ಬಾಗಲಕೋಟೆ :ಜಮಖಂಡಿ ನಗರದಲ್ಲಿ ಅಂಗನವಾಡಿ ನೌಕರರ ಸೇವಾ ಭದ್ರತೆ, ಮಾಸಿಕ ವೇತನ,ನಿವೃತ್ತಿ ಪಿಂಚಣಿ ಹಾಗೂ ಇನ್ನಿತರ ಬೇಡಿಕೆಗೆ ಅಗ್ರಹಿಸಿ ಅಂಗನವಾಡಿ ಕಾರ್ಯಕರ್ತರಿಂದ ಪ್ರತಿಭಟನೆ
ನಗರದ ದೇಸಾಯಿ ವೃತ್ತದಿಂದ ತಾಲೂಕ ಆಡಳಿತ ಭವನದ ವರೆಗೆ ಜಾಥಾ ಮೂಲಕ ಸರಕಾರ ವಿರುದ್ದ ಘೋಷಣೆ ಕೂಗುತ್ತ ಹೊರಟ ಅಂಗನವಾಡಿ ಕಾರ್ಯಕರ್ತರು
ತಾಲೂಕು ಆಡಳಿತ ಭವನದ ಮುಂದೆ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ
ಸರಕಾರದ ಮುಂದೆ ಹಲವು ಬೇಡಿಕೆ ಇಟ್ಟ ಅಂಗನವಾಡಿ ಕಾರ್ಯಕರ್ತರು
ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಬೆಂಗಳೂರು ಗೆ ಹೋಗಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು
ತಾಲೂಕ ಆಡಳಿತ ಭವನದಲ್ಲಿ ತಾಲೂಕ ದಂಡಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಅಂಗನವಾಡಿ ಕಾರ್ಯಕರ್ತರು ಮನವಿ ಸಲ್ಲಿಸಿದರು.