ಬೆಂಗಳೂರು, ಜೂನ್‌ 6: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ ನಮಗೆ ನಮ್ಮ ಪಕ್ಷದ ಬೆಳವಣಿಗೆ ಮುಖ್ಯ ಎಂದು ಹೇಳಿದ್ದಾರೆ.

ನಮ್ಮ ಪಕ್ಷವನ್ನು ನಾವೇ ಬೆಳೆಸುವುದು ನಮ್ಮ ಆದ್ಯತೆಯಾಗಿದೆ, ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಈಗಾಗಲೇ ಮುಗಿಸಿದ್ದೇವೆ ಎಂದು ಭಾವಿಸಿ ಭ್ರಮೆಯಲ್ಲಿದ್ದಾರೆ.

ನಾವು ನಮ್ಮ ಪಕ್ಷವನ್ನು ಸಂಘಟಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಸಾಧನೆ ಹೇಗಿರುತ್ತೆ ಅಂತ ಗೊತ್ತು. ಅವರು ಯಾವ ರೀತಿ ಉತ್ತಮ ಆಡಳಿತ ನಡೆಸುತ್ತಾರೆ ಎಂಬುದು ನನಗೆ ಗೊತ್ತು ಎಂದು ಅವರು ಹೇಳಿದ್ದಾರೆ.

ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕಲ್ಲ ಅಗತ್ಯ ಬಿದ್ದರೆ ಜನರಿಗಾಗಿ ಯುದ್ದ ಮಾಡಲೂ ಸಿದ್ದ. ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಧರಣಿ ಮಾಡ್ತಾ ಇದಾರೆ. ಯಾವ ಕಾರಣಕ್ಕಾಗಿ ಧರಣಿ ಮಾಡ್ತಾ ಇದೀರಾ? ನಿಮ್ಮ ಕಾಲದಲ್ಲೇ ದರ ಹೆಚ್ಚಳಕ್ಕೆ ಅರ್ಜಿ ಹಾಕಿದ್ದು ನೀವೇ. ಎರಡು ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಿ ಅಂತಲೇ ರಾಜ್ಯದ ಜನಕ್ಕೆ ನಾನು ಮನವಿ ಮಾಡೋದು, ನೋಡಿ ತೀರ್ಮಾನ ಮಾಡಿ ಅಂತ. ಎಲ್ಲದಕ್ಕೂ ದೆಹಲಿಗೆ ಅರ್ಜಿ ಹಿಡಿದುಕೊಂಡು ದೆಹಲಿಗೆ ಹೋಗಬೇಕಿದೆ ಎಂದರು.

ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಾ. ಈಗ ನಿಮಗೆ ಅದರ ಸಾಧಕ ಭಾದಕ ಅರ್ಥ ಆಯ್ತಾ? ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ.? ನಿಮಗೆ ಪರಿಜ್ಞಾನ ಇರಲಿಲ್ಲವಾ ಈಗ ಷರತ್ತು ಹಾಕ್ತಿದೀರಲ್ಲ.? ಈಗ ಬಾಡಿಗೆದಾರರ ಕಥೆ ಏನು.? ಎಲ್ಲರಿಗೂ ಉಚಿತ,ನಿಶ್ಚಿತ, ಖಚಿತ ಅಂದವರು ನೀವು ಎಂದು ಕಿಡಿಕಾರಿದ್ದಾರೆ.

ಇನ್ನು 2024 ರ ಚುನಾವಣೆಗೆ ವಿರೋಧ ಪಕ್ಷಗಳು ಒಗ್ಗೂಡುವ ಬಗ್ಗೆ ಕೇಳಿದಾಗ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಬಗ್ಗೆ ನಾವು ಯಾವುದೇ ಚರ್ಚೆ ನಡೆಸಿಲ್ಲ. ಮೊದಲನೆಯದಾಗಿ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಬಾಲಸೋರ್‌ನಲ್ಲಿ ರೈಲು ದುರಂತದಿಂದ ಸಂಭವಿಸಿದ ಹಾನಿಯನ್ನು ಪರಿಹರಿಸಲು ರೈಲ್ವೆ ಸಚಿವರು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಅವಿರತವಾಗಿ ದುಡಿಯುತ್ತಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲಿ. ಸಚಿವರು ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಈ ಹಂತದಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸುವುದು ಬುದ್ಧಿವಂತಿಕೆಯಲ್ಲ ಎಂದು ಹೇಳಿದರು.

error: Content is protected !!