ಗಂಗಾವತಿ: ಗಂಗಾವತಿ ನಗರದ ಕನ್ನಿಕ ಪರಮೇಶ್ವರ ದೇವಸ್ಥಾನ ಹತ್ತಿರ ಚರಂಡಿ ತುಂಬಿ ತುಳುಕುತ್ತಿದ್ದ, ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ನಗರಸಭೆ ಸದಸ್ಯರು ಮತ್ತು ಅಧಿಕಾರಿ ವರ್ಗದವರು ನಿರ್ಲಕ್ಷ್ಯ ಕಾರಣ ವಾರ್ಡ್ ನ ಯುವಕರು ಆರೋಪ ಮಾಡಿದ್ದಾರೆ. ಹಿರೇಜಂತಕಲ್ಲ ಯಿಂದ ಕಂಪ್ಲಿ, ಮಾರ್ಗ ಹೋಗುವ ಮಾರ್ಗದಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ.
ಚರಂಡಿ ತುಂಬಿ ಚರಂಡಿ ನೀರು ರಸ್ತೆಯಲ್ಲಿ ಹರಿದು ಕೆಸರು ಗದ್ದೆಯಂತಾಗಿದ್ದು, ನಗರದ ಚರಂಡಿ ಸ್ವಚ್ಛತೆ ಕಾಮಗಾರಿಯನ್ನು ಮಾಡದೇ ನಗರ ಸಭೆ ಅಧಿಕಾರಿಗಳು ಹಾಗೂ ಸದಸ್ಯರು ವಾರ್ಡನ ಕಡೆ ಗಮನ ಹರಿಸದೇ ಸಾರ್ವಜನಿಕರು ರೋಗಕ್ಕೆ ತುತ್ತಾಗುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮ ಜರುಗಿಸಿ ಚರಂಡಿ ಸ್ವಚ್ಛತೆ ಮಾಡಿಸಬೇಕೆಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಚಳಿಗಾಲದಲ್ಲಿ ಜಿಟಿ,ಜಿಟಿ ಮಳೆಯ ಆಗುತ್ತಿದ್ದು ಇದರಿಂದ ನಗರದ ಚರಂಡಿ ನೀರು ತುಂಬಿ ತುಳುಕುತ್ತಿದ್ದು ನಗರಸಭೆ ಅಧಿಕಾರಿ ಈ ಕಡೆ ಗಮನ ಹರಸಿಲ್ಲ,ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿದೆ.ಹಿರಿಯರು , ಅಂಗವಿಕಲರು ವೃದ್ಧರು ಸಂಚರಿಸುವ ಸಮಯದಲ್ಲಿ ಅಪಘಾತ ಸಂಭವಿಸಿದರೆ ಯಾರು ಹೊಣೆ.?

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇವತ್ತು ನಗರದಲ್ಲಿ ಚರಂಡಿಗಳು ಗಬ್ಬು ನಾರುತ್ತಾವೆ.ಮುಂದಿನ ದಿನಗಳಲ್ಲಿ ಸರಿಪಡಿಸುತ್ತಾರೋ ಇಲ್ಲವೋ ಎಂದು ಕಾದು ನೋಡ ಬೇಕಿದೆ. ಮತ್ತು ರಸ್ತೆಗಳು ಕೂಡ ತಗ್ಗು, ಗುಂಡಿಗಳಾಗಿವೆ.ಎಂದು ಸಾರ್ವ ಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ

error: Content is protected !!