವಾರ ತಿಂದರೆ, ನಮ್ಮ ದೇಹದ ಉಷ್ಣತೆ ಹೆಚ್ಚಿ, ನಾವು ಅನಾರೋಗ್ಯಕ್ಕೀಡಾಗಬಹುದು. ಹಾಗಾಗಿ ರವಿವಾರದ ದಿನ ತುಳಸಿ ಗಿಡ ಮುಟ್ಟಬಾರದು. ತುಳಸಿ ಎಲೆ ಕೀಳಬಾರದು, ತುಳಸಿಯನ್ನು ತಿನ್ನಬಾರದು ಅಂತಾ ಹೇಳಿರುವುದು.
ಅಲ್ಲದೇ, ಪ್ರತಿದಿನ ತುಳಸಿ ತಿನ್ನಬಾರದು. ದಿನಕ್ಕೆ ಎರಡು ತುಳಸಿ ಎಲೆ ತಿನ್ನುವುದು ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದೇ ರೀತಿ ಪ್ರತಿದಿನ ತುಳಸಿ ಎಲೆ ತಿನ್ನದಿರುವುದು ಉತ್ತಮ. ಹಾಗಾಗಿ ರವಿವಾರದ ದಿನ ತುಳಸಿ ಎಲೆ ತಿನ್ನಬಾರದು ಅಂತಾ ಹೇಳಲಾಗಿದೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಯನ್ನು ಭಾನುವಾರ ಸೇವಿಸಿದರೆ, ಜೀರ್ಣಕ್ರಿಯೆ ಸಮಸ್ಯೆ ಉತ್ಪತ್ತಿಯಾಗುತ್ತದೆ. ಮತ್ತು ದೇಹದ ಸಮತೋಲನ ಹಾಳಾಗುತ್ತದೆ.
ಇನ್ನು ಸೂರ್ಯಾಸ್ತವಾದ ಮೇಲೆ, ಅಂದ್ರೆ ಸಂಜೆ ಹೊತ್ತು ತುಳಸಿ ಎಲೆಯನ್ನು ಕೀಳಬಾರದು ಮತ್ತು ತಿನ್ನಬಾರದು ಅಂತಾ ಹೇಳಲಾಗಿದೆ. ಏಕೆಂದರೆ, ಸೂರ್ಯಾಸ್ತವಾದ ಬಳಿಕ ತುಳಸಿ ಎಲೆಯಲ್ಲಿ ಮತ್ತು ಗಿಡದಲ್ಲಿ ಯಾವುದೇ ಶಕ್ತಿ ಇರುವುದಿಲ್ಲ. ಹಾಗಾಗಿ ಈ ವೇಳೆ ತುಳಸಿ ಎಲೆಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನೂ ಪ್ರಯೋಜನವಿಲ್ಲ. ಹಾಗಾಗಿ ಸಂಜೆ ತುಳಸಿ ಎಲೆ ತಿನ್ನಬಾರದು ಅಂತಾ ಹೇಳಲಾಗುತ್ತದೆ.