ಕುಕನೂರು:-ಸಂಗೀತವೆಂಬುದು ಒಂದು ಅಗಾಧಶಕ್ತಿಯಾಗಿದ್ದು ಮಾನವ ಮಾನವನಿಗೆ ಚೈತನ್ಯ ತುಂಬವ ಶಕ್ತಿ ಸಂಗೀತದಲ್ಲಡಗಿದೆ ಎಂದು ಕುಕನೂರಿನ ಅನ್ನದಾನಿಶ್ವರ ಶಾಖ ಮಠದ ಪೂಜ್ಯರಾದ ಡಾಕ್ಟರ್ ಮಹಾದೇವ ದೇವರು ತಿಳಿಸಿದರು.
ಕುಕುನೂರು ಪಟ್ಟಣದ ಇಟಗಿ ಮಸೊತಿ ಸಮೀಪದ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಕುಕನೂರು ಹಾಗೂ 2022-23ನೆ ಸಾಲಿನ ಸಂಘ ಸಂಸ್ಥೆಗಳ ಧನಸಹಾಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಗಾನ ಲಹರಿ 2022 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಸಂಗೀತಕ್ಕೆ ಮನಸೋಲುವ ವ್ಯಕ್ತಿತ್ವ ಹೊಂದಿದ್ದು ಸಂಗೀತಕ್ಕೆ ಮನಸೋಲದ ವ್ಯಕ್ತಿ ಸಿಗುವ ಸಾಧ್ಯತೆಗಳೆ ಇಲ್ಲ ಆದ್ದರಿಂದ ಪ್ರತಿಯೊಬ್ಬರೂ ಸಂಗೀತದ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಮತ್ತು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ಪದೇಪದೇ ಜರುಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ರುದ್ರಪ್ಪ ಭಂಡಾರಿ ಮಾತನಾಡುತ್ತ ರಾಜ ಮಹಾರಾಜರ ಕಾಲದಿಂದಲೂ ಸಂಗೀತ ವಿದ್ಯೆಯು ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬಂದಿರುತ್ತದೆ ಕರ್ನಾಟಕ ಹಾಗೂ ಭಾರತದಲ್ಲಿ ಸಂಗೀತದ ದೊಡ್ಡ ಪರಂಪರೆ ಸಿಗುತ್ತದೆ, ಪ್ರಪಂಚದಲ್ಲಿ ಸಂಗೀತ ಒಂದು ಅದ್ಭುತ ಕಲೆಯಾಗಿದ್ದು ಕಲಾವಿದರನ್ನು ಗೌರವಿಸಿ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮೆಲ್ಲರದ್ದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುರಾರಿ ಭಜಂತ್ರಿ ರವರ ತಂಡದಿಂದ ಸುಗಮ ಸಂಗೀತ, ಸುಮತಿ ಮಂಜುನಾಥ್ ಭಜಂತ್ರಿ ಅವರ ತಂಡದಿಂದ ಹಿಂದುಸ್ತಾನಿ ಗಾಯನ, ಮುಕುಂದ ಶಿವಕುಮಾರ್ ಭಜಂತ್ರಿ ಅವರು ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಶೇಖಪ್ಪ ಕಂಬಳಿ, ಶಿವಪ್ಪ ಸಂದಿಮನಿ, ಕಳಕಪ್ಪ ಭೋರಣವರ, ಮಹಾಂತೇಶ್,ಹೊಗಾರ ಬಸವರಾಜ್ ಜಂಗ್ಲಿ, ಹುಸೇನಸಾಬ ಜೋಕಾಲಿ,ಮಲ್ಲು ಚೌದ್ರಿ, ಇನ್ನಿತರರು ವೇದಿಕೆಯಲ್ಲಿದ್ದರು.