ರಾಯಚೂರು: ಸುವರ್ಣ ಕರ್ನಾಟಕ ಎಂದರೆ ಎದ್ದು ಕಾಣುವುದೇ ನಮ್ಮ ರಾಯಚೂರು ಜಿಲ್ಲೆ ಏಕೆಂದರೆ ರಾಯಚೂರು ಜಿಲ್ಲೆ ತೀರ ಹಿಂದುಳಿದ ಜಿಲ್ಲೆಯಾಗಿದ್ದು ರಾಯಚೂರು ಜಿಲ್ಲೆಗೆ ಬರತಕ್ಕಂತಹ ಸೌಲಭ್ಯಗಳು ಬೇರೆ ಜಿಲ್ಲೆಯವರ ಪಾಲಾಗತ್ತಿದ್ದು ಏಕೆಂದರೆ ರಾಯಚೂರು ಜಿಲ್ಲೆಯಲ್ಲಿ ಸ್ವಚ್ಛತೆ ಎಂಬ ಪದ ಅಳಿಸಿ ಹೋಗಿದ್ದು ಇದು ಮುಖ್ಯ ಕಾರಣವಾಗಿದೆ ಮತ್ತು ಸಂಬಂಧಪಟ್ಟ ಎಲ್ಲ ಇಲಾಖೆಗಳಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಏಕೆಂದರೆ ನಿಷ್ಠಾವಂತ ಅಧಿಕಾರಿಗಳು ಮುಂದಕ್ಕೆ ಸಾಗಿ ಅಧಿಕಾರ ಚಲಾಯಿಸಿದರೆ ಅವರಿಗೆ ಮರುದಿನವೇ ವರ್ಗಾವಣೆ ಇದು ರಾಯಚೂರಿನ ಪದ್ಧತಿ ಯಾಗಿ ಮುಂದುವರೆದಿದೆ.

ಸಂಬಂಧಪಟ್ಟ ಇಲಾಖೆಗಳಲ್ಲಿ ಕೆಎಸ್ಆರ್ಟಿಸಿ ಬಸ್ಟ್ಯಾಂಡ್ ಮತ್ತು ಕೇಂದ್ರ ರೈಲ್ವೆ ನಿಲ್ದಾಣ ಗಳಲ್ಲಿ ಹಂದಿಗಳು ಪ್ಲಾಟ್ಫಾರಂ ಗಳ ಮೇಲೆ ಅಡ್ಡ ದಿಡ್ಡಿ ಯಾಗಿ ಓಡಾಡಿದರು ಅವುಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ ಇಂಥ ಭ್ರಷ್ಟ ಅಧಿಕಾರಿಗಳಿಗೆ ಸ್ವಚ್ಛತೆ ಎಂಬ ಪದದ ಅರ್ಥ ಗೊತ್ತಿಲ್ಲದಂತಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

error: Content is protected !!