ಇಂಜಿನಿಯರ್ ಉಪ ವಿಭಾಗ ಕೊಪ್ಪಳ ಅಧಿಕಾರಿ ವಿಶ್ವಾನಾಥ್ ಅವರೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ….
ಕೊಪ್ಪಳ : ಸಹಾಯಕ ನಿರ್ವಾಹಕ ಇಂಜಿನಿಯರ್ ಉಪ ವಿಭಾಗ ಅಧಿಕಾರಿ ಎಚ್. ವಿಶ್ವಾನಾಥ್ ಅವರಿಗೆ “ಕೆಲಸ ಕ್ಕೆ ಕರಿಬೇಡಿ ಊಟಕ್ಕೆ ಮರೀಬೇಡಿ” ಎಂಬ ಗಾದೆಯಂತೆ ಇವರು ಸರ್ಕಾರಿ ಸಂಬಳ ಮಾತ್ರ ತೆಗೆದುಕೊಳ್ಳಲು ಇರುವ ಅಧಿಕಾರಿಗಳು ಎಂದರು ತಪಿಲ್ಲ, ಏಕೆಂದರೆ ಇವರು ತಿಂಗಳಲ್ಲಿ ಯಾವುದೇ ಸಮಯ,ಸಂದರ್ಭದಲ್ಲಿ ಕಚೇರಿಗೆ ತೆರಳಿದರು ಇವರು ಮಾತ್ರ ಸಿಗೋದಿಲ್ಲ.

ಕಳೆದ ಒಂದು ತಿಂಗಳಿಂದ ಸಹಾಯಕ ನಿರ್ವಾಹಕ ಇಂಜಿನಿಯರ್ ಉಪ ವಿಭಾಗ ಅಧಿಕಾರಿ ಎಚ್. ವಿಶ್ವಾನಾಥ್ ಸರಿಯಾದ ಸಮಯಕ್ಕೆ ಕಚೇರಿಗೆ ಬಾರದೆ, ಇರುವದನ್ನು ಗಮನಿಸಿ ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗೂ ಅಧಿಕಾರಿಗೆ ಹಿಡಿ ಶಾಪ ಹಾಕಿ ಹಿಂತಿರುಗಿ ಹೋಗುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಚೇರಿ ಪ್ರಾರಂಭಿಸಿ, ಸಂಜೆ 5 ಗಂಟೆಗೆ ಕಚೇರಿ ಮುಚ್ಚಬೇಕು ಎಂಬುವದು ನಿಯಮವಿದೆ. ಅದರೆ, ಬೆಳಗ್ಗೆ 10 ಗಂಟೆಗೆ ಬರಬೇಕಾದ ಅಧಿಕಾರಿಗಳು, ಮಧ್ಯಾಹ್ನ 12 ಗಂಟೆಯಾದರೂ ಬಾರದೆ, ಇರುವದರಿಂದ ಹಾಗೂ ಉಳಿದ ಸಮಯದಲ್ಲಾದರೂ ಸಿಗುತ್ತಾರೆ ಎಂದುಕೊಂಡು ಮದ್ಯಾಹ್ನ ಹೋದರೆ ಆವಾಗು ಇರುವದಿಲ್ಲ ಎಂಬುದು ಆರೋಪ,ಈ ಅಧಿಕಾರಿ ಮೇಲೆ ಯಾರ ಹಿಡಿತ ಇಲ್ಲದಂತಾಗಿದ್ದು, ಸಿಬ್ಬಂದಿಗಳು ಸಹ ಮನ ಬಂದಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಅಧಿಕಾರಿಗಳು ಇಲ್ಲದೆ ಇರುವದರಿಂದ ಸಿಬ್ಬಂದಿ ವರ್ಗದವರು ಯಾವುದೇ ಸಾರ್ವಜನಿಕ ಕೆಲಸಕ್ಕೆ ಸೂಕ್ತ ವಾಗಿ ಸ್ಪಂದಿಸದೆ ಇದ್ದು, ಕೇವಲ ಹರಟೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಗೂ ಅಧಿಕಾರಿಗಳು ಬರದೇ ಕಚೇರಿಗಳು ಬಿಕೋ ಎನ್ನುತ್ತಿವೆ ಇದರಿಂದ ಕಚೇರಿಯಲ್ಲಿರುವ ಸಿಬ್ಬಂದಿ ವರ್ಗದವರನ್ನು, ಡಿ ದರ್ಜೆ ಸಿಬ್ಬಂದಿಯವರನ್ನು ಕೇಳಿದರೆ ಅಧಿಕಾರಿಗಳು ಇನ್ನೇನು ಬರಬಹುದು ಎಂದು ಸಂಜೆಯವರೆಗೂ ಸಿದ್ದ ಉತ್ತರವನ್ನು ನೀಡುತ್ತಿದ್ದಾರೆ. ಅಧಿಕಾರಿಗಳ ಮೊಬೈಲ್ ಸಂಖ್ಯೆ ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದು, ಸಿಬ್ಬಂದಿಗಳ ಈ ವರ್ತನೆ ಅಧಿಕಾರಿಗಳು ಸಾಮಾನ್ಯ ನೌಕರರ ಮೇಲೆ ಸೂಕ್ತ ಮಾಹಿತಿ ನೀಡದಂತೆ ಒತ್ತಡ ಇರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಕುರಿತು ಅಧಿಕಾರಿಗಳಿಗೆ ಹೆಚ್ಚಿನ ಒತ್ತಡದಿಂದ ಕೇಳಿದರೆ, ನಮಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಿಟಿಂಗ್ ಇತ್ತು ಇಲ್ಲವೇ ಹೊರಗಡೆ ಸೈಟ್ ಕೆಲಸಕ್ಕೆ ತೆರಳಿದ್ದಾರೆ ಎಂದು ಉತ್ತರ ನೀಡುತ್ತಿದ್ದು, ಇವರು ಕಚೇರಿಯಲ್ಲಿ ಇರುವದಾದರೂ ಯಾವಾಗ ಎಂಬುದು ಪ್ರಶ್ನೆ..? ಜಿಲ್ಲಾಧಿಕಾರಿಗಳು ಕೆಲವು ಅಧಿಕಾರಿಗಳು, ಸಿಬ್ಬಂದಿಗಳ ಸಭೆಯನ್ನು ಪ್ರತಿನಿತ್ಯ ಮಾಡುತ್ತಿದ್ದಾರೆಯೇ..? ಜಿಲ್ಲಾಧಿಕಾರಿಗಳೇ ಉತ್ತರಿಸಬೇಕಾಗಿದೆ.ಸಹಾಯಕ ನಿರ್ವಾಹಕ ಇಂಜಿನಿಯರ್ ಉಪ ವಿಭಾಗ ಅಧಿಕಾರಿ ಎಚ್. ವಿಶ್ವಾನಾಥ್ ಕಚೇರಯಲ್ಲಿ ಯಾವ ಸಮಯಕ್ಕೆ ಸಿಗುತ್ತಾರೆ ಇಲ್ಲವಾದರೆ ಇಲ್ಲಿ ಕೆಲಸ ಮಾಡುವವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇಂತಹ ಕೆಲಸಕ್ಕೆ ಬಾರದ ಅಧಿಕಾರಿಗಳನ್ನು ಗಮನಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.