ಗಂಗಾವತಿ :ಭಾರತ ದೇಶದ ಎಲ್ಲಾ ರಾಜ್ಯಗಳಲ್ಲಿ ಆಗಸ್ಟ್ 15ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ಇಟ್ಟು ಆಚರಣೆ ಮಾಡುತ್ತಿರುವುದು ರೂಢಿಯಲ್ಲಿ ಇರುವ ಜೊತೆಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕ‌ರ್ ಭಾವಚಿತ್ರವನ್ನು ಇಟ್ಟು ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಲಾ ಕಾಲೇಜು ನ್ಯಾಯಾಂಗಗಳಲ್ಲಿ ಬ್ಯಾಂಕ್ ಮತ್ತು ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಬೇಕೆಂದು ಒತ್ತಾಯಿಸಿದರು

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ಈಗ ತಮ್ಮ ಗಮನಕ್ಕೆ ತರುಬಯಸುವುದೇನೆಂದರೆ ನಮ್ಮ ದೇಶಕ್ಕೆ 75 ವರ್ಷ ಕಳೆದರೂ ನಮಗೆ ದೇಶದಲ್ಲಿ ಜಾತಿ ಎಂಬ ಬೀಜ ಇನ್ನೂ ಸತ್ತಿಲ್ಲ. ಹಾಗೂ ನಮ್ಮನ್ನು ಆಳುವ ವಿಷಕಾರಿ ಸರ್ಕಾರಗಳು ಸಮಾನತೆಗಾಗಿ ಯಾವುದೇ ಸ್ವಂತ ನಿರ್ಧಾರಗಳು ತೆಗೆದುಕೊಂಡಿಲ್ಲ. ನಮ್ಮ ದೇಶದಲ್ಲಿ ಇದುವರೆಗೂ ಆರ್ಥಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಅಭಿವೃದ್ಧಿಯಾಗಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಎಂದರೆ ತಪ್ಪಿಲ್ಲ ಹಾಗೆಯೇ ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ರಾಷ್ಟ್ರ ನಾಯಕರಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬರಾಗಿದ್ದು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಎಲ್ಲಾ ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಂಡು ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು ಆಚರಿಸುವುದು ರೂಢಿಯಲ್ಲಿದೆ ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿರದ ಪ್ರತಿಯೊಬ್ಬ ನಾಗರಿಕನ್ನು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಕ್ಕೆ ಅವರದೇ ಆದ ಕೊಡುಗೆಯನ್ನು ನೀಡಿ ನಮ್ಮನ್ನು ಅಗಲಿದ್ದಾರೆ ಆದರೆ ಸ್ವಾತಂತ್ರ್ಯ ದಿನಾಚರಣೆ ಯೆಂದು ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡದೆ ಆಚರಣೆ ಮಾಡುತ್ತಿರುವುದು ತುಂಬಾ ಶೂಚನೆಯವಾಗಿದೆ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ರಾಷ್ಟ್ರ ಇಷ್ಟೊಂದು ಶಾಂತಿ ನೆಮ್ಮದಿಯಿಂದ ಇರುವುದೆಂದರೆ,

ಅದಕ್ಕೆ ಪ್ರಮುಖರು, ಅಂಬೇಡ್ಕರ್ ಹೀಗಿರುವಾಗ ಇನ್ನು ಮುಂದೆಯಾದರೂ ರಾಷ್ಟ್ರಕಂಡ ಧೀಮಂತ ನಾಯಕ ಎಲ್ಲ ಜನಾಂಗದವರು ಮೆಚ್ಚುವ ಮಹಾನ್ ವ್ಯಕ್ತಿಯಾದ ದೇಶವೇಮಿ ಅಂಬೇಡ್ಕ‌ ರವರ ಭಾವಚಿತ್ರವನ್ನು ಇಟ್ಟು 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ವತಿಯಿಂದ ಒತ್ತಾಯಿಸಿ ಮನವಿ ಪತ್ರ ವನ್ನು ಸಲ್ಲಿಸುತ್ತದೆ.

ಈ ಸಂದರ್ಭದಲ್ಲಿ  ಚನ್ನಬಸವ ಮಾನ್ವಿ ಮಾಧ್ಯಮ ಸಲಹೆಗಾರರು ಯಮನೂರ ಭಟ್ ತಾ.ಸಂಚಾಲಕ. ವಸಂತಕುಮಾರ್ ಜಿಲ್ಲಾಧ್ಯಕ್ಷರು ಕೊಪ್ಪಳ.
ಹುಲ್ಲೇಶ ಕೊಜ್ಜಿ ತಾ.ಸಂಚಾಲಕರು.ಜಂಬುನಾಥ ತಾ.ಸಂಚಾಲಕರು. ಹಾಗೂ ಇನ್ನಿತರ ಪದಾಧಿಕಾರಿಗಳು ಇದ್ದರು.

error: Content is protected !!