ಸದೃಡವಾದ ದೇಹ ಮತ್ತು ಮನಸಿಗಾಗಿ ಕರಾಟೆ ತರಬೇತಿ ಅತ್ಯವಶ್ಯಕ
ಸಾಧನೆ ಮೆಟ್ಟಿಲೇರಲು ಹಾದಿ ಇಲ್ಲಿದೆ

ಬದುಕಲ್ಲಿ ಸಾಧನೆ ಮೆಟ್ಟಿಲೇರಲು ನಿರಂತರ ಶ್ರಮ, ಶ್ರದ್ಧೆ ಇರಬೇಕು. ಸಾಧನೆಯ ಹಾದಿಯಲ್ಲಿರುವವರು ಇತರರಿಗೂ ಮಾರ್ಗದರ್ಶನ ನೀಡುತ್ತಾ ತಮ್ಮೊಟ್ಟಿಗೆ ಕರೆದೋಯ್ದರೆ ಯಶಸ್ಸು ಸುಲಭ. ಎಂದು ತಿಳಿದುಕೊಳ್ಳಬಹುದು.

ಅಂತೆಯೇ ಏರಿಳಿತಗಳಲ್ಲಿ ಎಡವಿ, ಜೀವನವನ್ನು ಕಟ್ಟಿಕೊಂಡು, ಭವಿಷ್ಯದ ಪ್ರತಿಭೆಗಳಿಗೆ ಆತ್ಮರಕ್ಷಣೆ ಮತ್ತು ಸ್ವಯಂ ರಕ್ಷಣೆಯ ಕಲೆಯಾಗಿರುವ ಕರಾಟೆಯ ಜತೆಗೆ ಯೋಗಾಸನ, ಈಜು ಕಲಿಸಲು ‘ಸಕ್ಸಸ್’ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಸಂಘವನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಸೇವೆ, ಸಹಕಾರ, ಹೋರಾಟದ ಮಾಡುವಲ್ಲಿ ಹೆಜ್ಜೆ ಇಟ್ಟಿರುವವರು ಬಾಬುಸಾಬ್.

ಸಕ್ಸಸ್ ಸಂಸ್ಥೆ ಮೂಲಕ ಹಳ್ಳಿಗಾಡಿನ ಪ್ರದೇಶದಲ್ಲಿ ಚಳಿಗೆ ಮೈಮುದಡಿ ಕುಳಿತವರ ಎದೆಯಲ್ಲಿ ಶಿಕ್ಷಣದಷ್ಟೇ ಆತ್ಮರಕ್ಷಣೆ ಕಲೆಯಾದ ಕರಾಟೆ ಮೂಲಕ ಹಲವಾರು ಮಕ್ಕಳಿಗೆ ಆತ್ಮಸ್ಥೈರ್ಯ ತರಬೇತಿಯನ್ನು ಉಚಿತ ಶಿಬಿರಗಳನ್ನು ನೀಡಿದ್ದಾರೆ. ಇವರ ಕರಾಟೆ ಕ್ರೀಡೆಯಲ್ಲಿನ ಸೇವೆ, ಹೋರಾಟ ಮತ್ತು ಸಾಧನೆಯನ್ನು ಪರಿಗಣಿಸಿರುವಂತಹ ಹೆಸರಾಂತ ಸಂಸ್ಥೆ ಕಿಯೋ ಜಪಾನ್ ಶುಟೋಕಾನ್ ಕರಾಟೆ ಡು-ಅಸೋಸಿಯೇಷನ್ ಆಫ್ ಇಂಡಿಯಾ ಉನ್ನತ ಮಟ್ಟದ ಪದವಾಗಿರುವ ಬ್ಲಾಕ್‌ಬೆಲ್ಟ್ 5ನೇ ಡಿಗ್ರಿ (ಸಂಡಾನ್) ಪ್ರಮಾಣ ಪತ್ರವನ್ನು ನೀಡಿ, ಸಂಸ್ಥೆಯ ರಾಜ್ಯದ ಮುಖ್ಯ ತರಬೇತಿದಾರರು ಮತ್ತು ಪರೀಕ್ಷೆದಾರರು ಆಗಿ ನೇಮಕ ಮಾಡಿ ಗೌರವವನ್ನು ಸಲ್ಲಿಸಿರುವುದು ನಿಜಕ್ಕೂ ಶ್ಲಾಘನೀಯ.

ರೆಕಾರ್ಡ್ಸ್:*

1. ನೊಬೆಲ್ ವರ್ಲ್ಡ್ ರೆಕಾರ್ಡ್ (ಯೋಗ, ಕರಾಟೆ )
2. ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ (ಕರಾಟೆ)
3. ಗ್ಲೋಬಲ್ ವರ್ಲ್ಡ್ ರೆಕಾರ್ಡ್ (ಕರಾಟೆ, ಯೋಗ )
4. ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (ಕರಾಟೆ)
5. ನ್ಯಾಷನಲ್ ಬುಕ್ ಆಫ್ ರೆಕಾರ್ಡ್ (ಕರಾಟೆ)
6.ಇಂಟರ್ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ ( ಯೋಗ )
7. ವರ್ಡ್ ವೈಡ್ ಬುಕ್ ಆಫ್  ರೆಕಾರ್ಡ್ (ಯೋಗ )

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು:*

1) ರಾಷ್ಟ್ರೀಯ ರತ್ನ ರಾಷ್ಟ್ರ ಪ್ರಶಸ್ತಿ
2) ಡಾ. ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ
3) ಬ್ರೂಸ್ ಲೀ ಮಾರ್ಷಲ್ ಆರ್ಟ್ಸ್ ರಾಷ್ಟ್ರ ಪ್ರಶಸ್ತಿ
4) ಪೈಲ್ವಾನ್ ರಂಜಾನ್ ಸಾಬ್ ರಾಜ್ಯ ಪ್ರಶಸ್ತಿ
5) ಕರ್ನಾಟಕ ಕ್ರೀಡಾ ರತ್ನ ರಾಜ್ಯ ಪ್ರಶಸ್ತಿ
6) ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ
7) ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿ
8) ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ
9) ಕರ್ನಾಟಕ ಕಲಾ ಕೇಸರಿ ರಾಜ್ಯ ಪ್ರಶಸ್ತಿ
10) ಕರ್ನಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿ
11) ವಿಜಯನಗರ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ
12) ಕನ್ನಡ ಶಿಖಾಮಣಿ ಪ್ರಶಸ್ತಿ
13) ಜೀವಮಾನ ಶ್ರೇಷ್ಠ ಸಾಧನೆ ರಾಜ್ಯ   ಪ್ರಶಸ್ತಿ  ಮುಂತಾದವುಗಳು


ಕರಾಟೆಯಲ್ಲಿನ ಪದವಿಗಳು:*

• ಕಿಯೋ ಜಪಾನ್ ಶುಟೋಕಾನ್ ಕರಾಟೆ ಡು – ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ 5 ನೇ ಪದವಿ (ಸಂದಾನ್) ಪ್ರಮಾಣ ಪತ್ರ ಮತ್ತು ಬೆಲ್ಟ್.

• ಜಿಂಜಿತ್ಸು ಶೋಟೋಕಾನ್ ಕರಾಟೆ ಡು ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ 5ನೇ ಪದವಿ ಪ್ರಮಾಣಪತ್ರ.

• ಇಂಟರ್‌ನ್ಯಾಷನಲ್ ಕರಾಟೆ ಬುಡೋಕಾನ್ ಸಂಸ್ಥೆಯಲ್ಲಿ 1ನೇ ಪದವಿ (ಶೋಡಾನ್) ಪ್ರಮಾಣ ಪತ್ರ.

• ಇಂಟರ್‌ನ್ಯಾಷನಲ್ ಗುಜೂ ರಿಯೋ ಕರಾಟೆ ಡು ರೆನ್ ಮೈ ಸಂಸ್ಥೆಯಲ್ಲಿ 1ನೇ ಪದವಿ (ಶೋಡಾನ್) ಪ್ರಮಾಣ ಪತ್ರ)

ಕರಾಟೆಯಲ್ಲಿನ ಸಾಧನೆಗಳು:*

• ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ನೇತೃತ್ವದಲ್ಲಿ ನಡೆದ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ.

• ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬ್ಲಾಕ್‌ಬೆಲ್ಟ್ ಮಾಸ್ಟರ್ ವಿಭಾಗದಲ್ಲಿ ಪ್ರಥಮ ಸ್ಥಾನ.

• ದೇವಸುಗೂರಿನಲ್ಲಿ ನಡೆದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನಶಿಪ್ ನಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

• ವರ್ಲ್ಡ್ ಆನ್ಲೈನ್ ಕರಾಟೆ ಚಾಂಪಿಯನ್ ಶಿಪ್ ಮಾಸ್ಟರ್ ವಿಭಾಗದಲ್ಲಿ ಪ್ರಥಮಸ್ಥಾನ.

• ಸಾರ್ವಜನಿಕ ಶಿಕ್ಷಣ ಇಲಾಖೆಯ ಕೊಪ್ಪಳ ಇವರ ನೇತೃತ್ವದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆ ಯಲ್ಲಿ ಶಿಕ್ಷಕರು ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

• ಸಿಂಧನೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬ್ಲಾಕ್‌ಬೆಲ್ಟ್ ಮಾಸ್ಟರ್ ವಿಭಾಗದಲ್ಲಿ ಪ್ರಥಮ ಸ್ಥಾನ.

• ಪಂಜಾಬ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬ್ಲಾಕ್ ಬೆಲ್ಟ್ ಮಾಸ್ಟರ್ ವಿಭಾಗದಲ್ಲಿ ದ್ವಿತೀಯ ಸ್ಥಾನ.

• ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಆನ್ಲೈನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬ್ಲಾಕ್ ಬೆಲ್ಟ್ ಮಾಸ್ಟರ್ ವಿಭಾಗದಲ್ಲಿ ಪ್ರಥಮಸ್ಥಾನ.

• ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ.

• ಗಂಗಾವತಿಯಲ್ಲಿ ನಡೆದ ಎರಡು ಬಾರಿ ರಾಷ್ಟ್ರಮಟ್ಟದ ಬ್ಲಾಕ್‌ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ.

ಈ ಎಲ್ಲಾ ಸಾಧನೆಯ ಜತೆಗೆ ಮಕ್ಕಳಿಗೆ ತರಬೇತಿ‌ ನೀಡಿ‌ ಉರಿದುಂಬಿಸಲು‌ ಪಣತೊಟ್ಟ ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಗೆ ನಿಮ್ಮ ಮಕ್ಕಳನ್ನು‌ ಕರೆತಂದರೆ ಅವರ ಭವಿಷ್ಯದ ಜೀವನ ಉಜ್ವಲವಾಗಿರಲಿದೆ ಎನ್ನುವುದು ಬಾಬುಸಾಬ್ ಅವರ ಆಶಯ.

ಬಾಕ್ಸ್

*ಶಿಕ್ಷಣದಷ್ಟೇ ಕಲೆ ಮಹತ್ವ:*

ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಎಷ್ಟು‌ ಮುಖ್ಯವೋ ಅಷ್ಟೇ, ಅವರಿಗೆ ಕಲೆಯಲ್ಲಿ ತೊಡಗಿಸುವುದು ಮುಖ್ಯವಾಗಿದೆ. ಜತೆಗೆ ಅವರ ಆತ್ಮ ರಕ್ಷೆಣೆಗೆ ಉಪಯೋಗವಾಗುವ ಕರಾಟೆ, ಈಜು, ಯೋಗಾಸನಗಳನ್ನು ಕಲಿತರೆ ಯಾವುದೇ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಬದುಕಬಹುದು. ಹೀಗಾಗಿ ಈ ಕಲೆಗಳನ್ನು ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕಲೆಗಳ ಬಗ್ಗೆ ತಿಳಿಸಿದ್ದಲ್ಲಿ ಸಮಾಜದಲ್ಲಿ ಉತ್ತಮವಾಗಿ ಬದುಕಬಹುದು ಎಂದು ‘ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್’ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.

ಬಾಕ್ಸ್

*ಬದುಕಿಗೆ ಆತ್ಮಸ್ಥೈರ್ಯ:*

ಕರಾಟೆ, ಈಜು, ಯೋಗಾಸನ, ಪ್ರಾಣಾಯಾಮಗಳು ದೈಹಿಕ ಸದೃಡತೆಗೆ ಸಹಕಾರಿಯಾಗುವುದಲ್ಲದೇ ಮಾನಸಿಕವಾಗಿ ಗಟ್ಟಿಗೊಳಿಸಿ, ಬದುಕಿಗೆ ಆತ್ಮಸ್ಥೈರ್ಯವನ್ನು ತುಂಬುತ್ತವೆ. ಪ್ರಸ್ತುತ ದಿನಗಳಲ್ಲಿ ಅವುಗಳ ಮಹತ್ವ ಕೂಡ ಪ್ರಮುಖವಾಗಿದೆ. ಅಲ್ಲದೇ ಈ ಕಲೆಗಳನ್ನು ಕರಗತ ಮಾಡಿಕೊಂಡರೆ ಇನ್ನೊಬ್ಬರಿಗೂ ಸಹಾಯ ಮಾಡಲುಬಹುದು. ಹೀಗಾಗಿ‌ ಇಂಥ ಕಲೆಗಳು ಜೀವನಕ್ಕೆ ಅತ್ಯಮೂಲ್ಯವಾಗಿವೆ.
———

ಬಡಮಕ್ಕಳಿಗೆ ಹೊರೆಯಾಗದಂತೆ ಸಮಂಜಸವಾದ ಶುಲ್ಕದೊಂದಿಗೆ ಮಕ್ಕಳಿಗೆ ಕರಾಟೆ, ಈಜು, ಯೋಗಾಸನ, ಕ್ರೀಡೆಗಳ ತರಬೇತಿ ನೀಡುತ್ತಿರುವ ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ನಿಮ್ಮ ಮಕ್ಕಳ ಹೊಳಪಿನ ಜೀವನಕ್ಕೆ ಜೀವ‌ನೀಡಲಿದೆ. ಈಗಾಗಲೇ ಈ ಸಂಸ್ಥೆಯಲ್ಲಿ ಸೇರಿ ಹಲವು ಸಾಧನೆ ಮಾಡಿರುವ ಮಕ್ಕಳು ಇದಕ್ಕೆ ನಿದರ್ಶನ. ಈಗ ತರಬೇತಿ ಕೇಂದ್ರಗಳು ಆರಂಭಗೊಳ್ಳುವುದರಿಂದ ಕಾಲಹರಣ ಮಾಡದೇ ನಿಮ್ಮ ಮಕ್ಕಳಿಗೆ ಈ ಸಂಸ್ಥೆಯಲ್ಲಿ ತರಬೇತಿ ನೀಡಿದರೆ ಸಾಧನೆ ಮೈಲುಗಲ್ಲು ಅತಿ ಸುಲಭವಾಗಿ ತಲುಪಬಹುದು..

ಸಂಪರ್ಕಕ್ಕಾಗಿ
ಮೊ.ಸಂ: 9945100938 (ಬಾಬುಸಾಬ್, ಮುಖ್ಯ ತರಬೇತಿದಾರ, ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್. ಗಂಗಾವತಿ ಮತ್ತು ಬಸಾಪಟ್ಟಣ )

error: Content is protected !!