ಕಾರಟಗಿ : ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದ ಹಳ್ಳದಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಅಕ್ರಮವಾಗಿ ಅಕ್ರಮ ಮರಳು ದಾಸ್ತಾನು ಮಾಡಿರುವ ಮರಳನ್ನು ಗ್ರಾಮ ಸಹಾಯಕ ಜಪ್ತಿ ಮಾಡಿದರು ಕ್ರಮಕ್ಕೆ ಮುಂದಾಗದ ಮೇಲಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಮರಳು ಮಾಫಿಯ ದಂದೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕಡಿವಾಣ ಹಾಕುವಂತೆ ಖಡಕ್ ಸೂಚನೆ ನೀಡಿದ್ರು ಕೂಡ ಅವರ ಸೂಚನೆಗೆ ಕಿಮ್ಮತ್ತು ನೀಡದೆ ತಮ್ಮ ಚಾಳಿಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಗೇದಾಳ ಹಳ್ಳದ ಪಕ್ಕದ್ದಲ್ಲಿ ಮರಳು ಜಪ್ತಿಯಾದ ಸ್ಥಳಕ್ಕೆ ಅಧಿಕಾರಿಗಳು,ಇಣುಕಿ ಹಾಕುತಿಲ್ಲ, ಮತ್ತು ಅಕ್ರಮ ಮರಳು ದಾಸ್ತಾನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರ ಇಲ್ಲವ ಕಾದು ನೋಡಬೇಕಿದೆ …????

error: Content is protected !!