ಗಂಗಾವತಿ :ನಗರದಲ್ಲಿ ಬಸ್ ಸ್ಟ್ಯಾಂಡ್ ಮುಂಭಾಗ ಇರುವ ಗಾರ್ಡನ್ ಒಳಗಡೆ ಮತ್ತು ಹಿಂಬದಿಯಲ್ಲಿ  ಕಸದ ರಾಶಿ ರಾಶಿಗಳು ಕಾಣುತ್ತಿವೆ ಮತ್ತು ಇದೇ ಗಾರ್ಡನ್ ಪಕ್ಕದಲ್ಲಿ ಹಿಂಬದಿಯಲ್ಲಿ ತಾಲೂಕು ಪಂಚಾಯಿತಿ ಇದೆ ಸ್ವಲ್ಪ ಮುಂದುಗಡೆ ಬಂದರೆ ಗಾರ್ಡನ್ ಪಕ್ಕದಲ್ಲಿ ನೂತನವಾಗಿ ಉದ್ಘಾಟನೆ ಆಗಿರುವ ನಗರಸಭೆ ಕಟ್ಟಡ ಇದೆ ಇಷ್ಟೆಲ್ಲಾ ಆಫೀಸ್ ಗಳಿದ್ದರೂ ಕೂಡ ಇಲ್ಲಿ ಸ್ವಚ್ಛತೆ ಮಂಗಮಾಯವಾಗಿದೆ.

ಪ್ರತಿನಿತ್ಯ ಇದೆ ಗಾರ್ಡನ್ ಸುತ್ತಮುತ್ತ ಗಾರ್ಡನ್  ಹೊರಗಡೆ ಇರುವಂತ ಕಸವನ್ನು ಗೂಡಿಸಿ ಗಾರ್ಡನ್ ಒಳಗಡೆ ಕಸ ಹಾಕಿ ಗಾರ್ಡನ್ ನನ್ನು ಕಸದ ತಿಪ್ಪಿ ಗುಂಡಿಯಾಗಿ ಮಾಡಿರುತ್ತಾರೆ.

ಈ ಗಾರ್ಡನ್ ಬಸ್ ಸ್ಟಾಂಡ್ ಗೆ ಹತ್ತಿರ ಇರುವುದರಿಂದ  ಹಳ್ಳಿಗಳಿಂದ ಬಂದಿರುವ ವಿದ್ಯಾರ್ಥಿಗಳು ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡಲಿಕ್ಕೆ ಬರುವ ಸಾರ್ವಜನಿಕರು.

ಮಧ್ಯಾಹ್ನದಲ್ಲಿ  ಗಾರ್ಡನ್ ಒಳಗಡೆ ಕುಳಿತುಕೊಂಡು ಸ್ವಲ್ಪ ವಿಶ್ರಾಂತಿ ಪಡೆಯಲಿಕ್ಕೆ ಬರುತ್ತಾರೆ ಆದರೆ ಗಾರ್ಡನ್ ಒಳಗಡೆ ಕಸದ ರಾಶಿ ಗುಡ್ಡೆಯಾಗಿರುವುದರಿಂದ ಗಾರ್ಡನ್ ಒಳಗಡೆ ಕೂಡಲಿಕ್ಕೆ ಜನರು ಭಯಪಡುತ್ತಾರೆ ಯಾಕಪ್ಪ ಜನರಿಗೆ ಭಯ ಅಂದರೆ ಗಾರ್ಡನ್ ಒಳಗಡೆ ಕಸದ ರಾಶಿ ಇರುವುದರಿಂದ ಮತ್ತು ಕಸದ ಒಳಗಡೆ ಚೋಳು ಹಾವು ಸೇರಿರಬಹುದೆಂಬ ಭಯದಿಂದ ವಿದ್ಯಾರ್ಥಿಗಳು ಸಾರ್ವಜನಿಕರು ಗಾರ್ಡನ್ ಒಳಗಡೆ ವಿಶ್ರಾಂತಿ ಪಡೆಯುವುದು ಬಿಟ್ಟು  ಬೀದಿ ಪಕ್ಕದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಅನಿವಾರ್ಯವಾಗಿದೆ.

ಇದೆ ಗಾರ್ಡನ್ ಹಿಂಬದಿಯಲ್ಲಿ  ಇರುವ ತಾಲೂಕು ಪಂಚಾಯಿತಿ  ಒಳಗಡೆಯಿಂದ ಬರುವ ಚರಂಡಿ ನೀರು ಮುಂದುಗಡೆ ಹರಿದು ಹೋಗಲಿಕ್ಕೆ ಚರಂಡಿ ಅವಸ್ಥೆ ಇಲ್ಲದಿರುವುದರಿಂದ ಚರಂಡಿ ನೀರು ನಿಂತಲ್ಲಿ ನಿಂತು ಗಬ್ಬು ದುರ್ವಾಸನೆ ಬರುತ್ತದೆ.

ಇದೇ ಗಾರ್ಡನ್ ಹಿಂದುಗಡಿರುವ ರಸ್ತೆಯು ಈ ರಸ್ತೆ ಮೂಲಕ ಪ್ರತಿನಿತ್ಯ ಜೂನಿಯರ್ ಕಾಲೇಜಿಗೆ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಇದೇ ರಸ್ತೆ ಮೂಲಕ ಶಾಲೆಗೆ ಹೋಗುತ್ತಾರೆ ಇಲ್ಲಿ ನಿಂತಿರುವಂತಹ ಚರಂಡಿ ನೀರಿನ ಗಬ್ಬುದುರ್ವಾಸನೆ ದಿಂದ ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ ಎಂಬುದು ಮಕ್ಕಳು ಮಾತಾಡಿಕೊಳ್ಳುತ್ತಾರೆ  ಮತ್ತು ಇದೇ ರಸ್ತೆಯ ಮೇಲೆ ತಾಲೂಕ ಪಂಚಾಯಿತಿ ಅಧಿಕಾರಿಗಳು ಓಡಾಡುತ್ತಾರೆ ಈ ಒಂದು  ಗಬ್ಬು ನಾರುತ್ತಿರುವ ವಾಸನೆಯು ಈ ಅಧಿಕಾರಿಗಳಿಗೆ ಮೂಗಿಗೆ ಈ ವಾಸನೆ ತಗಲುತಿಲ್ಲವೇ ಅಥವಾ ವಾಸನೆ ಬಂದರೂ ಕೂಡ ಬರದಂತೆ ಸುಮ್ಮನೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ ಅಥವಾ ನಮಗೆ ಈ ವಿಷಯ ಸಂಬಂಧ ಇಲ್ಲವೆಂದು ಸುಮ್ಮನೆ ಹೋಗುತ್ತಿರುವುದು ನೋಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್  ಮಿಷನ್ ಯೋಜನೆಗೆ ಕೋಟಿ ಕೋಟಿ ಮಂಜೂರು ಮಾಡಿದ್ದಾರೆ ಆ ಕೋಟಿ ಹಣವು ಎಲ್ಲಿ ಹೋಯಿತು ಎತ್ತ ಹೋಯಿತು ಎನ್ನುವುದೇ ಯಕ್ಷಪ್ರಶ್ನೆ ಆಗಿದೆ.
ಪೌರಾಯುಕ್ತರ  ಜೋಬಿಗೆ ಹೋಯ್ತೆ ಇಲ್ಲ ಕೆಲವು ದಲ್ಲಾಳುಗಳೋ ಜೂಬಿಗೆ ಹೋಯಿತು ಎಂದು ಕಾಣದಂತೆ ಆಗಿದೆ  ಇಂತಹ ಸ್ವಚ್ಛತೆ ಕೈಗೊಳ್ಳದ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆಯಾದರೂ ಈ ವರದಿಯನ್ನು ನೋಡಿದ ಕೂಡಲೇ ಎಚ್ಚೆತ್ತುಕೊಂಡು   ತಾಲೂಕು ಪಂಚಾಯತಿ ಅಧಿಕಾರಿ ಮತ್ತು ಪೌರಾಯುಕ್ತರ ಅಧಿಕಾರಿಗಳು ಸ್ವಚ್ಛ ಗಂಗಾವತಿಯನ್ನಾಗಿ ಮಾಡುತ್ತಾರೆ ಅಥವಾ ಹೀಗೆ ಕಸದ ತಿಪ್ಪೆ ಗುಂಡಿಯಂತೆ  ಇರುತ್ತದೆಯೋ  ಮುಂದೆ ಕಾದು ನೋಡೋಣ…..

error: Content is protected !!