ಕಾರಟಗಿ: ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಗಲಿನಲ್ಲಿಯೆ ಅಕ್ರಮವಾಗಿ ರಾಜರೋಷವಾಗಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದು, ಗುಂಡೂರು ಗ್ರಾಮದಲ್ಲಿ ಸಾಯಂಕಾಲ 5 ಗಂಟೆಗೆ ಟಾಟಾ ಎಸ ವಾಹನದ ವಾಹನದ ಮುಲಕ ಅಕ್ಕಿಚೀಲಗಳನ್ನು ಲೋಡ್ ಮಾಡುವುದು ಬೆಳಕಿಗೆ ಬಂದಿದೆ ಇದನ್ನು ತಡೆಯಲು ಹೋದ ಸಂಘಟನೆಗಾರರ ಮೇಲೆ ಹಲ್ಲೆ ಮಾಡಿ ಅವರ ಪೋನ್ ಕಸಿದುಕೊಂಡ ಘಟನೆಗೆ ಗುಂಡೂರು ಸಾಕ್ಷಿಯಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಟಗಿ ತಶೀಲ್ದಾರರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ದೂರವಾಣಿಯಲ್ಲಿ ಮಾತನಾಡಿದ ತಹಸಿಲ್ದಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕಳಿಸಿಕೊಡುತ್ತೇನೆ ಎಂದು ಹೇಳಿ ತದನಂತರ ತಮ್ಮ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ತಹಸಿಲ್ದಾರರು ಸಹ ಶಾಮಿಲು ಆಗಿರಬಹುದು ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತಿದ್ದು, ಸಂಘಟನಾಕಾರರು ತಹಸಿಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಟಾಟಾ ಎಸ್ ಮಾಲಿಕ ಹಾಗೂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.