ಬಳ್ಳಾರಿ: ಸಿರುಗುಪ್ಪ ಪಟ್ಟಣದಲ್ಲಿ ಖಾಸಗಿ ಶಾಲೆಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜರುಗಿದೆ. ಮಕ್ಕಳು ಶಾಲೆಯಲ್ಲಿ (School) ಕುಳಿತು ಪಾಠ ಕೇಳುತ್ತಿರುವ ಸಂದರ್ಭದಲ್ಲೇ ಈ ರೀತಿಯಾಗಿದೆ. ಆದರೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲಾ ಎಂದು ವರದಿಯಾಗಿದೆ.
ಸಿರುಗುಪ್ಪದ ಸುದೀಕ್ಷಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಈ ಘಟನೆ (Incident) ಜರುಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.
ತಪ್ಪಿದ ಭಾರಿ ದುರಂತ,ಶಾಲೆ ಮಕ್ಕಳು ಬಚಾವ್
ತರಗತಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುತ್ತಿದ್ದ ಸಂದರ್ಭ, ಜೂನ್ ತಿಂಗಳಿನಿಂದ ಸಾಮಾನ್ಯವಾಗಿ ಎಲ್ಲಾ ಶಾಲೆಗಳು ಆರಂಭವಾಗಿದೆ. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಶಾಲೆಗೆ ಹೋಗಲು ಪ್ರಾರಂಭಿಸಿದ್ದಾರೆ. ಮಳೆಗೆ ಚಾವಣಿ ಕಟ್ಟಡ ಕುಸಿಯುವ ಸಂಗತಿಗಳೂ ಸಹ ನಡೆದಿವೆ. ರಾಜ್ಯದಲ್ಲಿ ಈ ರೀತಿ ಅವಾಂತರಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಾಲೆಗೆ ಬೆಂಕಿ ತಗಲಿರುವ ಘಟನೆ ಜರುಗಿದೆ.
ಅಗ್ನಿ ಅವಘಡ ತಪ್ಪಿಸಲು ಹಲವರ ಯತ್ನ
ಸ್ಟೋರ್ ರೂಮ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಈ ಕಾರಣದಿಂದ ಬೆಂಕಿ ಎಲ್ಲೆಡೆ ಹರಡುತ್ತಾ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡು ಶಾಲೆಯ ಸಿಬ್ಬಂದಿ ಇದನ್ನು ಎಲ್ಲರಿಗೂ ತಿಳಿಸಿ ಹಿಂದಿನ ಬಾಗಿಲಿನಿಂದ ವಿದ್ಯಾರ್ಥಿಗಳನ್ನು ಹೊರಗಡೆ ಸಾಗಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ.

ಅವಘಡದಲ್ಲಿ ಯಾವುದೇ ಮಕ್ಕಳಿಗೆ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.
ಸ್ಟೋರ್ ರೂಮ್ ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ. ತಕ್ಷಣ ಅಗ್ನಿಶಾಮಕದಳಕ್ಕೆ ಫೋನ್ ಮಾಡಿರುವುದರಿಂದಾಗಿ ಅವರು ಆಗಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂಬುದು ತಿಳಿದುಬಂದಿದೆ.
ಪ್ರೈಮರಿ ಮತ್ತು ಹೈಯರ್ ಪ್ರೈಮರಿ ತರಗತಿ ನಡೆಸುತ್ತಿರುವ ಶಾಲೆ ಇದಾಗಿದ್ದು, ಸಿರುಗುಪ್ಪದ ಬಳ್ಳಾರಿ ರಸ್ತೆಯಲ್ಲಿ ಈ ಶಾಲೆ ಇದೆ ಎಂಬುದು ತಿಳಿದು ಬಂದಿದೆ. ಇಂದು 12 ಗಂಟೆ ಸುಮಾರಿಗೆ ಈ ವಿದ್ಯುತ್ ಅವಘಡ ನಡೆದಿದೆ. ನಿನ್ನೆಯೂ ಕೂಡಾ ಇಂಥದ್ದೇ ಒಂದು ಘಟನೆ ಜರುಗಿತ್ತು ಅಲ್ಲಿ ಕೂಡಾ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಯಾರೋ ಕಿಡಿಗೇಡಿಗಳು ಸಿಗರೇಟ್ ಸೇದಿ ತರಗತಿ ಒಳಗಡೆ ಎಸೆದಿರುವ ಅನುಮಾನವಿತ್ತು.