ಗಂಗಾವತಿ: ಕಾಂಗ್ರೆಸ್ ಸರ್ಕಾರವು ಎಸ್.ಸಿ./ಎಸ್.ಟಿ, ಕಲ್ಯಾಣಕ್ಕಾಗಿ ಮೀಸಲಿಟ್ಟ 11,000/-ಕೋಟಿ ರೂ.ಗಳ ಅನುದಾನವನ್ನು ಗ್ಯಾರಂಟಿಗಳಿಗಾಗಿ ಬಳಕೆ ಮಾಡಬಾರದೇದು ದಲಿತ ಮುಖಂಡರು ದೇವಣ್ಣ ಸಂಗಪೂರ ಇವರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಾಹದೇವಪ್ಪ ಅವರಿಗೆ ಪತ್ರಿಕೆ ಮೂಲಕ ಒತ್ತಾಯಿಸುತ್ತಿದ್ದೆನೆ ಎಂದು ಹೇಳಿದರು
ಹಲವು ವರ್ಷಗಳು ಕಳೆಯುತ್ತಾ ಬಂದರೂ ಸಹ ಎಸ್.ಸಿ./ಎಸ್.ಟಿ.ಸಮುದಾಯದ ಜನರಲ್ಲಿ ಬಹುತೇಕರು ಸಾಮಾಜಿಕವಾಗಿ, ಶೈಕ್ಷಣಿ ಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಇವರಿಗೆ ಇನ್ನೂ ಅನೇಕ ಗ್ರಾಮಗಳಲ್ಲಿ, ಸಮಾನತೆ ಸಿಕ್ಕಿಲ್ಲ. ಅಸ್ಪೃಶ್ಯತೆ . ಎಂಬ ದೊಡ್ಡ ರೋಗ ಈಗಲೂ ಕೂಡ ಹಳ್ಳಿಯಲ್ಲಿ ಎದ್ದು ತಾಂಡ ಆಡುತ್ತಿದ್ದೆ ಅಸ್ಪೃಶ್ಯತೆ ಎಂಬ ಮಾರಕ ರೋಗ ನಮ್ಮ ಎಸ್ ಸಿ ಜನಾಂಗದವರನ್ನು ಈಗಲೂ ಬೆನ್ನು ಬೀಡದೆ ಕಾಡುತ್ತಿದೆ, ಅನೇಕ ಗ್ರಾಮಗಳಲ್ಲಿ ಬಾವಿಯಿಂದ ನೀರು ತರ ಲಾಗುತ್ತಿಲ್ಲ, ದೇವಸಾನಕ್ಕೆ ಪ್ರವೇಶ ನಿರ್ಬಂಧ ಮಾಡಲಾಗಿದೆ ಹಾಗೂ ಸರಿಯಾಗಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕೂಡ ಸಿಕ್ಕಿಲ್ಲ. ಅನೇಕರಿಗೆ ಸ್ವಂತ ನಿವೇಶನ, ಮನೆ ಹಾಗೂ ಕೃಷಿ ಭೂಮಿ ಕೂಡ ಇರುವುದಿಲ್ಲ. ಇನ್ನೂ ಇದರ ಬಗ್ಗೆ ಪ್ರಶ್ನೆ ಮಾಡಬೇಕಾದ ಎಸ್.ಸಿ/ಎಸ್.ಟಿ.ಸಮುದಾಯದ ಶಾಸಕರು ಸಚಿವರು ಮೌನಕ್ಕೆ ಶರಣಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ಅನೇಕರು ಸರ್ಕಾರದ ಯಾವುದೇ ನಿಗಮ ಗಳಿಂದ ಹಾಗೂ ಇಲಾಖೆಗಳಿಂದ ಸಹ ಅನುದಾನವನ್ನು ಸಹ ಪಡೆದುಕೊಂಡಿಲ್ಲ ಇಂತಹ ಆನೇಕ ರೀತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಒಳಗಾಗುತ್ತಿರುವ ಎಸ್.ಸಿ/ಎಸ್.ಟಿ,ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೇ ಸರ್ಕಾರವು ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳಿಗಾಗಿ: ಬಳಸಿಕೊಂಡರೆ ಅದೂ ಕೂಡ: ಇದೇ: ಸಮುದಾಯಕ್ಕೆ ಬಳಸಲಾಗುತ್ತದೆಂದು ನಿರ್ಬಂಧಗಳನ್ನು ಮಾಡಿಕೊಂಡರೆ ಅದು ನಮ್ಮ ಸಮದಾಯಕ ಮೋಸ & ಅಂತ ಮೋಸ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.