
ಗಂಗಾವತಿ ತಾಲೂಕಿನ ದರ್ಶನ್ ಅಭಿಮಾನಿ ಬಳಗದಿಂದ ಗಾಂಧಿ ಸರ್ಕಲ್ ದಿಂದ ಪ್ರತಿಭಟನೆ ಮೂಲಕ ಬಸವ ಸರ್ಕಲ್ ಮಾರ್ಗವಾಗಿ ಶ್ರೀ ಕೃಷ್ಣದೇವರಾಯ ವೃತ್ತದವರೆಗೆ ಆ ವೃತ್ತದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷರ ಮಂಜುನಾಥ ಮಾತನಾಡಿ ಕ್ರಾಂತಿ ಚಲನಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭವನ್ನು ದಿನಾಂಕ 18/12/2022 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಕ್ರಾಂತಿ ಚಲನಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಅಭಿನಯ ಚತುರ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಆಗಮಿಸಿದ್ದು ಕೆಲ ಕಿರಿಗೆಡಿಗಳು ಧ್ವನಿ ಸುರುಳಿ ಬಿಡುಗಡೆ ಸಮಯದಲ್ಲಿ ಚಪ್ಪಲಿ ಎಸೆದಿರುತ್ತಾರೆ ಇದರಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ ಮತ್ತು ದರ್ಶನ್ ತೂಗುದೀಪ್ ಅವರ ಬೆಳವಣಿಗೆ ಸಹಿಸದೆ ಉದ್ದೇಶಪೂರ್ವಕವಾಗಿ ಕೆಲವು ಕಿಡಿಗೇರಿಗಳು ಈ ಕೃತ್ಯ ಎಸಿಗಿರುತ್ತಾರೆ ಇದರಿಂದ ಇಡೀ ಕರ್ನಾಟಕದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ತುಂಬಾ ನೋವಾಗಿರುತ್ತದೆ ಆದ್ದರಿಂದ ಈ ಕೃತ್ಯ ಎಸಿಗಿದವರ ಮೇಲೆ ಸೂಕ್ತ ಕಾನೂನು ಕಠಿಣ ಕ್ರಮ ಜರುಗಿಸಬೇಕೆಂದು.
ಕರುನಾಡ ಕಲಾ ರತ್ನ ದರ್ಶನ್ ತೂಗುದೀಪ್ ಅಭಿಮಾನಿ ಬಳಗದ ವತಿಯಿಂದ ಇಂದು ತಹಶೀಲ್ದಾರರಿಗೆ ಮನವಿ ನೀಡುವುದರ ಮೂಲಕ ಒತ್ತಾಯಿಸಲಾಯಿತು
ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಬಳಗದ ಜಿಲ್ಲಾ ಉಪಾಧ್ಯಕ್ಷ ಶರಣ ತಾಲ್ಲೂಕ ಅಧ್ಯಕ್ಷ ರಮೇಶ್ ಚಿಂಗಾರಿ ತಾಲೂಕು ಉಪಾಧ್ಯಕ್ಷ ಚೌಡಪ್ಪ ವಿರಾಟ್ ಗಂಗಾವತಿ ನಗರ ಘಟಕ ಅಧ್ಯಕ್ಷ ಮಹೆಬೂಬ್ ಉಪಾಧ್ಯಕ್ಷ ಹುಲ್ಲೇಶ ಹನುಮಂತ ಸೇರಿದಂತೆ ಅನೇಕ ಅಭಿಮಾನಿಗಳ ಬಳಗ ಸದಸ್ಯರು ಉಪಸ್ಥಿತರಿದ್ದರು