ಕೊಪ್ಪಳ ಜನವರಿ 01 (ಕರ್ನಾಟಕ ವಾರ್ತೆ): ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಖಾಸಗಿ ನಿವೇಶನದಲ್ಲಿ ಕಂಪೌಂಡ ನಿರ್ಮಾಣಕ್ಕೆ ಪರವಾನಿಗೆ ನೀಡಬೇಕಾಗಿದ್ದು, ಆಕ್ಷೇಪಣೆಗೆ ಆಹ್ವಾನಿಸಲಾಗಿದೆ.


ಈ ಮೂಲಕ ಕುಷ್ಟಗಿ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಆಸ್ತಿ ಸಂಖ್ಯೆ 1082-2340 ರ ವಿಸ್ತೀರ್ಣ 260 ಚ.ಮೀ ಇದ್ದು, ಈ ಆಸ್ತಿಯು ಅಧ್ಯಕ್ಷರು ಪಾಂಡುರಂಗ ದೇವಾಲಯ ಬ್ರಾಹ್ಮಣರ ಸಮಾಜ ಕುಷ್ಟಗಿ ರವರ ಹೆಸರಿನಲ್ಲಿರುತ್ತದೆ. ಈ ನಿವೇಶನದಲ್ಲಿ ಕಂಪೌಂಡ ನಿರ್ಮಾಣ ಮಾಡಲು, ಕಟ್ಟಡ ಪರವಾನಿಗೆ ಕೋರಿ ಅರ್ಜಿಯನ್ನು ಸಲ್ಲಿಸಿರುವುದರಿಂದ ಈ ಆಸ್ತಿಯಲ್ಲಿ ಕಂಪೌಂಡ ನಿರ್ಮಾಣ ಮಾಡುವ ಕುರಿತಂತೆ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಲ್ಲಿ ಯಾವುದೇ ಆಕ್ಷೇಪಣೆ ಇದ್ದಲ್ಲಿ 30 ದಿವಸದ ಒಳಗಾಗಿ ಲಿಖಿತವಾಗಿ ಪುರಸಭೆ ಕಛೇರಿಗೆ ದೂರು ಸಲ್ಲಿಸಬಹುದು.

ಇಲ್ಲದಿದ್ದಲ್ಲಿ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ಭಾವಿಸಿ ಅರ್ಜಿದಾರರಿಗೆ ಈ ನಿವೇಶನದಲ್ಲಿ ಕಂಪೌಂಡ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಲಾಗುವುದು ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!