ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿ ಭರವಸೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ. ಇದೀಗ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು(Gruha Lakshmi Yojana) ಅಧಿಕೃತವಾಗಿ ಘೋಷಣೆ ಮಾಡಿದೆ.

ಈ ಮೂಲಕ ಸಾಕಷ್ಟು ದಿನಗಳಿಂದ ಭಾರಿ ಚರ್ಚೆಯಲ್ಲಿದ್ದ ವಿಚಾರಕ್ಕೆ ರಾಜ್ಯ ಸರ್ಕಾರ ಬ್ರೇಕ್‌ ಹಾಕಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಇನ್ನು ಈ ಯೋಜನೆಯು ಯಾವುದೇ ಷರತ್ತುಗಳಿಲ್ಲದೆ ಜಾರಿಯಾಗುತ್ತಿದ್ದು, ಪ್ರತಿ ಮನೆಯ ಮನೆಯೊಡತಿಗೆ ಮಾಸಿಕವಾಗಿ ಎರಡು ಸಾವಿರ ರೂ.ಗಳು ದೊರೆಯಲಿದೆ. ಆದರೆ ಈ ಯೋಜನೆಯ ಲಾಭ ಪಡೆಯಲು ನೀವು ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಸ್ಕೀಮ್‌ ಇದೇ ವರ್ಷ ಆಗಸ್ಟ್‌ 15 ರಿಂದ ಜಾರಿಗೆ ಬರಲಿದೆ. ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ವಿಚಾರ ತಿಳಿಸಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ನಾವು ಇದೇ ವರ್ಷ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಲಾಭ ಯಾರಿಗೆ?

ಗೃಹಲಕ್ಷ್ಮೀ ಯೋಜನೆಯು ಪ್ರತಿ ಮನೆಯ ಯಜಮಾನಿಗೆ ದೊರೆಯುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮನೆ ಒಡತಿಯ ಖಾತೆಗೆ ನೇರವಾಗಿ 2000ರೂ. ಜಮೆ ಮಾಡಲಾಗುತ್ತದೆ. ಇನ್ನು ಈ ಯೋಜನೆಗೆ ಯಾವುದೇ ಷರತ್ತುಗಳಿಲ್ಲ ಅನ್ನೊದನ್ನ ಸರ್ಕಾರ ಹೇಳಿದೆ. ಆದರೆ ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ದಿ ಪಡಿಸಬೇಕಿರುವುದರಿಂದ ಜೂನ್‌ ಹದಿನೈದರಿಂದ ಅರ್ಜಿ ಕರೆಯುವುದಾಗಿ ಸರ್ಕಾರ ಹೇಳಿದೆ. ಇದರಲ್ಲಿ ಐಪಿಎಲ್‌, ಬಿಪಿಎಲ್‌ ಕಾರ್ಡ್‌ದಾರರು ಎಂಬ ಯಾವುದೇ ಬೇದ ಭಾವವಿಲ್ಲ ಎಂದು ಹೇಳಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?

ಇನ್ನು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಮನೆ ಒಡತಿಯ ಬಳಿ ಬ್ಯಾಂಕ್‌ ಅಕೌಂಟ್‌ ಇರುವುದು ಕಡ್ಡಾಯವಾಗಿದೆ. ಅಲ್ಲದೆ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿರುವುದು ಕೂಡ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಆದರಿಂದ ಗೃಹಲಕ್ಷ್ಮೀ ಯೋಜನೆಗೆ ಅಕೌಂಟ್​ ನಂಬರ್, ಆಧಾರ್​ ನಂಬರ್​, ಕಡ್ಡಾಯವಾಗಿದೆ. ಇನ್ನು ಈ ಯೋಜನೆಯ ಅರ್ಜಿಯನ್ನು ಜೂನ್‌ 15 ರಿಂದ ಪ್ರಾರಂಭಿಸಿ ಜುಲೈ 15 ರ ತನಕ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

ನೀವು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿದಾರರ ಎಲ್ಲಾ ಮಾಹಿತಿಯನ್ನು ಪ್ರಾಸೆಸ್ ಮಾಡಿ ಆಗಸ್ಟ್​ 15ನೇ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರುವುದಾಗಿ ಸರ್ಕರ ಹೇಳಿದೆ. ಅಲ್ಲದೆ ಈ ಯೋಜನೆಯು ಈಗಾಗಲೇ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯತ್ತಿರುವವರಿಗೂ ಕೂಡ ದೊರೆಯಲಿದೆ ಎಂದು ಹೇಳಲಾಗಿದೆ.

ಇನ್ನು ಇದೇ ಸಮಯದಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಲ್ಲಿ 200ಯೂನಿಟ್‌ ವಿದ್ಯುತ್‌ ಉಚಿತವಾಗಿ ಲಭ್ಯವಾಗಲಿದೆ. ಈ ಯೋಜನೆಯನ್ನು ಒಂದು ವರ್ಷದ ಸರಾಸರಿ ಬಳಕೆಯ ಮಾಹಿತಿ ಪಡೆದುಕೊಂಡು ಅದರ ಆಧಾರದ ಮೇಲೆ 10% ವಿದ್ಯುತ್‌ ಉಚಿತವಾಗಿ ದೊರೆಯಲಿದೆ. ಆದರೆ ಇಲ್ಲಿಯವರೆಗೆ ನೀವು ಉಳಿಸಿಕೊಂಡಿರುವ ಹಳೆಯ ಬಾಕಿಯನ್ನು ಪಾವತಿಸುವುದು ಕಡ್ಡಾಯವಾಗಿದೆ.

ಇದಲ್ಲದೆ ಉಚಿತ ಬಸ್ ಯೋಜನೆ ಅಡಿಯಲ್ಲಿ ಎಲ್ಲಾ ಅಂದರೆ ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆರಿಗೆ ಜೂನ್ 11ರಿಂದ ಉಚಿತ ಬಸ್ ಪ್ರಯಾಣ ಮಾಡಬಹುದು. ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ. ಇನ್ನುಳಿದಂತೆ ರಾಜಹಂಸ, ಕೆಎಸ್​ಆರ್​ಟಿಸಿಯ ಎಲ್ಲಾ ಎಕ್ಸ್​ಪ್ರೆಸ್, ಬಿಎಂಟಿಸಿ ಬಸ್​ಗಳಲ್ಲಿ ಕರ್ನಾಟಕದೊಳಗೆ ಪ್ರಯಾಣಿಸಬಹುದು.


error: Content is protected !!