ಗಂಗಾವತಿ :ಕಲ್ಯಾಣ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರದಲ್ಲಿ 33 ವರ್ಷಗಳ ಮುಂಚೆಯೆ ಜನತಾ ಗ್ರಾಹಕರ ಸಹಕಾರಿ ಸಂಘ ಹುಟ್ಟು ಹಾಕಿ “ಜನತಾ ಬಜಾರ ಪ್ರಾರಂಭಿಸಿ ಅತ್ಯಂತ ಯಶ್ವಸಿಯಾಗಿ ನಡೆಸಿ ರಾಜದಂತ ಹೆಸರುವಾಸಿ ಆಗಿದ್ದು ಇತಿಹಾಸ, ಈಗ ಅದೇ ಸಹಕಾರಿ ಸಂಸ್ಥೆ ಜನತಾ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಎನ್ನುವ ಹೆಸರಿನಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದೆ..
ಈಗ ಜನತಾ ಸೇವಾ ಟ್ರಸ್ಟ್ “ಅನು, ಸಿಂಧನೂರಿನ ಜನತೆಗೆ ಇನ್ನು ಹೆಚ್ಚಿನ ಸೇವೆ ನೀಡಲು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಈ ದಿನ ಎಲ್ಲಾ ಸಮುದಾಯದ ಜನರಿಗಾಗಿ *ಮುಕ್ತಿರದ ವಾಹನವನ್ನು ಬಿಡುಗಡೆ ಮಾಡಲಾಗಿದೆ ಇದರೊಂದಿಗೆ Sleeping Freezer Box (ಮಲಗುವ ಶವ ಪೆಟ್ಟಿಗೆ) Sitting Freezer Box (ಕೂರುವ ಶವ ಪೆಟ್ಟಿಗೆ ಕೂಡಾ ಜನರಿಗಾಗಿ ನೀಡುತ್ತಿದೆ.
‘ಜನತಾ ಸೇವಾ ಟ್ರಸ್ಟ್” ವತಿಯಿಂದ ಜನತಾ ಸೌಹಾರ್ದ ಸಹಕಾರಿಯವರು ಶ್ರೀ ಕೊಟ್ಟುರೇಶ್ವರ ದೇವಸ್ಥಾನ, ಗಂಗಾವತಿಯಲ್ಲಿ “ಮುಕ್ತಿರಥ” ವಾಹನಕ್ಕೆ, ಪೂಜೆ ಮಾಡಿ ತದನಂತರ ವಿಧಾನಪರಿಷತ್ ಮಾಜಿ
ಸದಸ್ಯರು ಮತ್ತು ಸುಕೋ ಬ್ಯಾಂಕ್‌ನ ಸಂಸ್ಥಾಪಕರಾದ ಶ್ರೀ ಮನೋಹರ ಮಸ್ಕಿ ಮತ್ತು ಸುಕೋ ಬ್ಯಾಂಕ್ ನ ನಿದೇರ್ಶಕರಾದ ಶ್ರೀ ಜಗದೀಶಪ್ಪ ಸಿಂಗನಾಳ ಮತ್ತು ಜನತಾ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಆ ಸತ್ಯನಾರಾಯಣರವರು ರಿಬ್ಬನ್ ಕತ್ತರಿಸುವ ಮುಖಾಂತರ ಮುತ್ತಿರಥ ವಾಹನದ ಲೋಕಾರ್ಪಣೆ ಮಾಡಿದರು.
ಮುಕ್ತಿರಥದ ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿ ಸಹಕಾರ ನೀಡಿದ ಶ್ರೀ ಕೊಟ್ಟುರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ವೀರಶೈವ ರುದ್ರಭೂಮಿ ವ್ಯವಸ್ಥಾಪಕ ಮಂಡಳಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸಿಗೊಳಿಸಿದರು. ಮತ್ತು ಈ ಕಾರ್ಯಕ್ರಮದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಅಭಿಷೇಕ ಸಿಂಗನಾಳ, ಮತ್ತು ಸಲಹಾ ಸಮಿತಿ ಸದಸ್ಯರಾದ ಶ್ರೀ ಸತೀಶ ಭೋಜಶೆಟ್ಟರ್, ರೋಷನಲಾಲ್ ಭಂಡಾರಿ ಹಾಗೂ ಸಹಕಾರಿಯ ಅಂತರಿಕ ಲೆಕ್ಕ, ಪರಿಶೋಧಕರಾದ ಶ್ರೀ ಆರ್ ಜಿ ದೇಶಪಾಂಡೆರವರು ಮತ್ತು ಸಹಕಾರಿಯ ಸಿಬ್ಬಂದಿಗಳು, ಪಿಗಿ ಏಜೆಂಟರು ಪಾಲ್ಗೊಂಡಿದ್ದರು.