
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ.10ರಂದು ಮತದಾನ ನಿಗದಿಯಾಗಿದೆ. ಇದಕ್ಕಾಗಿ ಎಲ್ಲಾ ಅಂತಿಮ ತಯಾರಿಯನ್ನು ಚುನಾವಣಾ ಆಯೋಗವು ಮಾಡಿದೆ. ಅಲ್ಲದೇ ಮತಗಟ್ಟೆ ಅಧಿಕಾರಿಗಳಿಗಾಗಿ ಕರ್ತವ್ಯ ಚಾರ್ಟ್ ಕೂಡ ಬಿಡುಗಡೆ ಮಾಡಿದ್ದು, ಅದರಲ್ಲಿನ ಚೆಕ್ ಲೀಸ್ಟ್ ನಂತೆಯೇ, ಕರ್ತವ್ಯ ನಿರ್ವಹಿಸುವಂತೆ ಖಡಕ್ ಸೂಚನೆ ನೀಡಿದೆ.
ಈ ಬಗ್ಗೆ ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ( Karnataka Assembly Election 2023 ) ಚುನಾವಣಾ ಆಯೋಗದಿಂದ ( Election Commission ) ಪ್ರಿಸೈಡಿಂಗ್ ಅಧಿಕಾರಿಗಳ ಚೆಕ್ ಲಿಸ್ಟ್ ಬಿಡುಗಡೆ ಮಾಡಿದೆ. ಅದರಲ್ಲಿ ಮತಗಟ್ಟೆಯ ಅಧಿಕಾರಿಗಳಿಗೆ ಬೆಳಿಗ್ಗೆ 4.15ರಿಂದಲೇ ಚುನಾವಣಾ ಕರ್ತವ್ಯದ ಕರೆಗೆ ಓಗೊಡುವಂತೆ ತಿಳಿಸಲಾಗಿದೆ.
ಹೀಗಿದೆ ಪ್ರಿಸೈಡಿಂಗ್ ಅಧಿಕಾರಿಗಳ ಚೆಕ್ ಲಿಸ್ಟ್
ಬೆಳಿಗ್ಗೆ 4.15ಕ್ಕೆ ಎದ್ದು ನಿತ್ಯ ಕರ್ಮಾದಿಗಳನ್ನು ಪೂರ್ಣಗೊಳಿಸುವುದು.
ಬೆಳಿಗ್ಗೆ 5.15ಕ್ಕೆ ಅಣಕು ಮತದಾನ( Mock Poll)ಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು.
ಬೆಳಿಗ್ಗೆ 5.30ಕ್ಕೆ ಮತಗಟ್ಟೆ ಏಜೆಂಟರಿಗಾಗಿ ಕಾಯುವುದು.
45ರಿಂದ 6.45ರವರೆಗೆ ಹಾಜರಿದ್ದ ಏಜೆಂಟರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವುದು. ನಿಯಮಾನುಸಾರ ಅಣಕು ಮತದಾನ ನಿರ್ವಹಿಸುವುದು. ಅಣಕು ಮತದಾನ ಸರ್ಟಿಫಿಕೇಟ್ ಭರ್ತಿ ಮಾಡಿ, ಹಾಜರಿದ್ದ ಏಜೆಂಟರುಗಳ ಸಹಿ ಪಡೆದು ಸಿದ್ಧಗೊಳಿಸುವುದು.
45ರಿಂದ 6.55ರವರೆಗೆ ಸಿಯು ಸ್ವಿಚ್ ಆಫ್ ಮಾಡಿ, ಎಲ್ಲಾ ಕೇಬಲ್ ಗಳನ್ನು ಬೇರ್ಪಡಿಸುವುದು. ಆ ಬಳಿಕ ಸಿಯು ರಿಸಲ್ಟ್ ಸೆಕ್ಷನ್ ಅನ್ನು ಅಡ್ರೆಸ್ ಟ್ಯಾಗ್ ಮಾಹಿಕಿ ಸೀಲ್ ಮಾಡುವುದು. VVPAT Knon ಅನ್ನು ಟ್ರಾನ್ಸ್ ಪೋರ್ಟ್ ಮೋಡ್ ಗೆ ಹಾಕಿ, ಸ್ಲೀಪ್ ಗಳನ್ನು ಹೊರ ತೆಗೆದು ಡ್ರಾಪ್ ಬಾಕ್ಸ್ ಸೀಲ್ ಮಾಡುವುದು. VVPAT Slipಗಳ ಹಿಂದೆ ಅಣಕು ಮತದಾನ ಸೀಲ್ ಹಾಕಿ, ಬ್ಲಾಕ್ ಕವರ್ ನಲ್ಲಿ ಹಾಕಿ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಇಡುವುದು.
ಬೆಳಿಗ್ಗೆ 6.55ಕ್ಕೆ ಎಲ್ಲಾ ಕೇಬಲ್ ಗಳನ್ನು ಜೋಡಿಸಿ, VVPAT Knon ಅನ್ನು ವರ್ಕಿಂಗ್ ಮೂಡ್ ಗೆ ಹಾಕುವುದು. ಆನಂತರ ಸಿಯು ಸ್ವಿಚ್ ಆನ್ ಮಾಡುವುದು. 17ಎ ರಿಜಿಸ್ಟರ್ ನಲ್ಲಿ ಸಿಯುನಲ್ಲಿ ಅಣಕು ಮತಗಳನ್ನು ಕ್ಲಿಯರ್ ಮಾಡಿ, VVPAT ಡ್ರಾಪ್ ಬಾಕ್ಸ್ ನಲ್ಲಿರುವ ಸ್ಲಿಪ್ ಗಳನ್ನು ಹೊರತೆಗೆಯಲಾಗಿದೆ ಎಂದು ಬರೆದು, ಸಹಿ ಮಾಡುವುದು. ಈ ಬಳಿಕ EVM IS READY ಎಂಬ ಪ್ರದರ್ಶನ ಖಾತರಿಪಡಿಸಿಕೊಳ್ಳುವುದು.
ಬೆಳಿಗ್ಗೆ 7ರಿಂದ ಮತದಾನ ಪ್ರಾರಂಭವಾಗಿದೆ ಎಂದು ಘೋಷಿಸಿ, ಏಜೆಂಟರುಗಳ ಸಹಿ ಪಡೆಯುವುದು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಚಲಾವಣೆಯಾದ ಮತಗಳನ್ನು ದಾಖಲಿಸುವುದು.
ಸಂಜೆ 4 ಗಂಟೆಗೆ ಮತ ಚಲಾಯಿಸಿದ PWD Voters ಮಾಹಿತಿಯನ್ನು ಬರೆದಿಟ್ಟುಕೊಳ್ಳುವುದು.
ಸಂಜೆ 5ಕ್ಕೆ ಚಲಾವಣೆಯಾದ ಮತಗಳನ್ನು ದಾಖಲಿಸುವುದು.
ಸಂಜೆ 5.50ಕ್ಕೆ ಸರದಿಯಲ್ಲಿರುವ ಮತದಾರರಿಗೆ ಕೊಡಲು ಚೀಟಿಗಳನ್ನು ಸಿದ್ಧಪಡಿಸಿಕೊಳ್ಳುವುದು. 17ಎ, ಸಿಯು ಮತ್ತು ಎಪಿಆರ್‌ಓ ಬಳಿಯಿರುವ ಮತದಾರರ ಪಟ್ಟಿಯ ಅಂಕಿಅಂಶಗಳು ತಾಳೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು.
ಸಂಜೆ 6ಗಂಟೆಗೆ ಸರದಿಯಲ್ಲಿ ಇನ್ನೂ ಮತದಾರರು ಇದ್ದರೆ ಅವರುಗಳಿಗೆ ಹಿಂದಿನಿಂದ ಕ್ರಮವಾಗಿ ಚೀಟಿಗಳನ್ನು ಕೊಡುವುದು. ಸರದಿಯಲ್ಲಿನ ಎಲ್ಲಾ ಮತದಾರರು ಮುಗಿದ ನಂತ್ರ PRO ಅವರು ಸಿಯುನಲ್ಲಿ ಕ್ಲೋಸ್ ಬಟನ್ ಒತ್ತುವುದು. ಆ ಬಳಿಕ ಮತದಾನ ಮುಕ್ತಾಯವಾಗಿದೆ ಎಂದು ಘೋಷಿಸಿ, ಏಜೆಂಟರುಗಳ ಸಹಿ ಪಡೆಯುವುದು.
ಸಂಜೆ 6.45ಕ್ಕೆ ಮಾರ್ಗಾಧಿಕಾರಿಗಳೊಂದಿಗೆ ಡಿ-ಮಸ್ಟರಿಂಗ್ ಕೇಂದ್ರದತ್ತ ತಮ್ಮ ತಂಡ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ನಿಗದಿತ ವಾಹನದಲ್ಲಿ ತೆರಳಿ, ಹೊಂದಾಣಿಕೆ ಹಾಗೂ ತಾಳ್ಮೆಯಿಂದ ಎಲ್ಲಾ ಸಾಮಗ್ರಿಗಳನ್ನು ಹಿಂದಿರುಗಿಸುವುದು.