ಗಂಗಾವತಿ:ನಗರ ಗ್ರಾಮದೇವತೆ ಶ್ರೀ ದುರ್ಗಾದೇವಿ 5ನೇ ವರ್ಷದ ವಿಶೇಷ ಜಾತ್ರಾ ಮಹೋತ್ಸವ ಇದೇ ದಿನಾಂಕ 20 ರಿಂದ ಆರಂಭಗೊಂಡು 23ನೇ ಡಿಸೆಂಬರ್ ವರೆಗೆ ಅತ್ಯಂತ ಶ್ರದ್ಧೆ ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಜೋಗದ ನಾರಾಯಣಪ್ಪನಾಯಕ ಹೇಳಿದರು, ಅವರು ಮಂಗಳವಾರದ ದೇವಸ್ಥಾನದ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ
ಮಾತನಾಡಿದರು,

ದಿನಾಂಕ 21 ಮಂಗಳವಾರ ಪೂರ್ಣ ಕುಂಭದ ಮೆರವಣಿಗೆ ಕಲ್ಮಟ್ಟದ ಬಳಿ ಇರುವ ಶ್ರೀ ಗಾಳೆಮ್ಮ ದೇವಸ್ಥಾನದಿಂದ ಶ್ರೀ ದುರ್ಗಾದೇವಿ ದೇವಸ್ಥಾನದವರೆಗೆ ಬಳಿಕ ಮಹಾಸಂಕಲ್ಪ ದುರ್ಗಾ ಸಪ್ತಶತಿ ಪಾರಾಯಣ ಸೇರಿದಂತೆ ಅನ್ನ ಸಂತರ್ಪಣೆ ಸೇರಿದಂತೆ

ಸಂಜೆ 6 ಗಂಟೆಗೆ ಕುಂಕುಮಾರ್ಚನೆ ಜರುಗಳಿದೆ, 21ರಂದು ಬುಧವಾರ ಗಣಪತಿ ಪೂಜೆ ದುರ್ಗಾಸಪ್ತಶತಿ ಪಾರಾಯಣ ಎಂದಿನಂತೆ ಅನ್ನ-ಸಂತರ್ಪಣೆ ಲಲಿತ ಸಹಸ್ರನಾಮ ಪಾರಾಯಣ, ಜರ್ಗುವುದು, 22ರಂದು ನವಚಂಡಿ ಹೋಮ ಪೂರ್ಣಾಹುತಿ ಡೊಳ್ಳು ಭಜನೆ, ಸಕಲ ವಾದ್ಯ ವೈಭವದೊಂದಿಗೆ  ಶ್ರೀ ದುರ್ಗಾದೇವಿ ವಿಗ್ರಹದ ಭವ್ಯ ಮೆರವಣಿಗೆ ಪ್ರಮುಖ ರಾಜಬೀದಿಗಳಲ್ಲಿ ನಡಸಲಾಗುವುದು,

ಕೊನೆಯದಾಗಿ ದಿನಾಂಕ್ 23ರಂದು ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂದು ಬೇಡಿಕೆಯ ಅಭಿಷೇಕ ಅಲಂಕಾರ ಪೂಜೆ ಸೇರಿದಂತೆ ನವಚಂಡಿ ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ಸರ್ವ ಜನಾಂಗದವರು ಭಾಗವಹಿಸಿ

ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು, ಹನುಮಂತಪ್ಪ ನಾಯಕ್ ಮಾತನಾಡಿ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ವೃತ್ತಗಳಲ್ಲಿ ವಿದ್ಯುತ್ ವಿದ್ಯುತ್ ಅಲಂಕಾರ, ತಳಿರು ತೋರಣಗಳಿಂದ ಶೃಂಗಾರ ಜರ್ಗದಿದ್ದು ಮಾಜಿ ಸಂಸದ ಹೆಚ್ ಜಿ ರಾಮುಲು, ಶಾಸಕ ಪರಣ್ಣ ಮುನವಳ್ಳಿ, ಸೇರಿದಂತೆ ಎಲ್ಲಾ ಸಮಾಜದ ಮುಖಂಡರುಗಳು ರಾಜಕೀಯ ಗಣ್ಯರು ಹಾಲಿ ಮಾಜಿ ಶಾಸಕರು ವಿಧಾನಸಭಾ ಸದಸ್ಯರು, ಸೇರಿದಂತೆ ಎಲ್ಲಾ ಸಮಾಜದ ಹಿರಿಯ ಮುಖಂಡರುಗಳು ಭಾಗವಹಿಸಲಿದ್ದು ನಾಲ್ಕು ದಿನಗಳ ಕಾಲ ಅನ್ನದಾಸೋಹ ಲಲಿತ ಸಹಸ್ರನಾಮ ಪಾರಾಯಣ ಕುಂಕುಮಾರ್ಚನೆ ಭಜನೆ ಇತ್ಯಾದಿ ಕಾರ್ಯಕ್ರಮಗಳು ತಿಳಿಸಿದರು……

error: Content is protected !!