ಗಂಗಾವತಿ: ಇಂದು ದಿನಾಂಕ: 17-0602023 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗಂಗಾವತಿಯ ತಹಶೀಲ್ ಕಛೇರಿ ಮುಂದೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ಮಾಡಿ ಗ್ರೇಡ್-೨ ತಹಶೀಲ್ದಾರರಾದ ವಿ.ಹೆಚ್. ಹೊರಪೇಟಿಯವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಮಾತನಾಡಿ, ವಿದ್ಯುತ್ ದರ ಹೆಚ್ಚಿಸಿರುವುದನ್ನು ರದ್ದುಪಡಿಸುವುದು, ಹೊಸ ತಾಲ್ಲೂಕುಗಳಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳನ್ನು ಪ್ರಾರಂಭಿಸುವುದು.

ಗಂಗಾವತಿಯ ಮಿನಿವಿಧಾನಸೌಧದ ಬಳಿ ಇಂದಿರಾ ಕ್ಯಾಂಟೀನ್   ಪ್ರಾರಂಭಿಸುವುದರಿಂದ ಕೊಲ್ಲಿನಾಗೇಶ್ವರರಾವ್ ಕಾಲೇಜು, ಶ್ರೀರಾಮುಲು ಕಾಲೇಜು, ಸರ್ಕಾರಿ ಐ.ಟಿ.ಐ ಕಾಲೇಜು, ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಹಾಗೂ ಹೆರಿಗೆ ಆಸ್ಪತ್ರೆಗೆ ಬರುವ ಬಡವರಿಗೆ ಅನುಕೂಲವಾಗುತ್ತದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಸುವುದು.

ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್) ಯನ್ನು ರದ್ದುಪಡಿಸುವುದು, ಅಂಜನಾದ್ರಿ ಬೆಟ್ಟವನ್ನು ಪರಿಸರ ನಾಶವಾಗದಂತೆ ೩ ಕಿ.ಮೀ ಅಂತರದಲ್ಲಿ ಯಾತ್ರಿ ನಿವಾಸ, ಪಾರ್ಕಿಂಗ್ ಇತ್ಯಾದಿಗಳನ್ನು ನಿರ್ಮಿಸುವುದು, ಮುಂಗಾರು ಮಳೆ ವಿಫಲವಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಮುಖ್ಯಮಂತ್ರಿ ಆಪತ್ತು ನಿಧಿಯಿಂದ ರೈತರಿಗೆ ಪರಿಹಾರಧನ ನೀಡಬೇಕು ಹಾಗೂ ಉಚಿತ ಬೀಜ, ರಸಗೊಬ್ಬರಗಳನ್ನು ವಿತರಿಸಬೇಕು, ನಿವೇಶನರಹಿತ ಮತ್ತು ವಸತಿರಹಿತ ಕುಟುಂಬಗಳು ಬಹಳ ತೊಂದರೆಯಲ್ಲಿದ್ದು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಹಾಗೆ ಗೃಹಭಾಗ್ಯ ಯೋಜನೆ ಜಾರಿಗೆ ತಂದು ಎಲ್ಲಾ ಬಡಜನರಿಗೆ ನಿವೇಶನ ಹಾಗೂ ವಸತಿ ಕಲ್ಪಿಸಿಕೊಡಬೇಕೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಕೃಷ್ಣ ಹೊಸಳ್ಳಿ, ದುರುಗೇಶ ಹೊಸಳ್ಳಿ, ದುರುಗೇಶ, ಮಹೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!