ಗಂಗಾವತಿ ನಗರದ ವ್ಯಾಪ್ತಿಯಲ್ಲಿ ಬರುವ ದೇವಗಟ್ ರಸ್ತೆಗೆ ಹೊಂದಿಕೊಂಡಿರುವ ತುಂಗಭದ್ರಾ ಜಲಾಶಯದ ಮೂಲಕ ದೇವಘಟ್ ಮಾರ್ಗವಾಗಿ ವಿಜಯನಗರ ಕಾಲುವೆ ಹರಿಯುತ್ತದೆ ಈ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ.
ಹೀಗಾಗಿ ಈ ಕಾಲುವೆ ನೀರನ್ನು ಆಶ್ರಯಿಸಿ ಚಿಕ್ಕಜಂತಕಲ್, ಢಣಾಪುರ, ಆಯೋದ್ಯ, ಹಿರೇಜಂತಕಲ್, ವಿನೋಬನಗರ, ದೇವಘಾಟ ಸೇರಿದಂತೆ ಸುತ್ತಲಿನ 10ಕ್ಕೂ ಹೆಚ್ಚು, ಹಳ್ಳಿಯ ರೈತರ 20 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು, ಭತ್ತ, ಬಾಳ, ಮೆಣಸಿನಕಾಯಿ, ಉಳ್ಳಾಗಡ್ಡಿ, ಸೇರಿದಂತೆ ಇತರ ತೋಟಗಾರಿಕ ಬೆಳೆಗಳನ್ನು ಬೆಳೆಯುವುದಕ್ಕಾಗಿ ನೀರಾಯಿಸಿಕೊಂಡು ಬೇಳೆಯಬೇಕಾಗಿರುತ್ತದೆ ಆದರೆ ಕಾಲುವೇನಲ್ಲಿ ಹೂಳು ತುಂಬಿರುವುದರಿಳದ ರೈತರ ಗೋಳು ಕೇಳದ ಕಾಲುವೇನಲ್ಲಿ ಹೂಳು ತುಂಬಿರುವುದರಿಂದ ಸರ್ಕಾರವು ತಮ್ಮ ಗಮನಕ್ಕೆ ತೆಗೆದುಕೊಂಡು ರೈತರಿಗೆ ಸರಳವಾಗಿ ನೀರು ತಲುಪಲೆಂಬ ಕೋಟ್ಯಾನಗಟ್ಟಲೆ ಮಂಜೂರು ಮಾಡಿರುತ್ತದೆ. ಆದರೆ ಸಂಬಂಧಪಟ್ಟ, ಕಿರಿಯ ಅಭಿಯಂತರರು (ಜೆಇ) ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗುತ್ತೇದರ ಜೊತೆ ಸೇರಿಕೊಂಡು ಅವರ ಜೊತೆ ಶಾಮೀಲಾಗಿ ಎಸ್ಟಿಮೇಟ್ ಪ್ರಕಾರ ನಿರ್ಮಿಸಬೇಕಾದಂತಹ ಕಾಮಗಾರಿಯನ್ನು ಎಸ್ಟಿಮೇಟ್’ ಪ್ರಕಾರ ಮಾಡದೇ ಮತ್ತು ಕೇನಲ್ ಸುತ್ತಮುತ್ತಲಿನ ಮರ್ಮು (ಮಣ್ಣು) ಕೇನಾಲ್ ದಂಡೆ ಮೇಲೆ ಹಾಕಿ ಅದರ ಮೇಲೆ ಜಾಲಿಕಲ್ಲು ಹಾಕದೇ ತಮ್ಮ ಮನಬಂದಂತೆ ಕಾಮಗಾರಿ ನಿರ್ವಹಿಸಿರುತ್ತಾರೆ. ಈ ಕಾಮಗಾರಿಯು ತೀರ ಕಳಪೆ ಮಟ್ಟದಿಂದ ಕೂಡಿದ್ದು ಎಂದು ಸಂಘಟನೆಗಳ ಗಮನಕ್ಕೆ ಬಂದಿರುತ್ತದೆ ಸಂಘಟನಗಳು ಖುದ್ದಾಗಿ ಹಾಜರಾಗಿ ಕಾಮಗಾರಿಯನ್ನು ಪರಿಶೀಲಿಸಿದಾಗ ಅಲ್ಲಿ ಈ ಕಾಮಗಾರಿಯು ಯಾವುದೇ ರೀತಿಯ ಗುಣಮಟ್ಟದ ಕಾಮಗಾರಿ ನಿರ್ವಹಿಸಿರುವುದಿಲ್ಲ. ಆದ್ದರಿಂದ ಸದರಿ ಅಧಿಕಾರಿ/ಗಗುತ್ತಿಗೆದಾರರು ಸ್ಮಾಮಿಲಾಗಿರುವುದು ಮೇಲ್ನೋಟಕ ಕಂಡುಬಂದಿರುತ್ತದೆ. ಆದ್ದರಿಂದ ತಾವುಗಳು ಕೂಡಲೇ ಸ್ನಾನಿಕ ಸ್ಥಳ ಪರಿಶೀಲನ ಮಾಡಿ ಕಾಮಗಾರಿಯ ಬಿಲ್ ತಡಹಿಡಿದು ಸಂಬಂಧಪಟ್ಟ ಅಧಿಕಾರಿಗಳ/ಗುತ್ತೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತಪರ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ತಮಗೆ ಒತ್ತಾಯಿಸುತ್ತೇವೆ.



ಒಂದು ವೇಳೆ ತಾವುಗಳು ಯಾವುದೇ ರಾಜಕೀಯ ವ್ಯಕ್ತಿಗಳು ಒತ್ತಡ ಹಾಕಿದರೆ ಅವರ, ಕುಮಕ್ಕುನಿಂದ ಬಿಲ್ ಪಾವತಿ ಮಾಡಿದರೆ ಮುಂದೆ ಆಗುವ ಅನಾಹುತಗಳಿಗೆ ನೇರ ತಾವೇ ಹೊಣೆಗಾರರಾಗಬೇಕೆಂದು ಮತ್ತು ಹೋರಾಟ ನಡೆಸಲಾಗುವುದು ಎಂದು ಸಂಘಟನೆಗಳು ಒತ್ತಾಯಿಸಿವೆ
ಈ ಸಂದರ್ಭದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಇದ್ದರು.