ಕರ್ನಾಟಕ ಮಾದಿಗ ದಂಡೂರ್ ಸಮಿತಿ ನೇತೃತ್ವದಲ್ಲಿತಾಲೂಕ ಪಂಚಾಯತಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ.
ಗಂಗಾವತಿ, 5 ಕರ್ನಾಟಕ ಮಾದಿಗ ಬೆಂಗಳೂರು ಸಮಿತಿ ತಾಲೂಕ ಘಟಕದ ನೇತೃತ್ವದಲ್ಲಿ ಬುಧವಾರದಂದು ಒಂದು ದಿನದ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದರು, ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾ ಕಾರ್ಯಧ್ಯಕ್ಷ ಹುಸೇನಪ್ಪಾ ಸ್ವಾಮಿ ಮಾತನಾಡಿ ಗಂಗಾವತಿ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಮಾದಿಗ ಜನಾಂಗಕ್ಕೆ ದೊರೆಯಬಹುದಾದ ಸರ್ಕಾರದ ಸೌಲಭ್ಯಗಳಾದ ಡಾ. ಬಿಆರ್ ಅಂಬೇಡ್ಕರ್ ಮತ್ತು ನಮ್ಮ ಮಾದಿಗ ಸಮಾಜಕ್ಕೆ ಭೂಮಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ವಿಶೇಷ ಘಟಕ ಯೋಜನೆಯಲ್ಲಿ ಬರುವಂತಹ ಸೌಲಭ್ಯಗಳು ನಮ್ಮ ಸಮುದಾಯಕ್ಕೆ ಹಾಗೂ ದೇವದಾಸಿ ಹೆಣ್ಣು ಮಕ್ಕಳಿಗೆ ತಲುಪಿಸಬೇಕು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿದ ಕುಟುಂಬಕ್ಕೆ 100 ಮಾನವ ದಿನಗಳ ಕೆಲಸ ಕೊಡಬೇಕು ಹಾಗೆ ನಿವೇಶನ, ವಸತಿ ಸಮುದಾಯ ಭವನ ನಿರ್ಮಾಣ ಜಿಜಿಎಂ ಕಾಮಗಾರಿ ಕಾಮಗಾರಿಗಳನ್ನು ಪರಿಶೀಲಿಸುವಿಕೆ ಜಾತಿನಿಂದಲೇ ಪ್ರಕರಣಗಳನ್ನು ಬಿ ರಿಪೋರ್ಟ್ಹಾಕದೆ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ.
ಪ್ರಮುಖ 16 ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಲೂಕ ಘಟಕದ ಅಧ್ಯಕ್ಷ ಗುಂಡಪ್ಪ ನಿಲೋಗಲ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಅಂತಹ ಪ್ರಕರಣವನ್ನು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ನಗರದಲ್ಲಿರುವ ವಾರ್ಡ್ ನಂಬರ್ 23 ಅಂಬೇಡ್ಕರ್ ನಗರದ ಬೈಪಾಸ್ ರಸ್ತೆಯಲ್ಲಿರುವ ಮಾದಿಗ ಸಮುದಾಯದ ಸ್ಮಶಾನದ ಭೂಮಿಯನ್ನು ಸರ್ವೇ ಮಾಡಿ ಮಾದಿಗ ಸಮಾಜದ ಸ್ಮಶಾನ ಭೂಮಿ ಎಂದು ಪಹಣಿ ಪತ್ರಿಕೆಯನ್ನು ಮಾಡಿಕೊಡಬೇಕು ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾದಿಗ ಸಮಾಜ ಬಾಂಧವರಿಗೆ ಸ್ಮಶಾನ ಜಾಗವನ್ನು ಖಾದಿರಿಸಬೇಕು ಒಟ್ಟಾರೆ ಮಾದಿಗ ಸಮಾಜಕ್ಕೆ ದೊರೆಯಬಹುದಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕೆಂದು ಸರ್ಕಾರ ಕಲ್ಪಿಸಬೇಕೆಂದು ತಿಳಿಸಿದರು, ವಾರದೊಳಗೆ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ರಾಜ್ಯದ್ಯಂತ ಹೋರಾಟಗಳನ್ನು ನಡೆಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ದುರ್ಗಪ್ಪ ಪೂಜಾ ಕಾರ್ಯಧ್ಯಕ್ಷ ಡಿಜೆ ದುರ್ಗಪ್ಪ ಹನುಮಂತಪ್ಪ ಉಮೇಶ್ ಕನಕಗಿರಿ ಗ್ರಾಮ ಪಂಚಾಯತಿಯ ದಂಡೂರ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು