
ಮಾಗಡಿ ತಾಲ್ಲೂಕಿನ ಐತಿಹಾಸಿಕ ಕೆರೆಗಳು ಜನರ ಜೀವನಾಡಿಗಳಾಗಿವೆ.. ಅಭಿವೃದ್ಧಿ ಪಡಿಸಿದರೇ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲವಾಗುತ್ತವೆ ಎಂದು ಮಾನ್ಯ ರಾಮನಗರ ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ ಅಧಿಕಾರಿಗಳಿಗೆ ಸಲಹೆ ನೀಡಿದರು..
ಮಾಗಡಿ ತಾಲ್ಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಂಚಿಕುಪ್ಪೆ ಕೆರೆ ಮತ್ತು ನಾಯಕನಪಾಳ್ಯ ಗ್ರಾಮದ ದಳವಾಯಿ ಕೆರೆಯನ್ನು ಪರಿಶೀಲಿಸಿ, ಅಭಿವೃದ್ಧಿಪಡಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದರು..
ನಂತರ ಗ್ರಾಮಸ್ಥರ ಬಳಿ ಸಂವಾದ ನಡೆಸಿದ ಅವರು, ಐತಿಹ್ಯವುಳ್ಳ ಮಾಹಿತಿ ಪಡೆದರು.. ಈಗಾಗಲೇ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆರೆಕಟ್ಟೆಗಳೆಲ್ಲಾ ಮೈದುಂಬಿವೆ.. ನೋಡಲು ಕೂಡ ಬಹಳ ಆಕರ್ಷಕವಾಗಿವೆ.. ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೋಡಿ ಬೀಳುವ ಜಾಗದಲ್ಲಿ ಮತ್ತು ನೀರು ಜಿನುಗುವ, ತೊರೆಯಂತಹ ಪ್ರದೇಶದಲ್ಲಿ 200 ಮೀಟರ್ ಅಂತರದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ ಅಂತರಜಲ ಮಟ್ಟವನ್ನು ಹೆಚ್ಚಿಸಬಹುದು..

ಇದರಿಂದ ರೈತರ ಜಮೀನು ಫಸಿಯಿಂದ ಕೂಡಿರುತ್ತದೆ ಜೊತೆಗೆ ಪರಿಸರವೂ ಹಚ್ಚ ಹಸಿರಿನಿಂದ ಇರುತ್ತದೆ ಎಂದು ಹೇಳಿದರು.. ಹಂಚಿಕುಪ್ಪೆ ಕೆರೆಯ ಕೋಡಿ ಹರಿಯುವ 200 ಮೀಟರ್ ದೂರದಲ್ಲಿ ಚೆಕ್ ಡ್ಯಾಂ ನಿರ್ಮಿಸುವಂತೆ ಮತ್ತು ಕೆರೆಯ ಸುತ್ತಳತೆ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಂದಾಯ ಇಲಾಖೆಗೆ ಪತ್ರ ಬರೆಯುವಂತೆ ಸೂಚಿಸಿದರು..
ಈ ಸಂದರ್ಭದಲ್ಲಿ ಮುಖ್ಯಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಮಾನ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಚಂದ್ರು, ಸಹಾಯಕ ನಿರ್ದೇಶಕರು ಗಂಗಾಧರ್ ಹೆಚ್.ಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕ ಅಭಿಯಂತರರಾದ ಮಹೇಶ, ತಾಂತ್ರಿಕ ಸಹಾಯಕ ಅಭಿಯಂತರರಾದ ಐಶ್ವರ್ಯ, ತಾಲ್ಲೂಕು ಐಇಸಿ ಸಂಯೋಜಕರಾದ ರವಿ ಅತ್ನಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಸೇರಿ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು..