ಗಂಗಾವತಿ:ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮರಳಿ ಟೋಲ್ ಗೇಟ್ ಮತ್ತು ಕನಕಗಿರಿ ರಸ್ತೆಯಲ್ಲಿರುವ ಟೋಲ್ ಗೇಟ್ ಹಾಗೂ ಹೇಮಗುಡ್ಡ ಪಕ್ಕದಲ್ಲಿರುವ ಟೋಲ್ ಗೇಟ್ ಗಳ ಈ ಮೂರು ಟೋಲ್ ಗೇಟಗಳು ಸರ್ಕಾರದ ಆದೇಶದ ಪ್ರಕಾರ ಯಾವುದೇ ನೀತಿ ನಿಯಮಗಳನ್ನು ಪಾಲಿಸದೇ, ಸರ್ಕಾರದ ಪರವಾನಿಗೆಯನ್ನು ಪಡೆಯದೇ ಟೋಲ್ ಅಕ್ರಮವಾಗಿ ನಡೆಸುತ್ತಿದ್ದಾರೆ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೆಚ್ಚು. ವಸಂತ ಕುಮಾರ್ ಕಟ್ಟಿಮನಿ ಜಿಲ್ಲಾಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಾತನಾಡಿ.
ಸರ್ಕಾರದ ಆದೇಶದ ಪ್ರಕಾರ ಯಾವುದೇ ರಸ್ತೆಯಲ್ಲಿ ನೀವು ವಾಹನದಲ್ಲಿ ಸಂಚರಿಸುವಾಗ ಟೋಲ್ ಗೇಟ್ ಸಿಕ್ಕಿದರೆ, ಅಲ್ಲಿನ ಸಿಬ್ಬಂದಿ ಒಂದಾ ಅಥವಾ ಎರಡಾ ( ಹೋಗುವುದು ಮತ್ತು ಬರುವುದು) ಎಂದು ಹೇಳುತ್ತಾರೆ. ಆಗ ನೀವು ನಾನು 12 ಗಂಟೆಗಳ ಟೋಲ್ ದಾವತಿಸುತ್ತೇನೆ ಎಂದು ಹೇಳಿ ಟೋಲ್ ನಿಯಮ ಪ್ರಕಾರ, ಯಾವುದೇ ವಾಹನ ಟೋಲ್ ಗೇಟ್ ಪಾಸಾದ ನಂತರ 12 ಗಂಟೆಗಳ ಒಳಗೆ ಅದೇ ಡೋಲ್ ನಲ್ಲಿ ರಿಟರ್ನ್ ಬಂದರೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ಟೋಲ್ ಚೀಟಿಯಲ್ಲಿ ಸಮಯ ನಮೂದಿಸಲಾಗಿರುತ್ತದೆ. ( ಉದಾಹರಣೆಗೆ ನೀವು ಬೆಳಿಗ್ಗೆ 9 ಗಂಟೆಗೆ ಒನ್ ವೇ ಟೋಲ್ ಟಿಕೇಟ್ ಪಡೆದು ಹೊರಟರೆ, ರಾತ್ರಿ ಗಂಟೆಯ ಒಳಗೆ ಅದೇ ಟೋಲ್ ಗೇಟ್ ನಲ್ಲಿ ವಾಪಾಸು ಬಂದರೆ, ಟೋಲ್ ಪಾವತಿಸಬೇಕಿಲ್ಲ. ಎಂದು ಸರ್ಕಾರ ಆದೇಶ ಇರುತ್ತದೆ ಆದರೆ ಟೋಲ್ ನೆಡೆಸುತ್ತಿರುವ ಕಂಪನಿಗಳು ಸರಕಾರ ಆದೇಶ ಗಾಳಿಗೆ ತೂರಿ ಮನಬಂದಂತೆ ಅಕ್ರಮವಾಗಿ ಹಣವಸಮ ಮಾಡುತ್ತಿದ್ದಾರೆ ಎಂದು ವಸಂತ್ ಕುಮಾರ್ ಆರೋಪಿಸಿದ್ದಾರೆ.

ಆದರೆ, ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ, ಟೋಲ್ ಗುತ್ತಿಗೆದಾರರು ಇದನ್ನು ಮುಚ್ಚಿಟ್ಟು ಪ್ರತೀ ದಿನ ವಾಹನ ಸವಾರರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ, ಸಾರ್ವಜನಿಕರು ಇದನ್ನು ಅರಿತು, ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಟೋಲ್ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿಯಾಗುವುದನ್ನು ತಪ್ಪಿಸಬೇಕು.ಪ್ರಮುಖ ನಗರ ಹಾಗೂ ರಾಜ್ಯಗಳ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿಗಳು, ಇತ್ತೀಚಿನ ದಿನಗಳಲ್ಲಿ ‘ಟೋಲ್’ ಸುಲಿಗೆಯ ತಾಣಗಳಾಗುತ್ತಿವೆ. ಸರ್ಕಾರಗಳ ನಿಯಮ ಹಾಗೂ ಆದೇಶಗಳನ್ನು ಗಾಳಿಗೆ ತೂರುತ್ತಿ ರುವ ಕಂಪನಿಗಳು, ನಿಯಮಬಾಹಿರ “ಟೋಲ್ ನೂರಾರು ಕೋಟಿ ರೂಪಾಯಿ ದೋಚುತ್ತಿರುವ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.
ಟೋಲ್ ಸಂಗ್ರಹ ಕೆಲಸವನ್ನು ಗುತ್ತಿಗೆ ಪಡೆದಿರುವ ಹಲವು ಕಂಪನಿಗಳು, ನಿಯಮಬಾಹಿರವಾಗಿ ಉಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಯಾವುದೇ ಟೂರ್ಗೆಟ್ 60 ಕಿಲೋಮೀಟರ್ಗಿಂತ ಹೊರಗಡೆ ಇರಬೇಕೆಂದು ಸ್ಪಷ್ಟವಾಗಿ ಆದೇಶ ಇರುತ್ತದೆ ಮತ್ತು ಇದರ ಬಗ್ಗೆ ಪ್ರತಿ 60 ಕಿ.ಮೀ.ಗೆ ಒಂದರಂತೆ ಟೋಲ್‌ಗೇಟ್ ಇರಬೇಕು” ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದರು.
ಸ್ಥಳ ಪರಿಶೀಲನೆ ನಡೆಸಿದಾಗ, ಈ ನಿಯಮ ಸಚಿವರ ಭಾಷಣಕ್ಕಷ್ಟೇ ಸೀಮಿತರಾದಂತಿದೆ. ಸಚಿವರಿಗೂ ತಮ್ಮ ಮಾಹಿತಿ ಇರುವುದು ಎದ್ದು ಕಾಣುತ್ತದೆ. ಅಕ್ರಮ ಟೋಲ್ ವಸೂಲಿ ಪ್ರಶ್ನಿಸುವವರ ವಿರುದ್ಧವೇ ಟೋಲ್ ಸಿಬ್ಬಂದಿ ಪರಿಹಾಯುತ್ತಿದ್ದಾರೆ. ಗೂಂಡಾಗಳ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದಾರೆ, ಠಾಣೆ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದರೂ ಟೂಲ್ಗೇ ಟ್ ಸಿಬ್ಬಂದಿ ವರ್ತನೆ ಬದಲಾಗುತ್ತಿಲ್ಲ’ ಎಂದೂ ಆರೋಪಿಸಿದರು.
ಮೂಲ ಸೌಕರ್ಯವೇ ಮರೀಚಿಕೆ: ಟೋಲ್ ಪಾವತಿಸದೇ ಸಂಚರಿಸುವ ಸ್ಥಳೀಯರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿ ಕಂಪನಿಗಳ ಮೇಲಿದೆ. ಆದರೆ, ಬಹುತೇಕ ಕಡೆ ಸರ್ವೀಸ್ ರಸ್ತೆಗಳಿಲ್ಲ. ಇದ್ದರೂ ನಿರ್ವಹಣೆ ಮರಿಚಿಕೆಯಾಗಿದೆ. ಶೌಚಾಲಯ, ಕುಡಿಯುವ ನೀರು, ತುರ್ತು ಸೇವೆಗಳ ವ್ಯವಸ್ಥೆಯೇ ಹದಗೆಟ್ಟಿದೆ. ಸರ್ವಿಸ್ ರಸ್ತೆಗಳ ಬಸ್ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಸೊರಗಿದೆ. ಟೋಲ್ ವಸೂಲಿ ಮಾಡುವ ಕಂಪನಿ ಪ್ರತಿನಿಧಿಗಳು, ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೂ ಸಹಾಯಕ್ಕೆ ಧಾವಿಸುವುದಿಲ್ಲ, ಅಂಬುಲೆನ್ಸ್ ಸಹ ಕಳುಹಿಸುವುದಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.ತಪ್ಪು ಮುಚ್ಚಿಕೊಳ್ಳಲು ಉಚಿತ ಸಂಚಾರ: `ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರು, ಸರ್ಕಾರದ ಅಧಿಕಾರಿಗಳು, ಪೊಲೀಸರು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರಿಗೆ ಬಹುತೇಕ ಟೋಲ್‌ಗೇಟ್‌ಗಳಲ್ಲಿ ಉಚಿತ ಸಂಚಾರ ಕಲ್ಪಿಸಲಾಗುತ್ತದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಂಪನಿಗಳು ಈ ದಾರಿ ಹಿಡಿದಿದೆ, ಹೀಗಾಗಿಯೇ, ಕಂಪನಿಗಳ ಅಕ್ರಮವನ್ನು ಪ್ರಶ್ನಿಸಿದರೂ ನ್ಯಾಯ ಸಿಗುತ್ತಿಲ್ಲ’ ಎಂಬುದನ್ನು ಸಂಘಟನೆಗಳು ಅನೇಕ ಬಾರಿ ಆರೋಪ ಮಾಡಿದ್ದಾರೆ.
ಅಕ್ರಮವಾಗಿ ನಡೆಯುತ್ತಿರುವುದರಿಂದ ಕೂಡಲೇ ಈ ತೆಗೆದುಕೊಂಡು ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಗಲು ದರೋಡೆಗೆ ಅವಕಾಶ ಮಾಡಿಕೊಡದೇ ಸಾರ್ವಜನಿಕ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ತೊಂದರೆಗೀಡು ಮಾಡದೇ ಕಾನೂನು ಬಾಹೀರವಾಗಿ ನಿರ್ಮಾಣ ಮಾಡಿರುವ ಕನಕಗಿರಿ ಟೋಲ್ ತೆರವುಗೊಳಿಸಿ ಮರಳಿ ಮತ್ತು ಹೇಮಗುಡ್ಡ ಟೋಟಗಳನ್ನು ಕೂಲಕುಂಷವಾಗಿ ತನಿಖೆ ಮಾಡಿ ಎರಡರಲ್ಲಿ ಒಂದುನ್ನು ತೆರವುಗೊಳಿಸಿ ಒಂದು ಟೋಲ್ ಗೆ ಅವಕಾಶ ಕಲ್ಪಸಿಕೊಟ್ಟು ಸಾರ್ವಜಮಿಕರ ಸುಭದ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು. ಸಂಘಟನೆ ಯ ಜಿಲ್ಲಾಧ್ಯಕ್ಷ ವಸಂತ್ ಕುಮಾರ್ ಮನವಿ ಮಾಡಿದ್ದಾರೆ
ಇದರ ಬಗ್ಗೆ ತನಿಖೆ ಮಾಡದೇ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಮಾನಗಳಲ್ಲಿ ಅದೇ ಟೋಲ್ ಮುಂದೆ ರಸ್ತೆ ಬಂದ್ ಮಾಡಿಸಿ ಹೋರಾಟ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಸಿ.ಕೆ.ಮರಿಸ್ವಾಮಿ ಬರಗೂರು. ಜಿಲ್ಲಾಧ್ಯಕ್ಷರು ಡಿಎಸ್‌ಎಸ್ ಕೊಪ್ಪಳ, ಆರ್ ಚನ್ನಬಸದ ಮಾನ್ವಿ ಜಿಲ್ಲಾ ಮಾಧ್ಯಮ ಸಲಹೆಗಾರರು ದೇವಣ್ಣ ಸಂಗಪೂರ ಸೇರಿದಂತೆ ಇತರರು ಭಾಗವಹಿಸಿದ್ದರು