ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ ಕೊಪ್ಪಳ ಜಿಲ್ಲಾಧಿಕಾರಿ  ಮತ್ತೆ ಕೋರ್ಟ್ ಮೆಟ್ಟಿಲೇರಿದೆ ವಿದ್ಯಾದಾಸ

ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕೊಪ್ಪಳ ಜಿಲ್ಲಾಡಳಿತ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಅಂಜನಾದ್ರಿ ಬೆಟ್ಟದ ಪದಚ್ಯುತ ಪೀಠಾಧಿಪತಿ ವಿದ್ಯಾದಾಸ ಹೇಳಿದರು

ಗಂಗಾವತಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾದಾಸ 2019ರಲ್ಲಿ ಉಚ್ಛ ನ್ಯಾಯಾಲಯ ಬೆಳಿಗ್ಗೆ ಮತ್ತು ಸಂಜೆ ಅಂಜನಾದ್ರಿ ಬೆಟ್ಟದ ದೇಗುಲದಲ್ಲಿ ಪೂಜಾಗೆ ಅವಕಾಶ ನೀಡುವಂತೆ ಆದೇಶ ನೀಡಿತ್ತು ಆದರೆ ಕೊಪ್ಪಳ ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿ ಕೆಲ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ನನ್ನ ಧಾರ್ಮಿಕ ಹಕ್ಕನ್ನು ಮೊಟಕು ಮಾಡುತ್ತಿದೆ ಎಂದು ಆರೋಪಿಸಿದರು

ಆರು ತಿಂಗಳ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಿ ಅಂಜನಾದ್ರಿ ಗೆ ಆಗಮಿಸುವಂತೆ ಮನವಿ ಮಾಡಿದ್ದೆ ಈ ಹಿನ್ನೆಲೆ ರಾಜ್ಯಪಾಲರು ಆಗಮಿಸಿದ್ದರು.ಸ್ವತ ರಾಜಭವನದಿಂದ ನನಗೆ ಕರೆ ಮಾಡಿ ಪೂಜೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು, ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ.ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ಸೆಳೆಯಲು ಯತ್ನಿಸುವ ವೇಳೆ ನನ್ನನು ಕರೆದುಕೊಂಡು ಹೋಗಿ  ಕೆಳಗೆ ತಳ್ಳಿದರು

: ಈ ಹಿಂದೆಯೂ ನ್ಯಾಯಾಂಗ ನಿಂದನೆ ಪ್ರಕರಣ ನಡೆದಾಗ ಜಿಲ್ಲಾಡಳಿತ ವಿರುದ್ಧ ದೂರು ದಾಖಲಿಸಿದ್ದೆ.ಅಂದಿನ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅಲೆದಾಡಿ ತಪ್ಪೊಪ್ಪಿಗೆ ಬರೆದುಕೊಟ್ಟರು.ನನ್ನು ಮತ್ತೆ ದೇವಸ್ಥಾನಕ್ಕೆ ಪೂಜಾ ಮಾಡಲಿಕ್ಕೆ ಹೋದರೆ  ಅಲ್ಲಿರುವಂತಹ ಕೆಲವು ವ್ಯಕ್ತಿಗಳು ಜಿಲ್ಲಾಡಳಿತಕ್ಕೆ ಕರೆ ಮಾಡಿ ಮಾಹಿತಿ ಕೊಡುತ್ತಾರೆ ಇವರನ್ನು ದೇವಸ್ಥಾನದ ಒಳಗಡೆ ಬಿಟ್ಟುಕೊಳ್ಳಬಾರದೆಂಬ

ಜಿಲ್ಲಾಧಿಕಾರಿಯ ಸಂದೇಶ ನೀಡುತ್ತಾರೆ ಮತ್ತು ಅದೇ ಜಿಲ್ಲಾಡಳಿತ ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ತಿರುಗ ಅದೇ ತಪ್ಪು ಮಾಡುತ್ತದೆ ಎಂದು ಬಹಳ ನೋವಿನಿಂದ ಹೇಳಿದರು ಮತ್ತು ಅಂಜನಾದ್ರಿ ದೇವಸ್ಥಾನದ ಒಳಗಡೆ ಪೂಜೆ ಮಾಡಲಿಕ್ಕೆ ನನ್ನನ್ನು ಬಿಡಿ ಎಂದು ಜಿಲ್ಲಾಡಳಿತಕ್ಕೆ ಇವರು ಮನವಿ ಮಾಡಿಕೊಂಡರು


ಮತ್ತು ನನ್ನನ್ನು ಪೂಜೆ ಮಾಡಲಿಕ್ಕೆ ಬಿಡದಿದ್ದರೆ ನಾನು ಮತ್ತೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು…

error: Content is protected !!