ಗಂಗಾವತಿ: ಯಲಬುರ್ಗಾ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ರವರೆ ಕಿಷ್ಕಿಂದಾ ಕ್ಷೇತ್ರದ ಬಗ್ಗೆ ನೀವು ಕೊಟ್ಟಂತ ಹೇಳಿಕೆ ನಾವು ಖಂಡನೆ ಮಾಡುತ್ತೇವೆ.
ಕಾರಣ ಈ ಕ್ಷೇತ್ರದ ಮಹಿಮೆ ನಿಮಗೆ ಸರಿಯಾಗಿ ತಿಳಿದಿಲ್ಲ , ನಿಮ್ಮಲ್ಲಿ ಮನಸ್ಸಿದ್ದರೆ ಕ್ಷೇತ್ರಕ್ಕೆ ಒಳ್ಳೆಯದನ್ನು ಬಯಸಿ ಅದು ಬಿಟ್ಟು ವಿಧಾನಸೌಧದಲ್ಲಿ ಕುಳಿತುಕೊಂಡು ಕಿಷ್ಕಿಂದಾ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನಿಮ್ಮ ಘನತೆಗೆ ಧಕ್ಕೆ ತರುತ್ತದೆ.
ಎಲ್ಲೋ ಒಂದೆರಡು ತಪ್ಪುಗಳಾದಲ್ಲಿ ಇಡೀ ಕ್ಷೇತ್ರ ತಪ್ಪಿಸಸ್ಥರೆಂದು ಮಾತನಾಡುವುದು ಸರಿಯಲ್ಲ.
ಕಿಷ್ಕಿಂದಾ ಕ್ಷೇತ್ರದ ಅಂಜನಾದ್ರಿ ಬೆಟ್ಟ ಇಡೀ ವಿಶ್ವವೆ ತಿರುಗಿ ನೋಡುವಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಅದನ್ನು ಬೆಳೆಸುವ ಕೆಲಸವನ್ನು ನಾವೆಲ್ಲರೂ ಕೂಡಿಕೊಂಡು ಮಾಡೋಣ ಅದನ್ನು ಬಿಟ್ಟು ಅದಕ್ಕೆ ಕೆಟ್ಟ ಹೆಸರು ತರುವಂತ ಕೆಲಸ ಮಾಡುವುದು ಸರಿಯಲ್ಲ.
ಕಿಷ್ಕಿಂದಾ ಕ್ಷೇತ್ರದಲ್ಲಿ ಗಾಂಜಾ, ಡ್ರಗ್ ಮುಂತಾದ ಮಾದಕ ವಸ್ತುಗಳನ್ನು ಮಾರುತ್ತಿದ್ದಾರೆ ಎಂದು ನೀವು ಕೆಟ್ಟ ಆಪಾದನೆ ಮಾಡುತ್ತಿದ್ದೀರಿ.
ನಿಮ್ಮ ಆರೋಪ ಸಲ್ಲದು ಇದೇ ಮುಂದುವರಿದಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೊಸಮಲಿ ರಮೇಶ ನಾಯಕ ಎಚ್ಚರಿಕೆ ನೀಡಿದರು