ಗಂಗಾವತಿ:ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿ ಹಾಗೂ ಗೌರವಯುತ ಜೀವನ ನಡೆಸಬೇಕು ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಮತ್ತು ಸಂವಿಧಾನ ಉಳಿಯಬೇಕಾದರೆ ದಲಿತರಲ್ಲ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಶಿವರಾಜ್ ಪತ್ರಿಕೆ ಮುಖಾಂತರ ಮಾತನಾಡಿ.

ಜನಸಾಮಾನ್ಯರ ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿದ್ದಾಗ ಮಾತ್ರ ಸಮಾಜ ಕೂಡ ಶಾಂತಿನೆಮ್ಮದಿಯಿಂದ ಇರಲು ಸಾಧ್ಯ. ಅದರೆ ಬಿಜೆಪಿ ಆಡಳಿತದಲ್ಲಿ ಅರಾಜಕತೆ,ಅಶಾಂತಿ, ಧರ್ಮಗಳ ನಡುವೆ ದಂಗಲ್‍ಗೆ ಕೋಮ ಗಲಭೆಗಳು ಕಾರಣವಾಗುತ್ತಿದೆ. ಜನರ ಹಸಿವು, ಆರೋಗ್ಯದ ಬಗ್ಗೆ ಬಿಜೆಪಿ ಸರ್ಕಾರ ಯಾವ ಕಾರ್ಯಕ್ರಮವನ್ನು ನೀಡಲಿಲ್ಲ ಎಂದು ಕಿಡಿಕಾರಿದರು.

ರೈತರ ಪರವಾಗಿ ಯಾವುದೇ ಕಾನೂನು ತರಲು ವಿಫಲವಾಗಿದೆ ರೈತರ ಪರವಾಗಿರುವಂತಹ ಕಾನೂನಿಗೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರ ಮುಂದಾಗಿತ್ತು ಉದಾಹರಣೆ ಹೇಳಬೇಕಾದರೆ ರೈತರ ಪರವಾಗಿ ಬೇಕೆಟ್ಟಿಯಾಗಿ ಎಪಿಎಂಸಿ ಕಾಯ್ದೆ, ಎಸ್‍ಸಿಪಿ ಯಂತಹ ಕಾಯ್ದೆಗಳನ್ನು ಜಾರಿಗೆ ತಂದು, ರೈತ ವಿರೋಧಿ
ನೀತಿಗಳನ್ನು ಅನುಸರಿಸಿದೆ. ಸಂವಿಧಾನ ಹಾಗೂ
ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ
ಷರತ್ತುಬದ್ಧ ಬೆಂಬಲ ನೀಡಲಾಗುತ್ತಿದೆ.

ಎಸ್ಸಿಎಸ್ಟಿ ವರ್ಗಗಳಿಗೆ ಎಸ್‍ಸಿಪಿ, ಟಿಎಸ್‍ಪಿ ಕಾಯ್ದೆಯ
ಅನುಗುಣವಾಗಿ ರಾಜ್ಯ ಬಜೆಟ್‍ನಲ್ಲಿ ಶೇ.24.10
ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿ
ಡುವುದು. ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ
ಭರ್ತಿ ಮಾಡುವುದು. ಒಳಮೀಸಲಾತಿ ಜಾರಿ,
ಮೇಲ್ಜಾತಿಯವರಿಗೆ ನೀಡಿರುವ ಇ.ಡಬ್ಲು.ಸಿಮೀಸಲಾತಿಯನ್ನು ವಿರೋಧಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಶಿವಕುಮಾರ್ ಚಲವಾದಿ ವಾಗ್ದಾಳಿ ನಡೆಸಿದರು.

ಅದೇ ರೀತಿಯಾಗಿ ಬಿಜೆಪಿ ಸರಕಾರ ಬೆಲೆ ಏರಿಕೆ ಬಿಸಿ ಮುಟ್ಟಿಸಿ ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ. ಗೃಹಬಳಕೆಯ ಅನಿಲ ಸಿಲಿಂಡರ್ ಬೆಲೆ 1200 ರೂ.ಗೆ ಏರಿಕೆಯಾಗಿದ್ದು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಜನರ ಬದುಕನ್ನು ದುಸ್ತರ ಮಾಡಿರುವ ಭ್ರಷ್ಟ ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು ಇನ್ನು ಜೆಡಿಎಸ್ ಪಕ್ಷ 123 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವುದು ಕನಸಿನ ಮಾತು. ಹೀಗಾಗಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡಿ ಎಂದು ಪತ್ರಿಕೆ ಮುಖಾಂತರ ಶಿವರಾಜ್ ಚಲವಾದಿ ಹೇಳಿದ್ದಾರೆ

error: Content is protected !!