ಕುಕನೂರು: ಇಟಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಪುಣ್ಯಶ್ರಮ ಕ್ಷೇಮಾಭಿವೃದ್ಧಿ ಸಂಘ ಸರ್ವ ಭಕ್ತರ ಸಹಯೋಗದಲ್ಲಿ ಜನವರಿ 26ರಂದು ಗ್ರಾಮದ ಶ್ರೀ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದು ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಗೆದಿಗೆಪ್ಪಜ್ಜನವರು ತಿಳಿಸಿದರು.
ಕುಕನೂರು ಪಟ್ಟಣದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತ ತಾಲೂಕಿನ ಇಟಗಿ ಗ್ರಾಮದ ಮರಳು ಸಿದ್ದೇಶ್ವರ ಪುಣ್ಯಶ್ರಮ ಕ್ಷೇಮಾಭಿವೃದ್ಧಿ ಸಂಘ, ಸದ್ಭಕ್ತರು ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಶ್ರೀ ಗದಿಗೆಪ್ಪಜ್ಜನವರ ಸರ್ವಭಕ್ತರ ಸಹಯೋಗದಲ್ಲಿ ಜನವರಿ 26 ರಂದು ಅವರ ಗೆದಿಗೆಪಜ್ಜನವರ ಕಿರಿಯ ಪುತ್ರಿಯ ಮದುವೆಯ ಕಾರ್ಯಕ್ರಮದಲ್ಲಿ ಜಾಂಬವ ಸಮಾಜದ ಗುರುಗಳ ಗುರುವಂದನ ಸಭೆ ಹಾಗೂ ಕನಿಷ್ಠ 51 ನವ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಇಟಗಿ ಗ್ರಾಮದ ಮಹೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಪುಣ್ಯಶ್ರಮದ ಸೇವಾಕಾಂಕ್ಷಿಗಳು ಮತ್ತು ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಮರುಳಸಿದ್ದೇಶ್ವರ ಪುಣ್ಯಶ್ರಮದ ಶಿವಶರಣರಾದ ಗದಿಗೆಪ್ಪಜ್ಜನವರ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶ್ವರರು ಭಾಗವಹಿಸುವುದಾಗಿ ತಿಳಿಸಿದರು ಹಾಗೂ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲಿಚ್ಚಿಸುವವರು 9448204046,9663881611 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದಿನಾಂಕ 10-1-2023ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಸದ್ಧರ್ಮ ಪೀಠ ಗುರು ಮರಳಸಿದ್ದ ಪ್ರಭುದೇವರ ಮಹಾಮನೆ ಮಹಾಮಠದ ಶ್ರೀ ಶಿವಮುನಿ ಸ್ವಾಮೀಜಿ ಉಪಸ್ಥಿತಿ ಇದ್ದರು.