ಕೊಪ್ಪಳ: ಇವರಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಪಿಎಚ್. ಡಿ ಪದವಿ ದೊರಕಿದೆ. ಇವರು ಕಡು ಬಡತನದಲ್ಲಿ ಹುಟ್ಟಿ ತಂದೆ ತಾಯಿ ಇಬ್ಬರೂ ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿದ್ದಾರೆ. ಬೆಟ್ಟಪ್ಪ ಕಟಾಪುರ ಅವರು ಕನ್ನಡ ಭಾಷೆಯಲ್ಲಿ ಕತೆ, ಕವನ, ಬರೆಯುವ ಮತ್ತು ವಾಚಿಸುವದರಲ್ಲಿ ನಿಸ್ಸೀಮರು ಆಗಿದ್ದಾರೆ.

ಇವರ ಸಾಹಿತ್ಯವನ್ನು ಗುರುತಿಸಿ ಹಲವು ಸಂಸ್ಥೆಗಳು, ಕರುನಾಡು ನಕ್ಷತ್ರ ರಾಜ್ಯ ಪ್ರಶಸ್ತ,ಕುವೆಂಪು ನುಡಿ ಸಿರಿ ರಾಜ್ಯ ಪ್ರಶಸ್ತಿ.ಕಾವ್ಯ ಭೂಷಣ ರಾಜ್ಯ ಪ್ರಶಸ್ತಿ,ಕುಮಾರವ್ಯಾಸ ರಾಜ್ಯ ಪ್ರಶಸ್ತಿ ,ಸಂಶೋಧನ ರತ್ನ ರಾಜ್ಯ ಪ್ರಶಸ್ತಿ, ಕನ್ನಡದ ಹಿರಿಮೆ ರಾಜ್ಯ ಪ್ರಶಸ್ತಿ, ಶ್ರೀ ಹಾನಗಲ್ ಗುರುಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ ಬಸವ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ.ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿಎಚ್. ಡಿ ಪದವಿ ಪಡೆದಿದ್ದರಿಂದ ಕಟಾಪುರ ಕುಟುಂಬದವರು ಮತ್ತು ಜೀರಾಳ ಗ್ರಾಮದ ಜನರು ಸಂತೋಷಗೊಂಡಿದ್ದಾರೆ.